• Home
  • »
  • News
  • »
  • kalburgi
  • »
  • Kalaburagi Rangoli: ರಸ್ತೆಬದಿ ರಂಗೋಲಿ! ಕಲಬುರಗಿ ಫುಲ್ ಕ್ಲೀನ್!

Kalaburagi Rangoli: ರಸ್ತೆಬದಿ ರಂಗೋಲಿ! ಕಲಬುರಗಿ ಫುಲ್ ಕ್ಲೀನ್!

ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಬಿಸಿಲೂರು ಕಲಬುರಗಿಯಲ್ಲಿ 8 ಲಕ್ಷ ಜನ ವಾಸವಿದ್ದಾರೆ. ಕಲಬುರಗಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 55 ವಾರ್ಡ್‌ಗಳಿದ್ದು ಈ ರಂಗೋಲಿ ಐಡಿಯಾ ಕ್ಲಿಕ್ ಆಗ್ತಿದೆ.

  • Share this:

    ಕಲಬುರಗಿ: ಅರೆ! ಇದೇನಿದು ರಸ್ತೆಬದಿಯಲ್ಲೆಲ್ಲ ರಂಗೋಲಿ! ಮೊನ್ನೆ ತಾನೇ ಕಸದಿಂದ್ಲೇ ತುಂಬಿ‌ ತುಳುಕಾಡುತ್ತಿದ್ದ ಜಾಗ್ದಲ್ಲಿ ಇಂದು ಫಳಫಳ ಹೊಳೆಯೋ ಚಂದದ ರಂಗೋಲಿ! ಇದೇನು ಮ್ಯಾಜಿಕ್ ಅಂದ್ಕೊಂಡ್ರಾ? ನೀವು ಕಲಬುರಗಿಗೇನಾದ್ರೂ ಹೋದ್ರೆ ರಸ್ತೆಬದಿ ಜಾಗಗಳನ್ನ ನೋಡಿ‌ ಆಶ್ಚರ್ಯ ಆಗೋದಂತೂ ಖರೆ. ಕಲಬುರಗಿ (Kalaburagi) ಮಹಾನಗರ ಪಾಲಿಕೆ ಎಷ್ಟೇ ಜಾಗೃತಿ ಮೂಡಿಸಿ ಮನೆ ಬಾಗಿಲಿಗೆ ವಾಹನಗಳನ್ನು ಕಳಿಸಿದ್ರೂ ರಸ್ತೆಬದಿಯ ಖಾಲಿ ಜಾಗದಲ್ಲಿ ಕಸ ಹಾಕೋದು ನಿಂತಿರ್ಲಿಲ್ಲ. ಇದರಿಂದ ಹೈರಾಣಾಗಿದ್ದ ಮಹಾನಗರ ಪಾಲಿಕೆ (Kalaburagi Corporation) ಇಂತಹ ಸೂಪರ್ ಪ್ಲಾನ್ ರೂಪಿಸಿದೆ.


    ರಂಗೋಲಿ ಬಿಡಿಸಿದ ಜಾಗ ಕ್ಲೀನ್ ಇಡಬೇಕು ಅನ್ನೋ‌ ನಂಬಿಕೆ‌ ಇದೆ. ಇದನ್ನೆ ಬಳಸಿಕೊಂಡು ಮಾಡಿಕೊಂಡ ಮಹಾನಗರ ಪಾಲಿಕೆ ಅಧಿಕಾರಿಗಳು ಬೀದಿ ಬದಿ ಕಸ ಹಾಕುವ ಪ್ರದೇಶವನ್ನು ಸ್ವಚ್ಛಗೊಳಿಸಿ ರಂಗೋಲಿ ಬಿಡಿಸಿದ್ದಾರೆ.


    ಇದನ್ನೂ ಓದಿ: Positive Story: ಕಾಂಪೌಂಡ್ ಮುಂದೆ ಮೂತ್ರ ವಿಸರ್ಜನೆ ತಪ್ಪಿಸೋಕೆ ಮಾಸ್ಟರ್​ಪ್ಲಾನ್!


    ಬಿಸಿಲೂರು ಕಲಬುರಗಿಯಲ್ಲಿ 8 ಲಕ್ಷ ಜನ ವಾಸವಿದ್ದಾರೆ. ಕಲಬುರಗಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 55 ವಾರ್ಡ್‌ಗಳಿದ್ದು ಈ ರಂಗೋಲಿ ಐಡಿಯಾ ಕ್ಲಿಕ್ ಆಗ್ತಿದೆ. ಸುಂದರ ಬಿಳಿ ಬಣ್ಣದ ರಂಗೋಲಿ ಚಿತ್ರ ನೋಡಿ ಅಲ್ಲಿ ಕಸ ತಂದು ಸುರಿಯೋದನ್ನ ಜನ ನಿಲ್ಸಿದ್ದಾರೆ.


    ಇದನ್ನೂ ಓದಿ: Kalaburagi Blood Donor: ಎಮರ್ಜೆನ್ಸಿ ರಕ್ತ ಬೇಕಿದ್ರೆ ಇವ್ರಿಗೆ ಫೋನ್ ಮಾಡಿ ಸಾಕು!


    ಒಟ್ಟಿನಲ್ಲಿ ರಂಗೋಲಿ ಬಿಡಿಸಿ ಕಸ ಎಸೆಯೋದನ್ನ ನಿಲ್ಲಿಸಿರೋ ಕಲಬುರಗಿ ಪಾಲಿಕೆ ಪ್ಲಾನನ್ನ ಇತರ ಪಾಲಿಕೆಗಳೂ ಟ್ರೈ ಮಾಡಬಹುದಲ್ವಾ?


    ವರದಿ: ಶ್ರೀಕಾಂತ ಬಿರಾಳ, ಕಲಬುರಗಿ

    Published by:ಗುರುಗಣೇಶ ಡಬ್ಗುಳಿ
    First published: