• Home
  • »
  • News
  • »
  • kalburgi
  • »
  • Kalaburagi: ಈ ಡಾಕ್ಟರ್ ಫೀಸ್ 10 ರೂಪಾಯಿ ಮಾತ್ರ!

Kalaburagi: ಈ ಡಾಕ್ಟರ್ ಫೀಸ್ 10 ರೂಪಾಯಿ ಮಾತ್ರ!

ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ವೃತ್ತಿಯ ಸಮಯದಲ್ಲೂ ಹಾಯಾಗಿರುವುದನ್ನ ಬಿಟ್ಟು ಜನರ ಆರೋಗ್ಯ ಮುಖ್ಯ ಎಂದು ಭಾವಿಸಿಕೊಂಡಿರುವ ಇವರಿಗೆ ಹ್ಯಾಟ್ಸಾಪ್ ಅನ್ನಲೇಬೇಕು.

  • News18 Kannada
  • Last Updated :
  • Gulbarga, India
  • Share this:

    ಕಲಬುರಗಿ: ಆಸ್ಪತ್ರೆ ಅಂದ್ರೆ ಸಾಕು, ಕೈಯಲ್ಲಿರೋ ಹಣವನ್ನೆಲ್ಲಾ ಆಸ್ಪತ್ರೆಗೇ ಕೊಡಬೇಕು. ಆದ್ರೆ ಈ ವೈದ್ಯರು ಫೀಸ್ 10 ರೂಪಾಯಿ ಮಾತ್ರ! ಕಲಬುರಗಿಯ ಈ ಡಾಕ್ಟರ್ 10 ರೂಪಾಯಿ (Kalaburagi 10 Rs. Doctor) ಡಾಕ್ಟರ ಸಾಬ್ ಎಂದೇ ಫೇಮಸ್. ಕೋವಿಡ್ ಸಮಯದಲ್ಲೂ ಸಹ ಮನೆಯಲ್ಲಿ ಕೂಡದೆ ರೋಗಿಗಳ ಸೇವೆಗೈದ ಇವರಿಗೆ ಪ್ರಧಾನಿ ನರೇಂದ್ರ ಮೋದಿಯವರು (PM Narendra Modi) ಸಹ ಪ್ರಶಂಸೆಯನ್ನ ವ್ಯಕ್ತಪಡಿಸಿದ್ದಾರೆ. ಯಾರಿವರು ಅಂದ್ರಾ? ಇವರೇ ಕಲಬುರಗಿಯ ಡಾ. ಮಲ್ಲಾರಾವ ಮಲ್ಲೆ.


    ಡಾ. ಮಲ್ಲಾರಾವ ಮಲ್ಲೆ ಅವರಿಗೆ ಹೆಚ್ಚು ಕಮ್ಮಿ 75ರ ಇಳಿವಯಸ್ಸು. ಆದರೆ ಇಂತಹ ಇಳಿವಯಸ್ಸಲ್ಲೂ ಜನರ ಆರೋಗ್ಯಕ್ಕಾಗಿ ನಿಸ್ವಾರ್ಥದಿಂದ ಶ್ರಮಿಸುತ್ತಿದ್ದಾರೆ. ಇಂದಿನ ದುಬಾರಿ ದುನಿಯಾದಲ್ಲೂ ಕೇವಲ 10 ರೂಪಾಯಿ ಮಾತ್ರ ಕನ್ಸಲ್ಟೆನ್ಸಿ ಫೀಸ್ ಪಡೆಯುತ್ತಿದ್ದಾರೆ. 4 ದಶಕಗಳ ಅನುಭವದ ಜೊತೆಗೆ ಇವರಲ್ಲಿನ ಸೇವಾ ಮನೋಭಾವವೇ ಇವರನ್ನ ಈ ಇಳಿವಯಸ್ಸಲ್ಲೂ ಜನಸೇವೆಯಲ್ಲಿ ತೊಡಗಿಸಿದೆ.


    ಡಾ. ಮಲ್ಲಾರಾವ ಮಲ್ಲೆ


    ಇದನ್ನೂ ಓದಿ: Rotti Jatre: ರೊಟ್ಟಿ ಜಾತ್ರೆ! 24 ಗಂಟೆ ಎಷ್ಟು​ ಬೇಕೋ ಅಷ್ಟು ರೊಟ್ಟಿ ಸವಿಯಿರಿ!


    ಸೇವಾ ಮನೋಭಾವ, ಕಡಿಮೆ ಫೀಸ್, ಗುಣಮಟ್ಟದ ಚಿಕಿತ್ಸೆ ಸಲಹೆಯಿಂದಾಗಿ ಇವರ ಆಸ್ಪತ್ರೆ ಮುಂದೆ ಜನರು ಸರದಿ ಸಾಲಲ್ಲಿ ನಿಂತಿರ್ತಾರೆ. ಡಾ ಮಲ್ಲೆ ಅವ್ರು ಸುಮಾರು 2 ಲಕ್ಷ ಜನರಿಗೆ ಕೋವಿಡ್ ಲಸಿಕೆ ವಿತರಿಸಿದ್ದರು.


    ಡಾ. ಮಲ್ಲಾರಾವ ಮಲ್ಲೆ ಅವರ ಸಂಪರ್ಕ ಸಂಖ್ಯೆ: 9448293777


    ಇದನ್ನೂ ಓದಿ: Kalaburagi: ವಿಶ್ವದ ಅತಿ ದೊಡ್ಡ ಫಿರಂಗಿ ನಮ್ಮ ಕಲಬುರಗಿಯಲ್ಲೇ ಇದೆ!


    ಲಸಿಕಾ ಅಭಿಯಾನದಲ್ಲಿ ಡಾ. ಮಲ್ಲಾರಾವ ಮಲ್ಲೆಯವರು ತೋರಿದ್ದ ಸೇವಾಪರತೆಗೆ ಪ್ರಧಾನಿ ಮೋದಿ ಅವರೇ ಖುದ್ದು ಪತ್ರ ಬರೆದು ಅಭಿನಂದನೆ ಅರ್ಪಿಸಿದ್ದರು. ನಿವೃತ್ತಿಯ ಸಮಯದಲ್ಲೂ ಹಾಯಾಗಿರುವುದನ್ನ ಬಿಟ್ಟು ಜನರ ಆರೋಗ್ಯ ಮುಖ್ಯ ಎಂದು ಭಾವಿಸಿಕೊಂಡಿರುವ ಇವರಿಗೆ ಹ್ಯಾಟ್ಸಾಪ್ ಅನ್ನಲೇಬೇಕು.


    ವರದಿ: ಶ್ರೀಕಾಂತ ಬಿರಾಳ, ಕಲಬುರಗಿ

    Published by:ಗುರುಗಣೇಶ ಡಬ್ಗುಳಿ
    First published: