• Home
  • »
  • News
  • »
  • kalburgi
  • »
  • Kalaburagi Rose: ಕಲಬುರಗಿ ಗುಲಾಬಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು! ದಿನಕ್ಕೆ 3 ಸಾವಿರ ಆದಾಯ!

Kalaburagi Rose: ಕಲಬುರಗಿ ಗುಲಾಬಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು! ದಿನಕ್ಕೆ 3 ಸಾವಿರ ಆದಾಯ!

ಇಲ್ಲಿ ನೋಡಿ ವಿಡಿಯೋ

"ಇಲ್ಲಿ ನೋಡಿ ವಿಡಿಯೋ"

ಒಂದೂವರೆ ಎಕರೆಯಲ್ಲಿ ನರೇಗಾ ಸೌಲಭ್ಯಗಳನ್ನು ಪಡೆದು ವಿವಿಧ ತಳಿಯ ಗುಲಾಬಿ, ಬಿಜಲಿ, ಚೆಂಡು ಹೂ ಹಾಗೂ ದುಬಾರಿ ಬೆಲೆಯ ಮಗ್ಗ್ ಹೀಗೆ ವೆರೈಟಿ ಹೂಗಳನ್ನು ಬೆಳೆಸಿದ್ರು. ಈಗ ನೋಡಿ, ಕೈತುಂಬಾ ಸಂಪಾದನೆ ಮಾಡ್ತಿದ್ದಾರೆ!

  • News18 Kannada
  • Last Updated :
  • Gulbarga, India
  • Share this:

    ಗುಲಾಬಿ, ಬಿಜಲಿ, ಚೆಂಡ..ಆಹಾ! ಹೀಗೆ ಜಮೀನಿಡೀ ಹೂಗಳದ್ದೇ ಕಾರುಬಾರು. ಚೆಂದವಾಗಿ ಅರಳಿ ನಳನಳಿಸುತ್ತಿರೋ ಈ ಪುಷ್ಪಗಳ ಸೌಂದರ್ಯವೇ ಆಕರ್ಷಣೀಯ. ಈ ಹೂಗಳನ್ನೇ ನಂಬಿ ಇಲ್ಲೊಬ್ಬ ರೈತ (Farmers Success Story) ಬದುಕು ಕಟ್ಕೊಂಡಿದ್ದಾರೆ. ದಿನಕ್ಕೆ ಎರಡರಿಂದ ಮೂರು ಸಾವಿರ ಆದಾಯವನ್ನ ಜೇಬಿಗಿಳಿಸುತ್ತಿದ್ದಾರೆ. ಹೀಗೆ ಗುಲಾಬಿ ಪುಷ್ಪಕೃಷಿ (Rose Farming) ನಡೆಸಿ ಯಶಸ್ವಿಯಾದ ಈ ರೈತರ ಹೆಸರು ಹನುಮಂತ ರೆಡ್ಡಿ ಅಂತ. ಕಲಬುರ್ಗಿ ಜಿಲ್ಲೆಗೆ (Kalaburagi News) ಕಮಲಾಪುರ ತಾಲೂಕಿನ ದಿನ್ಸಿ ಗ್ರಾಮದವರು. ಮೂಲತ ಚಾಲಕರಾಗಿದ್ದ ಹನುಮಂತ ರೆಡ್ಡಿಯವ್ರು ಓದಿದ್ದು ಕೇವಲ 10ನೇ ತರಗತಿ ಮಾತ್ರ.


    ಎಷ್ಟೇ ದುಡಿದರೂ ಸಹ ಸಂಸಾರ ನಿರ್ವಹಣೆ ಮಾಡಲಾಗದೆ ಬೇಸತ್ತು ಹೋಗಿದ್ದವರಿಗೆ ಏನು ಮಾಡೋದು ಎಂದು ಯೋಚನೆ ಮಾಡ್ದಾಗ ಹೊಳೆದಿದ್ದೇ ಈ ಪುಷ್ಪ ಕೃಷಿ. ಮತ್ತೇಕೆ ತಡ ಅಂತ ನರೇಗಾ ಯೋಜನೆಯ ಸಹಾಯದಡಿ ಪುಷ್ಪಕೃಷಿಗೆ ಆರಂಭಿಸಿಯೇಬಿಟ್ರು.


    ಒಂದೂವರೆ ಎಕರೆಯಲ್ಲಿ ನರೇಗಾ ಸೌಲಭ್ಯಗಳನ್ನು ಪಡೆದು ವಿವಿಧ ತಳಿಯ ಗುಲಾಬಿ, ಬಿಜಲಿ, ಚೆಂಡು ಹೂ ಹಾಗೂ ದುಬಾರಿ ಬೆಲೆಯ ಮಗ್ಗ್ ಹೀಗೆ ವೆರೈಟಿ ಹೂಗಳನ್ನು ಬೆಳೆಸಿದ್ರು. ಈಗ ನೋಡಿ, ಕೈತುಂಬಾ ಸಂಪಾದನೆ ಮಾಡ್ತಿದ್ದಾರೆ!


    ಇದನ್ನೂ ಓದಿ: Kalaburagi: ಮಹಾನಗರ ಪಾಲಿಕೆ ಸದಸ್ಯರ ಆಲೂಬಾತ್ ಹೋಟೆಲ್!


    ಹನುಮಂತ ರೆಡ್ಡಿಯವ್ರು ಸೀಸನ್ಗೆ ತಕ್ಕಂತೆ ಹೂವುಗಳನ್ನ ಬೆಳೆಯೋದು ಅವ್ರ ಫ್ಲವರ್ ಬ್ಯುಸಿನೆಸ್ನ ಇನ್ನೊಂದು ಸಕ್ಸಸ್ ಸೀಕ್ರೇಟ್. ತಾವು ಬೆಳೆದ ಹೂಗಳನ್ನು ಇವರು ಕಮಲಾಪುರ, ಕಲ್ಬುರ್ಗಿ ಹೀಗೆ ವಿವಿದೆಡೆ ಸಾಗಿಸುತ್ತಾರೆ. ಕೆಜಿಗೆ 100 ರಿಂದ 120 ರೂಪಾಯಿಗೆ ಗುಲಾಬಿ ಹೂಗಳನ್ನ ಪ್ರತಿನಿತ್ಯವೂ ಮಾರಾಟ ಮಾಡ್ತಾರೆ. ಒಟ್ಟಾರೆ ಪ್ರತಿದಿನ 2,000 ದಿಂದ 3,000 ರೂಪಾಯಿವರೆಗೆ ಸಂಪಾದನೆ ಮಾಡುವ ಮೂಲಕ ಸೈ ಎನಿಸಿಕೊಂಡಿದ್ದಾರೆ.


    ಇದನ್ನೂ ಓದಿ: Banana Farming: ಕಲಬುರಗಿ ಬಾಳೆ ಇರಾಕ್​ಗೆ ರಫ್ತು! 20 ಲಕ್ಷ ಆದಾಯ ಗಳಿಸಿದ ರೈತ


    ಇಷ್ಟು ಮಾತ್ರವಲ್ಲ, ಹನುಮಂತ ರೆಡ್ಡಿಯವ್ರು ಹೂವಿನ ಕೃಷಿಯ ಜೊತೆಗೆ ಮೂರು ಎಕರೆ ಪ್ರದೇಶದಲ್ಲಿ ರೇಷ್ಮೆ ಬೆಳೆದು ಆದಾಯ ದುಪ್ಪಟ್ಟು ಮಾಡಿಕೊಂಡಿದ್ದಾರೆ. ಒಟ್ಟಾರೆ ಕಲಬುರಗಿಯ ಕೃಷಿ ಸಮುದಾಯಕ್ಕೆ ಮಾದರಿಯಾಗಿದ್ದಾರೆ.


    ವರದಿ: ಶ್ರೀಕಾಂತ ಬಿರಾಳ, ಕಲಬುರಗಿ

    Published by:ಗುರುಗಣೇಶ ಡಬ್ಗುಳಿ
    First published: