• Home
  • »
  • News
  • »
  • kalburgi
  • »
  • Pink Guava: ಪಿಂಕ್ ಪೇರಳೆ ಬೆಳೆದು ದಿನಕ್ಕೆ 2 ಸಾವಿರ ಆದಾಯ!

Pink Guava: ಪಿಂಕ್ ಪೇರಳೆ ಬೆಳೆದು ದಿನಕ್ಕೆ 2 ಸಾವಿರ ಆದಾಯ!

ಇಲ್ಲಿ ನೋಡಿ ವಿಡಿಯೋ

"ಇಲ್ಲಿ ನೋಡಿ ವಿಡಿಯೋ"

ಯಾರ ಸಹಾಯವನ್ನೂ ಪಡೆಯದೆ ಇವರಿಬ್ಬರೇ ಪಿಂಕ್ ಪೇರಳೆ ಹಣ್ಣು ಬೆಳೆದು, ತಾವೆ ಹಣ್ಣು ಕಿತ್ತು ಜಮೀನಿನ ಬಳಿಯ ಹೈವೆಯಲ್ಲಿ ಮಾರಾಟ ಮಾಡ್ತಾರೆ ಪ್ರತಿದಿನ 2000 ರೂಪಾಯಿವರೆಗೆ ಆದಾಯ ಗಳಿಸ್ತಾರೆ.

  • News18 Kannada
  • Last Updated :
  • Gulbarga, India
  • Share this:

    ಪೇರಳೆ ಹಣ್ಣಿನಿಂದ ತುಂಬಿ ತುಳುಕುತ್ತಿರೋ ಜಮೀನು, ಫಸಲು ಬಂದ ಖುಷಿಯಲ್ಲಿ ಹಣ್ಣು ಕೀಳುತ್ತಿರೋ ದಂಪತಿ. ಇದು ಪಿಂಕ್ ಪೇರಳೆ (Pink Guava Farming) ಬೆಳೆದು ಸಕ್ಸಸ್ ಆದ ರೈತನ ಕಥೆ. ಬಿಸಿಲನಗರಿಯಲ್ಲೂ ಪೇರಲೆ ಬೆಳೆದು ಕೈ ತುಂಬಾ ಆದಾಯಗಳಿಸ್ತಿರೋ (Success Story) ಯಶೋಗಾಥೆ. ಅಂದಹಾಗೆ ಈ ಸ್ಟೋರಿ‌ ಹೀರೋ ನಿಜಲಿಂಗಪ್ಪ ಅಂತ. ಕಲಬುರಗಿಯ (Kalaburagi News) ಕಮಲಾಪುರ ತಾಲೂಕಿನ ಮಹಾಗಾಂವ್ ನಿವಾಸಿ. ಈ ದಂಪತಿ ಹಿಂದೆ ಟೆಂಟ್ ಹೌಸ್ ನಡೆಸಿಕೊಂಡು ಹೋಗುತ್ತಿದ್ರು. ಆದ್ರೆ ಕೃಷಿ (Agriculture Success Story) ಮಾಡ್ಬೇಕು ಅಂತ ನರೇಗಾ ಯೋಜನೆ ಸಹಾಯ ಪಡೆದು ತಮ್ಮ ಎರಡೂವರೆ ಎಕರೆ ಜಮೀನಿನಲ್ಲಿ ಪೇರಳೆ ಹಣ್ಣಿನ ಕೃಷಿ (Pink Guava Agriculture) ಶುರು ಮಾಡಿದ್ರು. ಈಗ ಕೈ ತುಂಬಾ ಸಂಪಾದನೆ ಮಾಡ್ತಿದ್ದಾರೆ.


    ಪಿಂಕ್ ಪೇರಳೆ ಹಣ್ಣಿನ ಕೃಷಿಗೆ ಇವರ ಪತ್ನಿಯ ಸಾಥ್ ಹೆಚ್ಚಿನ ಫಸಲು ಪಡೆಯೋಕೆ ಕಾರಣವಾಗಿದೆ. ಯಾರ ಸಹಾಯವನ್ನೂ ಪಡೆಯದೆ ಇವರಿಬ್ಬರೇ ಪಿಂಕ್ ಪೇರಳೆ ಹಣ್ಣು ಬೆಳೆದು, ತಾವೆ ಹಣ್ಣು ಕಿತ್ತು ಜಮೀನಿನ ಬಳಿಯ ಹೈವೆಯಲ್ಲಿ ಮಾರಾಟ ಮಾಡ್ತಾರೆ ಪ್ರತಿದಿನ 2000 ರೂಪಾಯಿವರೆಗೆ ಆದಾಯ ಗಳಿಸ್ತಾರೆ.




    ಇದನ್ನೂ ಓದಿ: Kalaburagi: ಕಣ್ಣಿಗೆ ಕಾಣದ ಹಾವು 600 ಜನರಿಗೆ ಕಚ್ಚಿದೆಯಂತೆ! ಕಲಬುರಗಿಯ ಈ ಗ್ರಾಮದಲ್ಲಿ ತ್ರಿಶಂಕು ಸ್ಥಿತಿ


    ತೈವಾನ್ ಪಿಂಕ್ ತಳಿಯ 750 ಗಿಡ ನಾಟಿ
    ನಿಜಲಿಂಗಪ್ಪನವ್ರು ಮೊದಲು ನಿಂಬೆ ಬೆಳೆದು ಕೈಸುಟ್ಟುಕೊಂಡಿದ್ರು. ಆಮೇಲೆ ಪೇರಳೆಗೆ ಕೈಹಾಕಿದ್ರು. ಹೈದ್ರಾಬಾದ್​ನಿಂದ ತೈವಾನ್ ಪಿಂಕ್ ತಳಿಯ 750 ಗಿಡಗಳನ್ನು ತಂದು ನಾಟಿ ಮಾಡಿದ್ರು. ಇದೀಗ ಈ ಗಿಡಗಳೆಲ್ಲ ಹಣ್ಣುಗಳನ್ನು ನೀಡುತ್ತಿದ್ದು, ನಿಜಲಿಂಗಪ್ಪರ ಬದುಕಿಗೂ ದಾರಿಯಾಗಿದೆ.


    ಇದನ್ನೂ ಓದಿ: Kalaburagi Rose: ಕಲಬುರಗಿ ಗುಲಾಬಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು! ದಿನಕ್ಕೆ 3 ಸಾವಿರ ಆದಾಯ!


    ಪೇರಳೆ ಹಣ್ಣಿನ ಗಿಡಗಳಲ್ಲಿ ಕೊಳವೆ ಬಾವಿಯಿಂದ ಹನಿ ನೀರಾವಾರಿ ಮೂಲಕ ನೀರುಣಿಸ್ತಾರೆ. ಮಾರ್ಕೆಟ್‌ಗೆ ಸಾಗಿಸೋ ಬದ್ಲು ಜಮೀನು ಪಕ್ಕದ ಹೆದ್ದಾರಿಲೇ ಸ್ವಂತ ಕುಳಿತು ಮಾರಾಟ ಮಾಡ್ತಾರೆ. ಪಿಂಕ್ ಪೇರಳೆ ಬೆಳೆದು ತಾವೇ ಮಾರಿ ಸುತ್ತಮುತ್ತಲ ಊರಲ್ಲಿ ಹೀರೋ ಅನಿಸಿಕೊಂಡಿದ್ದಾರೆ ಈ ದಂಪತಿಗೆ ನಾವೂ ಒಂದು ಶುಭಾಶಯ ಹೇಳೋಣ ಅಲ್ವೇ.


    ವರದಿ: ಶ್ರೀಕಾಂತ್ ಬಿರಾಳ, ಕಲಬುರಗಿ

    Published by:ಗುರುಗಣೇಶ ಡಬ್ಗುಳಿ
    First published: