• Home
  • »
  • News
  • »
  • kalburgi
  • »
  • Anubhava Mantapa: ಪಾರ್ಲಿಮೆಂಟಲ್ಲಿ ಅನುಭವ ಮಂಟಪ! ಕಲ್ಯಾಣ ಕರ್ನಾಟಕದ ಕಲಾವಿದರು ಹೀಗಂತಾರೆ

Anubhava Mantapa: ಪಾರ್ಲಿಮೆಂಟಲ್ಲಿ ಅನುಭವ ಮಂಟಪ! ಕಲ್ಯಾಣ ಕರ್ನಾಟಕದ ಕಲಾವಿದರು ಹೀಗಂತಾರೆ

ಇಲ್ಲಿ ನೋಡಿ ವಿಡಿಯೋ

"ಇಲ್ಲಿ ನೋಡಿ ವಿಡಿಯೋ"

ಕಲ್ಯಾಣ ಕರ್ನಾಟಕ ಭಾಗದ ಹೆಮ್ಮೆಯಾದ ಅನುಭವ ಮಂಟಪವನ್ನ ದೆಹಲಿಯ ಪಾರ್ಲಿಮೆಂಟಲ್ಲಿ ಅಳವಡಿಸಬೇಕು ಎಂಬುದೇ ಡಾ. ಜೆ.ಎಸ್ ಖಂಡೇರಾವ್ ಅವರ ಇಚ್ಚೆ.

  • Share this:

    ಕಲಬುರಗಿ: ಬಸವಾದಿ ಶರಣರ ಕಾಲದ ಅನುಭವ ಮಂಟಪ, ಶತಮಾನಗಳ ಹಿಂದೆ ಶರಣರು ನಡೆಸುತ್ತಿದ್ದ ಪಾರ್ಲಿಮೆಂಟಿನ ಚಿತ್ತಾರ! ನಾಡಿನ ಹೆಸರಾಂತ ಚಿತ್ರ ಕಲಾವಿದರಾದ ಕಲಬುರಗಿಯ (Kalaburagi) ನಾಡೋಜ ಡಾ. ಜೆ.ಎಸ್ ಖಂಡೇರಾವ್ ಅವರು (Dr JS Khanderao) ಬಿಡಿಸಿದ ಚಿತ್ರವಿದು. ಇವರು ಇಳಿವಯಸ್ಸಲ್ಲೂ ಕೈಗೆ ಬ್ರಷ್ ತಗೊಂಡರೆ ಸಾಕು, ಅಲ್ಲಿ ಇಂತಹ ಅದ್ಭುತಗಳೇ ಅರಳಿ ನಿಲ್ಲತ್ತವೆ. ಇತಿಹಾಸದ ಗತ ವೈಭವವನ್ನು ಸಾರಿ ಹೇಳುತ್ತವೆ.


    ಇತಿಹಾಸದ ಚಿತ್ರಗಳನ್ನ ಬಿಡಿಸೋದ್ರಲ್ಲಂತೂ ಡಾ.ಜೆ.ಎಸ್. ಖಂಡೇರಾವ್ ಅವರು ಎತ್ತಿದಕೈ. 12ನೇ ಶತಮಾನದ ಅನುಭವ ಮಂಟಪದ ಕಲ್ಪನೆ ಮಾಡಿಕೊಂಡು ಬಿಡಿಸಿರುವ ಈ ಚಿತ್ರವನ್ನೇ ನೋಡಿ. ಈ ಹಿಂದೆ ಪಾರ್ಲಿಮೆಂಟ್ ಎದುರಿಗೆ ಬಸವಣ್ಣನವರ ಮೂರ್ತಿ ಅನಾವರಣ ಸಂದರ್ಭದಲ್ಲಿ ಇದೇ ಮಾದರಿಯ ಸಣ್ಣ ಚಿತ್ರವನ್ನು ಖಂಡೇರಾವ್ ಅವರು ಪ್ರದರ್ಶನಕ್ಕಿಟ್ಟಿದ್ದರು. ಅಂದಿನ ರಾಷ್ಟ್ರಪತಿಗಳಾಗಿದ್ದ ಎಪಿಜೆ ಅಬ್ದುಲ್ ಕಲಾಂ ಅವರೇ ಆ ಚಿತ್ರವನ್ನು ಮೆಚ್ಚಿದ್ದರು.


    ಹೀಗೊಂದು ಇಚ್ಛೆ ಹೊಂದಿರುವ ಹಿರಿಯ ಕಲಾವಿದ
    12ನೇ ಶತಮಾನದಲ್ಲಿ ಬಸವಕಲ್ಯಾಣದಲ್ಲಿ ಅಲ್ಲಮಪ್ರಭು ಅವರ ಅಧ್ಯಕ್ಷತೆಯಲ್ಲಿ ನಡೆದ ಬಸವಾದಿ ಶರಣರ ಅಧಿವೇಶನ ಕಣ್ಣೆದುರಿಗೆ ಕಟ್ಟುವಂತೆ ಡಾ. ಜೆ.ಎಸ್ ಖಂಡೇರಾವ್ ಅವರು ಚಿತ್ರಿಸಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದ ಹೆಮ್ಮೆಯಾದ ಅನುಭವ ಮಂಟಪವನ್ನ ದೆಹಲಿಯ ಪಾರ್ಲಿಮೆಂಟಲ್ಲಿ ಅಳವಡಿಸಬೇಕು ಎಂಬುದೇ ಡಾ. ಜೆ.ಎಸ್ ಖಂಡೇರಾವ್ ಅವರ ಇಚ್ಚೆ.


    ಇದನ್ನೂ ಓದಿ: Guleda Lakkamma: ಚಪ್ಪಲಿಯಿಂದ ಮುಖ, ಮೈಕೈ ಸವರಿಕೊಂಡ್ರೆ ಒಳ್ಳೇದು ಮಾಡುವ ದೇವರು!


    ಒಮ್ಮೆ ಸಿಕ್ಕಿತ್ತು ಅನುಮತಿ
    ಈ ಹಿಂದೆ ಲೋಕಸಭಾಧ್ಯಕ್ಷರಾಗಿದ್ದ ಓಂ ಬಿರ್ಲಾ ಅವರು ಸಂಸತ್ ಭವನದಲ್ಲಿ ಅನುಭವ ಮಂಟಪ ಕಲಾಕೃತಿ ಅಳವಡಿಸಲು ಅನುಮತಿ ನೀಡಿದ್ರು. ಆದರೆ ಕಾರಣಾಂತರಗಳಿಂದ ಅಳವಡಿಸಲು ಸಾಧ್ಯವಾಗಿರ್ಲಿಲ್ಲ.


    ಇದನ್ನೂ ಓದಿ: Kalaburagi: ಮಹಾನಗರ ಪಾಲಿಕೆ ಸದಸ್ಯರ ಆಲೂಬಾತ್ ಹೋಟೆಲ್!


    ವಿವಿಧ ಪುರಸ್ಕಾರ
    ಹೀಗೆ ತಮ್ಮ ಕೈಚಳಕದ ಮೂಲಕ ಖಂಡೇರಾವ್ ಅವರು 12 ನೇ ಶತಮಾನದ ಪಾರ್ಲಿಮೆಂಟ್ ಅನ್ನ ತಮ್ಮ ಚಿತ್ರದ ಮೂಲಕ ತೋರಿಸಿಕೊಟ್ಟಿದ್ದಾರೆ. ಅರ್ಹವಾಗಿಯೇ ಅವರಿಗೆ ನಾಡೋಜ, ಡಾಕ್ಟರೇಟ್ ಸಹಿತ ಹಲವು ಪ್ರಶಸ್ತಿಗಳು ಸಂದಿವೆ. ಖಂಡೇರಾವ್ ಅವರ ಕಲೆಯ ಮೇಲಿನ ಅಭಿಮಾನವು ಈ ಇಳಿವಯಸ್ಸಿನಲ್ಲಿ ಇನ್ನೂ ಕುಂದಿಲ್ಲ. ಇವರ ಉತ್ಸಾಹ ನಿಜಕ್ಕೂ ಪ್ರತಿಯೊಬ್ಬ ಚಿತ್ರಕಲಾವಿದನಿಗೂ ಮಾದರಿ.


    ವರದಿ: ಶ್ರೀಕಾಂತ ಬಿರಾಳ, ಕಲಬುರಗಿ

    Published by:ಗುರುಗಣೇಶ ಡಬ್ಗುಳಿ
    First published: