• Home
  • »
  • News
  • »
  • kalburgi
  • »
  • PM Narendra Modi Statue: ಪಿಎಂ ಮೋದಿಯ 60 ಪ್ರತಿಮೆ ತಯಾರಿಸಿದ ಕಲಬುರಗಿ ಕಲಾವಿದ! ಇವ್ರ 'ಆ ಆಸೆ' ಈಡೇರುತ್ತಾ?

PM Narendra Modi Statue: ಪಿಎಂ ಮೋದಿಯ 60 ಪ್ರತಿಮೆ ತಯಾರಿಸಿದ ಕಲಬುರಗಿ ಕಲಾವಿದ! ಇವ್ರ 'ಆ ಆಸೆ' ಈಡೇರುತ್ತಾ?

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ವಿಶ್ವೇಶ್ವರಯ್ಯನವರು ಪ್ರಧಾನಿ ಭೇಟಿ ಮಾಡಿ ಉಡುಗೊರೆ ನೀಡಲು ಅವಕಾಶ ನೀಡುವಂತೆ ಕಲಬುರಗಿ ಜಿಲ್ಲಾಧಿಕಾರಿ ಅವರಲ್ಲೂ ಭಿನ್ನವಿಸಿಕೊಂಡಿದ್ದಾರೆ. ಆದರೆ, ಅದ್ಯಾವುದೂ ಫಲಪ್ರದವಾಗಿಲ್ಲ.

  • Share this:

    ಕಲಬುರಗಿ: ಮೋದಿ, ಮೋದಿ, ಮೋದಿ ಹೀಗೆ ಈ ಪ್ರತಿಕೃತಿಯನ್ನ ಹೇಗೆ ತಿರುಗಿಸಿದ್ರೂ ಕಾಣೋ ಮುಖ ಒಂದೇ ಅದುವೇ ನರೇಂದ್ರ ಮೋದಿ (PM Narendra Modi). ಹೌದು, ಕಲಾವಿದನ ಕೈಚಳಕದಲ್ಲಿ ಹೀಗೊಂದು ಪ್ರತಿಮೆ ರೂಪಿತಗೊಂಡಿದೆ. ನಮೋ ಅಭಿಮಾನಿಗಳಿಗಂತೂ  (Namo Fan's) ಫೈನಲ್ ಟಚ್ ನಲ್ಲಿರೋ ಈ ಕಲಾಕೃತಿ ಕಂಡು ಖುಷಿಯಾದ್ರೆ, ಇದನ್ನ ಕೆತ್ತಿದ ಕಲಾವಿದನಿಗೆ (PM Modi Statue) ಮಾತ್ರ ಯಾಕೋ ಕಸಿವಿಸಿ. ಹಾಗಿದ್ರೆ ಕಲಾವಿದನ ಆ ಅಳುಕಿಗೆ ಕಾರಣ ಏನ್ ಅಂತೀರಾ? ಅದನ್ನೇ ನೋಡಿ, ನಾವ್ ನಿಮ್ಗೆ ಹೇಳ್ತೀವಿ.


    ಹೌದು, ಇವರು ಕಲಬುರಗಿಯ ಖ್ಯಾತ ಕಲಾವಿದ ವಿಶ್ವೇಶ್ವರಯ್ಯ. ಇಲ್ಲಿನ ಕಪನೂರ್ ಕೈಗಾರಿಕಾ ಪ್ರದೇಶದಲ್ಲಿ ಶಿಲ್ಪಕಲಾ ಕೇಂದ್ರ ಹೊಂದಿರುವ ವಿಶ್ವೇಶ್ವರಯ್ಯನವರು ಭಾರೀ ಶ್ರಮಪಟ್ಟು ಮೋದಿ ಅವರ ವಿವಿಧ ಶೈಲಿಯ ಕಲಾಕೃತಿ ರಚಿಸಿದ್ದಾರೆ.


    ಭದ್ರತೆ ಕಾರಣವೊಡ್ಡಿ ನಿರಾಕರಿಸಿದ ಜಿಲ್ಲಾಡಳಿತ
    ಜನವರಿ 19 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕಲಬುರಗಿಗೆ ಭೇಟಿ ನೀಡ್ತಿದ್ದಾರೆ. ಆಗ ಅವರಿಗೆ ಉಡುಗೊರೆಯಾಗಿ ನೀಡುವ ಉದ್ದೇಶವೂ ವಿಶ್ವೇಶ್ವರಯ್ಯ ಅವರದ್ದಾಗಿತ್ತು. ಆದ್ರೆ ಭದ್ರತೆ ಹಿತದೃಷ್ಟಿಯಿಂದ ಉಡುಗೊರೆ ಕೊಡುವುದಕ್ಕೆ ಸಾಧ್ಯವಿಲ್ಲ ಎಂದು ಜಿಲ್ಲಾಡಳಿತವು ಹೇಳಿದ್ದು, ಕಲಾವಿದನ ಅಸಮಾಧಾನಕ್ಕೆ ಕಾರಣವಾಗಿದೆ. ಮಾತ್ರವಲ್ಲದೇ, ಮೋದಿ ಅವರನ್ನ ಈ ಕಲಾಕೃತಿ ತಲುಪಲೇಬೇಕು ಅನ್ನೋ ಹಠಕ್ಕೆ ಬಿದ್ದಿರುವ ವಿಶ್ವೇಶ್ವರಯ್ಯ ಅದಕ್ಕಾಗಿ ಭಗೀರಥ ಪ್ರಯತ್ನವನ್ನೂ ಮಾಡುತ್ತಿದ್ದಾರೆ.




    ಪ್ರಧಾನಿಗೇ ಟ್ವೀಟ್ ಮಾಡಿದ ಕಲಾವಿದ
    ವಿಶ್ವೇಶ್ವರಯ್ಯನವರು ಪ್ರಧಾನಿ ಭೇಟಿ ಮಾಡಿ ಉಡುಗೊರೆ ನೀಡಲು ಅವಕಾಶ ನೀಡುವಂತೆ ಕಲಬುರಗಿ ಜಿಲ್ಲಾಧಿಕಾರಿ ಅವರಲ್ಲೂ ಭಿನ್ನವಿಸಿಕೊಂಡಿದ್ದಾರೆ. ಆದರೆ, ಅದ್ಯಾವುದೂ ಫಲಪ್ರದವಾಗಿಲ್ಲ. ಹೀಗಾಗಿ ಖುದ್ದು ಪ್ರಧಾನಿ ಮೋದಿಯವರಿಗೆ ಟ್ವೀಟ್ ಮಾಡುವ ಮೂಲಕ ತನ್ನ ಅಭಿಲಾಷೆಯನ್ನ ಆ ಮೂಲಕ ವ್ಯಕ್ತಪಡಿಸಿದ್ದಾರೆ.


    ಇದನ್ನೂ ಓದಿ:Kite Festival: ಗಾಳಿಪಟ ಉತ್ಸವದ ಸಂಭ್ರಮದಲ್ಲಿ ಮಿಂದೆದ್ದ ಕಲಬುರಗಿ!


    ತನ್ನ ಗಿಫ್ಟ್ ಅನ್ನ ಸ್ವೀಕರಿಸುವಂತೆ ಮನವಿಯನ್ನು ಮಾಡಿದ್ದಾರೆ. ಇವರು ರಚಿಸಿದ ಮೂರ್ತಿಯಲ್ಲಿ ನರೇಂದ್ರ ಮೋದಿ ಅವರು ವಿವಿಧ ಉಡುಪುಗಳನ್ನ ಧರಿಸಿ ಕಂಗೊಳಿಸುವುದನ್ನ ಗಮನಿಸಬಹುದಾಗಿದೆ. ಅದೆಲ್ಲರ ಫೈನಲ್ ಟಚ್ ಕೂಡಾ ಆಗಿದ್ದು, ಇನ್ನೇನ್ ಮೋದಿ ಅವ್ರಿಗೆ ಕೊಡೋದಕ್ಕೆ ಸಿಕ್ರಂತೂ ವಿಶ್ವೇಶ್ವರಯ್ಯನವರಿಗೆ ಸ್ವರ್ಗಕ್ಕೆ ಮೂರೇ ಗೇಣು ಅನ್ನೋದನ್ನ ಬಿಡಿಸಿ ಹೇಳಬೇಕಿಲ್ಲ.


    ಲೋಹಶಿಲ್ಪಿಯೆಂದೇ ಫೇಮಸ್ ಆದ ವಿಶ್ವೇಶ್ವರಯ್ಯ
    ಕಳೆದ 30 ವರ್ಷಗಳ ಶಿಲ್ಪಕಲೆ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ, ಲೋಹಶಿಲ್ಪಿಯೆಂದೇ ವಿಶ್ವೇಶ್ವರಯ್ಯ ಪ್ರಸಿದ್ದಿ ಪಡೆದಿದ್ದಾರೆ. ಹಲವು ಪ್ರಶಸ್ತಿ ಪುರಸ್ಕಾರಗಳೂ ಇವರನ್ನ ಅರಸಿ ಬಂದಿವೆ.


    ಇದನ್ನೂ ಓದಿ: Bananti Devi Temple: ಬಲು ವಿಶೇಷ ಈ ಬಾಣಂತಿ ಜಾತ್ರೆ, ನೀರಿನಲ್ಲಿ ಮಕ್ಕಳನ್ನು ತೇಲಿಬಿಡುವ ಹರಕೆ!


    ವಿಶೇಷವೆಂದರೆ ಬೆಳಗಾವಿಯ ಸುವರ್ಣಸೌಧದ ಮೇಲಿರುವ ರಾಷ್ಟ್ರ ಲಾಂಛನವನ್ನು ಕೂಡಾ ಇದೇ ವಿಶ್ವೇಶ್ವರಯ್ಯ ಭೋವಿ ಅವರೇ ತಯಾರಿಸಿದ್ದಾರೆ. ಇಂತಹ ಕಲಾವಿದನ ಕೊರಗು ನೀಗುತ್ತಾ? ಮೋದಿ ಭೇಟಿಯಾಗಿ ಗಿಫ್ಟ್ ನೀಡೋದಕ್ಕೆ ಸಾಧ್ಯವಾಗುತ್ತಾ? ಅನ್ನೋ ಕುತೂಹಲ ಸದ್ಯ ಪ್ರಧಾನಿ ಮೋದಿ ಅಭಿಮಾನಿಗಳಲ್ಲಿ ಮನೆ ಮಾಡಿದೆ.


    ವರದಿ: ಶ್ರೀಕಾಂತ್ ಬಿರಾಳ, ಕಲಬುರಗಿ

    Published by:ಗುರುಗಣೇಶ ಡಬ್ಗುಳಿ
    First published: