• Home
 • »
 • News
 • »
 • kalburgi
 • »
 • Banana Farming: ಕಲಬುರಗಿ ಬಾಳೆ ಇರಾಕ್​ಗೆ ರಫ್ತು! 20 ಲಕ್ಷ ಆದಾಯ ಗಳಿಸಿದ ರೈತ

Banana Farming: ಕಲಬುರಗಿ ಬಾಳೆ ಇರಾಕ್​ಗೆ ರಫ್ತು! 20 ಲಕ್ಷ ಆದಾಯ ಗಳಿಸಿದ ರೈತ

ಇಲ್ಲಿ ನೋಡಿ ಯಶೋಗಾಥೆ

"ಇಲ್ಲಿ ನೋಡಿ ಯಶೋಗಾಥೆ"

ಒಟ್ಟು 25 ಟನ್ ಬಾಳೆಹಣ್ಣನ್ನು ಇರಾಕ್​ಗೆ ರಫ್ತು ಮಾಡಿ ಸುಮಾರು 20 ಲಕ್ಷ ರೂಪಾಯಿಯಷ್ಟು ಆದಾಯ ಗಳಿಸಿದ್ದಾರೆ ಈ ರೈತ

 • Share this:

  ಕಲಬುರಗಿ: ಸಾಮಾನ್ಯವಾಗಿ ಬಾಳೆಹಣ್ಣಿಗೆ ವರ್ಷಪೂರ್ತಿ ಡಿಮ್ಯಾಂಡ್ ಇರುತ್ತೆ. ಹಾಗಂತ ಬಾಳೆ ಬೆಳೆದ ಪ್ರತಿಯೊಬ್ಬ ರೈತನ ಬದುಕು ಬಂಗಾರ ಆಗುತ್ತೆ ಅನ್ನೋಕ್ಕಾಗಲ್ಲ. ಆದ್ರೆ ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ನಿಂಬಾಳ ಗ್ರಾಮದ ರೈತ ಗುರುಶಾಂತಗೌಡ ಪಾಟೀಲ್ ಬಾಳೆ ಕೃಷಿಯಲ್ಲಿ (Banana Farming) ಕೈತುಂಬ ಆದಾಯ ಪಡೆಯುತ್ತಿದ್ದಾರೆ. ತಮ್ಮ ನಾಲ್ಕು ಎಕರೆ ಜಮೀನಿನಲ್ಲಿ ಜಿ-9 ತಳಿಯ ಬಾಳೆ ಕೃಷಿ (Success Story Of Banana Farmer) ಮಾಡಿ ಲಕ್ಷ ರೂಪಾಯಿ ಲಾಭ ಪಡೆದಿದ್ದಾರೆ. ವೈಜ್ಞಾನಿಕ ರೀತಿಯಲ್ಲಿ ಕೃಷಿ ಮಾಡಿದರಿಂದ ಬಾಳೆ ಅತ್ಯಂತ ಉತ್ಕೃಷ್ಟ ಗುಣಮಟ್ಟದಿಂದ ಕೂಡಿದ್ದು, ವಿದೇಶಕ್ಕೂ ರಫ್ತಾಗ್ತಿದೆ. ಒಟ್ಟು 25 ಟನ್ ಬಾಳೆಹಣ್ಣನ್ನು ಇರಾಕ್​ಗೆ ರಫ್ತು ಮಾಡಿ ಸುಮಾರು 20 ಲಕ್ಷ ರೂಪಾಯಿಯಷ್ಟು ಆದಾಯ ಗಳಿಸಿದ್ದಾರೆ.


  ರೈತ ಗುರುಶಾಂತಗೌಡ ಪಾಟೀಲ್, ಅಟ್ಲಾಂಟಿಕ್ ಜಿ-9 ತಳಿಯ ಬಾಳೆ ಕೃಷಿ ಬಗ್ಗೆ ಒಲವು ತೋರಿದ್ದರು. ಈ ವರ್ಷ ಆರಂಭದ ಜನವರಿ ತಿಂಗಳಲ್ಲಿ ಹೈದ್ರಾಬಾದ್​ನಿಂದ 4500 ಸಸಿ ತಂದು ನಾಲ್ಕು ಎಕರೆ ಜಮೀನಿನಲ್ಲಿ ನಾಟಿ ಮಾಡಿದ್ದರು. ನಾಟಿಗೂ ಮುಂಚೆ ಜಮೀನಿನಲ್ಲಿ ಹನಿ ನೀರಾವರಿ ಪದ್ಧತಿ ಅಳವಡಿಸಿದ್ದಾರೆ. ಇದರಿಂದ ಪೋಲಾಗುತ್ತಿದ್ದ ನೀರು ಉಳಿತಾಯ ಒಂದೆಡೆಯಾದ್ರೆ, ಕಳೆ ನಿಯಂತ್ರಣ ಕೂಡಾ ಆಗಿದೆ.


  ಕೀಟಬಾಧೆ ಇಲ್ಲದೇ 10 ತಿಂಗಳಲ್ಲಿ ಬಾಳೆ ಬೆಳೆದ ರೈತ
  ಕೃಷಿ, ತೋಟಗಾರಿಕೆ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಕಾಲಕಾಲಕ್ಕೆ ನೀರು ರಸಗೊಬ್ಬರ ನೀಡಿದ್ದಾರೆ. ಯಾವುದೆ ರೋಗ ಹಾಗೂ ಕೀಟಬಾಧೆ ಇಲ್ಲದೆ ಹತ್ತು ತಿಂಗಳಲ್ಲೇ ಉತ್ಕೃಷ್ಟ ಗುಣಮಟ್ಟದ ಬಾಳೆ ಬೆಳೆದಿದ್ದಾರೆ.


  ಇದನ್ನು ಓದಿ: Puneeth Rajkumar Temple: ಅಭಿಮಾನಿಯಿಂದ ಅಪ್ಪು ದೇವಸ್ಥಾನ ನಿರ್ಮಾಣ! ಬ್ರಹ್ಮ, ವಿಷ್ಣು, ಮಹೇಶ್ವರ ಎಲ್ಲಾ ನೀವೇ ಎಂದ ಫ್ಯಾನ್ಸ್


  ಇವ್ರು ಬೆಳೆದ ಬಾಳೆಗೊನೆಗೆ ವಿದೇಶದಲ್ಲಿ ಬೇಡಿಕೆ ಇದ್ರೂ, ರಫ್ತು ಮಾಡಲು ಹಲವು ತಾಂತ್ರಿಕ ತೊಂದರೆ ಎದುರಾದ್ವು. ಮಧ್ಯವರ್ತಿಗಳ ಸಹಾಯದಿಂದ ಬಾಳೆಗೊನೆ ರಫ್ತು ಮಾಡಲಾಯ್ತು.


  ಇದನ್ನೂ ಓದಿ: Kalaburagi Viral Video: ಜನರಿಂದಲೇ ಸೈನಿಕನ ರಕ್ಷಣೆ! ಅಚ್ಚರಿ ಘಟನೆ ವೈರಲ್


  ಸರ್ಕಾರವೇ ಏನಾದರೂ ರಫ್ತು ಮಾಡೋಕೆ ನೆರವು ನೀಡಿದ್ರೆ ರೈತರ ಆದಾಯ ದುಪ್ಪಟ್ಟುಗೊಳ್ಳಲಿದೆ. ಅದೇನೇ ಇರಲಿ ತೊಗರಿ ಬೆಳೆಗೆ ಹೆಸರಾಗಿದ್ಧ ಕಲಬುರಗಿ ಜಿಲ್ಲೆಯಲ್ಲೀಗ ಬಾಳೆ ಸಖತ್ ಸದ್ದು ಮಾಡಿಡ್ತಿರುವುದು ಸುಳ್ಳಲ್ಲ.


  ವರದಿ: ಶ್ರೀಕಾಂತ ಬಿರಾಳ, ಕಲಬುರಗಿ

  Published by:ಗುರುಗಣೇಶ ಡಬ್ಗುಳಿ
  First published: