• Home
  • »
  • News
  • »
  • kalburgi
  • »
  • Positive Story: ಕುಷ್ಠರೋಗಿಗಳಿಗೆ ಈ ದಂಪತಿಯೇ ಆಪತ್ಬಾಂಧವರು; ಹನಮಂತ-ಬಸಮ್ಮ ದಂಪತಿಯ ಕಥೆ ಕೇಳಿ

Positive Story: ಕುಷ್ಠರೋಗಿಗಳಿಗೆ ಈ ದಂಪತಿಯೇ ಆಪತ್ಬಾಂಧವರು; ಹನಮಂತ-ಬಸಮ್ಮ ದಂಪತಿಯ ಕಥೆ ಕೇಳಿ

ಹನಮಂತ ಮತ್ತು ಬಸಮ್ಮ ದಂಪತಿ

ಹನಮಂತ ಮತ್ತು ಬಸಮ್ಮ ದಂಪತಿ

ಇದುವರೆಗೂ 40ಕ್ಕೂ ಹೆಚ್ಚು ಹೆರಿಗೆಗಳನ್ನು ಮಾಡಿಸಿರೋ ಬಸಮ್ಮ ಮತ್ತು ಹನಮಂತ ದಂಪತಿಯೇ ತಮ್ಮ ಪಾಲಿನ ದೇವರು ಅಂತಾ ಸಂತ್ರಸ್ತರು ಭಾವುಕರಾಗ್ತಾರೆ.

  • News18 Kannada
  • Last Updated :
  • Gulbarga, India
  • Share this:

    ಕಲಬುರಗಿ: ಸಹಿಸಲಾಗದ ವೇದನೆ, ನಡೆಯಲಾಗದ ಪರಿಸ್ಥಿತಿ. ಮನೆ ಮಂದಿಗೇ ಬೇಡವಾದ ಹಿರಿಜೀವಗಳು. ಆದ್ರೆ ಹುಟ್ಟಿಸಿದ ದೇವರೇ ಹುಲ್ಲು ಮೇಯಿಸ್ತಾನೆ ಅನ್ನೋ ಹಾಗೆ ಅವರೆಲ್ಲರ ಪಾಲಿಗೂ ಆಪತ್ಬಾಂಧವರೇ (Saviours Of Leprosy Patients) ಈ ಹನಮಂತ ಮತ್ತು ಬಸಮ್ಮ ದಂಪತಿ. ಇವರೆಲ್ಲರಿಗೂ ಎದುರಾಗಿರೋ ಸಮಸ್ಯೆಯೇ ಕುಷ್ಠರೋಗ. ಕುಷ್ಠರೋಗಿಗಳ ಆರೈಕೆ ಮಾಡುವ ಕಲಬುರಗಿಯ (Kalaburagi News) ಹನಮಂತ ಮತ್ತು ಬಸಮ್ಮ ದಂಪತಿ (Hanamantha And Basamma Couple) ಮಹಾಕಾರ್ಯಕ್ಕೆ ಮುಂದಾಗಿದ್ದಾರೆ. ಕಲಬುರಗಿಯ ಮಹಾತ್ಮ ಗಾಂಧಿ ಕುಷ್ಠರೋಗ ಕಾಲೋನಿಗೆ ಈ ದಂಪತಿಗಳೇ ಮದರ್ ಥೆರೇಸಾರಿದ್ದಂತೆ.


    ಕುಷ್ಠರೋಗಿಗಳ ಆರೈಕೆ ಮಾಡುವ ಇವರ ನಿಸ್ವಾರ್ಥ ಸೇವೆ ನೋಡ್ತಿದ್ರೆ ನಿಜಕ್ಕೂ ಮನಸ್ಸು ತುಂಬಿ ಬರುತ್ತೆ. ಈ ದಂಪತಿ ಕಳೆದ ಮೂವತ್ತು ವರ್ಷಗಳಿಂದ ಕುಷ್ಠರೋಗಿಗಳ ಸೇವೆ ಮಾಡ್ತಿದ್ದಾರೆ. ಹನಮಂತ ಪುರುಷ ರೋಗಿಗಳ ಗಾಯಗಳಿಗೆ ಚಿಕಿತ್ಸೆ ನೀಡಿ, ಅವರ ಸಮಸ್ಯೆಗಳಿ ಸ್ಪಂದಿಸಿದ್ರೆ, ಅವರ ಪತ್ನಿ ಬಸಮ್ಮ ಮಹಿಳೆಯರ ಮಹಾತಾಯಿ ಆಗಿದ್ದಾರೆ. ಕುಷ್ಠರೋಗಿ ಮಹಿಳೆಯರ ಹೆರಿಗೆ ಸೇರಿದಂತೆ ಅವರ ಬೇಕು ಬೇಡಗಳನ್ನು ಈಡೇರಿಸುವ ಕೆಲಸ ಮಾಡ್ತಿದ್ದಾರೆ. ಈ ದಂಪತಿಗಳೇ ಕಲಬುರಗಿಯ ಕುಷ್ಠರೋಗಿಗಳಿಗೆ ತಂದೆ, ತಾಯಿ ಎಲ್ಲವೂ ಆಗಿದ್ದಾರೆ.


    ಪಾಲಕರಿಗೂ ಆಗಿತ್ತು ಆರೋಗ್ಯ ಸಮಸ್ಯೆ
    ಕಲಬುರಗಿಯ ಹನಮಂತ ಅವ್ರ ತಂದೆ, ತಾಯಿಯೂ ಕೂಡ ಕುಷ್ಠರೋಗದಿಂದ ಬಳಲುತ್ತಿದ್ರಂತೆ. ಆದ್ರೆ ಅವ್ರಿಗೆ ಸರಿಯಾಗಿ ಚಿಕಿತ್ಸೆ ಸಿಕ್ಕಿರ್ಲಿಲ್ಲ. ಆಸ್ಪತ್ರೆಗೆ ತೆಗೆದುಕೊಂಡು ಹೋದ್ರೂ ಸಮರ್ಪಕ ಚಿಕಿತ್ಸೆ ದೊರೆತಿರ್ಲಿಲ್ಲ. ಇದರಿಂದ ಬೇಸತ್ತ ಹನಮಂತ ತಮ್ಮ ತಂದೆ-ತಾಯಿಗೆ ತಾವೇ ಚಿಕಿತ್ಸೆ ನೀಡೋಕೆ ಶುರುಮಾಡಿದ್ರು. ತಮ್ಮ ಪಾಲಕರ ಗಾಯಕ್ಕೆ ಔಷಧಿ ಹಚ್ಚೋದು, ಪಟ್ಟಿ ಕಟ್ಟೋದು ಸೇರಿದಂತೆ ಪ್ರತಿಯೊಂದನ್ನು ತಾವೇ ಮಾಡ್ತಿದ್ರು. ಇದೇ ಮುಂದೆ ಇತರ ಕುಷ್ಠರೋಗಿಗಳಿಗೆ ಚಿಕಿತ್ಸೆ ಕೊಡೋಕೂ ಪ್ರೇರಣೆಯಾಯ್ತು.


    ಚಿಕ್ಕ ಆಸ್ಪತ್ರೆಯನ್ನೇ ಕಟ್ಟಿದರು!
    ಹನಮಂತನವರು ನೂರಾರು ಕುಷ್ಠರೋಗಿಗಳಿರೋ ಕಾಲೋನಿಯಲ್ಲಿ ಸಣ್ಣದೊಂದು ಆಸ್ಪತ್ರೆ ಕಟ್ಟಿದ್ದಾರೆ. ಅಲ್ಲಿಯೇ ಅವರ ಗಾಯಗಳಿಗೆ ಔಷಧಿ ಹಚ್ಚಿ ಪಟ್ಟಿ ಕಟ್ತಾರೆ. ಸ್ವಂತ ತಂದೆ-ತಾಯಯಂತೆಯೇ ಎಲ್ರನ್ನೂ ನೋಡಿಕೊಳ್ತಿದ್ದಾರೆ.


    ಕುಷ್ಠರೋಗಿ ಮಹಿಳೆಯರ ಹೆರಿಗೆ ಮಾಡಿಸುವ ಬಸಮ್ಮ
    ಕುಷ್ಠರೋಗಿ ಮಹಿಳೆಯರು ಹೆರಿಗೆ ಸಂದರ್ಭದಲ್ಲಿ ಸಾಕಷ್ಟು ತೊಂದರೆ ಅನುಭವಿಸುತ್ತಿದ್ರು ಯಾಕೆಂದ್ರೆ ಆಸ್ಪತ್ರೆಗೆ ಹೋದ್ರೆ ಅವರನ್ನು ಸರಿಯಾಗಿ ನೋಡಿಕೊಳ್ಳುತ್ತಿರ್ಲಿಲ್ಲ. ಇದನ್ನು ಕಣ್ಣಾರೆ ಕಂಡ ಹನಮಂತ ಅವರ ಪತ್ನಿ ಬಸಮ್ಮ ಅತ್ತೆಯಿಂದ ಬಳುವಳಿಯಾಗಿ ಬಂದಿದ್ದ ಹೆರಿಗೆ ಮಾಡೋ ಕಾಯಕವನ್ನು ಇಲ್ಲಿ ಪ್ರಯೋಗ ಶುರುಮಾಡಿದ್ರು. ಇದುವರೆಗೂ 40ಕ್ಕೂ ಹೆಚ್ಚು ಹೆರಿಗೆಗಳನ್ನು ಮಾಡಿಸಿರೋ ಬಸಮ್ಮ ಮತ್ತು ಹನಮಂತ ದಂಪತಿಯೇ ತಮ್ಮ ಪಾಲಿನ ದೇವರು ಅಂತಾ ಸಂತ್ರಸ್ತರು ಭಾವುಕರಾಗ್ತಾರೆ.


    ಇದನ್ನೂ ಓದಿ: Kalaburagi Fair: ಭಕ್ತಿಯ ಶಕ್ತಿಗೆ ಸರಪಳಿಯೇ ತುಂಡು ತುಂಡಾಯ್ತು! ಇದು ಕಲಬುರಗಿ ವೀರಭದ್ರೇಶ್ವರ ರಥೋತ್ಸವದ ಝಲಕ್


    ಕೇಂದ್ರ ಸರ್ಕಾರದಿಂದ ರಾಷ್ಟ್ರ ಪ್ರಶಸ್ತಿ
    ಸದ್ಯ ಕಲಬುರಗಿ ನಗರದ ಮಹಾತ್ಮಗಾಂಧಿ ಕುಷ್ಠರೋಗ ಕಾಲೋನಿಯಲ್ಲಿ ಇನ್ನೂರಕ್ಕೂ ಹೆಚ್ಚು ಜನ ಕುಷ್ಠರೋಗಿಗಳು ಇದ್ದಾರೆ. ಅವರ ಅವಲಂಬಿತರು ಸೇರಿ ಒಟ್ಟು ಮೂನ್ನೂರಕ್ಕೂ ಹೆಚ್ಚು ಜನರು ವಾಸ ಮಾಡ್ತಿದ್ದಾರೆ. ಈ ದಂಪತಿಗಳು ಮಾಡ್ತಿರೋ ಕುಷ್ಠರೋಗಿಗಳ ಸೇವೆಗೆ ಕೇಂದ್ರ ಸರ್ಕಾರ ರಾಷ್ಟ್ರ ಪ್ರಶಸ್ತಿ ನೀಡಿ ಗೌರವಿಸಿದೆ.


    ಇದನ್ನೂ ಓದಿ: Kalaburagi: ಸರ್ಕಾರಿ ಶಾಲೆ ಕಟ್ಟಲು ಜೋಳಿಗೆ ಹಿಡಿದ ಸ್ವಾಮೀಜಿ; ಸಂಗ್ರಹವಾಯ್ತು 40 ಲಕ್ಷ!


    ನಿಜಕ್ಕೂ ಇವರೇ ನೋಡಿ ಮದರ್ ಥೆರೇಸಾ
    ಸ್ವತ: ಅಂದಿನ ರಾಷ್ಟ್ರಪತಿ ಪ್ರತಿಭಾಸಿಂಗ್ ಪಾಟೀಲ್ ಅವರೇ ಪ್ರಶಸ್ತಿ ನೀಡಿ ಗೌರವಿಸಿ, ಇವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹೀಗೆ ಹನಮಂತ ಮತ್ತು ಬಸಮ್ಮ ದಂಪತಿ ಈ ಕಾಲದ ಮದರ್ ಥೆರೇಸಾ ಆಗಿ ಮಾಡ್ತಿರೋ ಕಾಯಕ ನಿಜಕ್ಕೂ ಶ್ಲಾಘನೀಯ ಅಂತಿದೆ ಕಲಬುರಗಿಯ ಜನತೆ.


    ವರದಿ: ಶ್ರೀಕಾಂತ ಬಿರಾಳ, ಕಲಬುರಗಿ

    Published by:ಗುರುಗಣೇಶ ಡಬ್ಗುಳಿ
    First published: