• Home
  • »
  • News
  • »
  • kalburgi
  • »
  • Kabbu Mitra: ಕಬ್ಬು ಮಿತ್ರ ಮೊಬೈಲ್ ಆ್ಯಪ್! ಬೆಳೆಗಾರರಿಗೆ ಭಾರೀ ಅನುಕೂಲದ ಭರವಸೆ

Kabbu Mitra: ಕಬ್ಬು ಮಿತ್ರ ಮೊಬೈಲ್ ಆ್ಯಪ್! ಬೆಳೆಗಾರರಿಗೆ ಭಾರೀ ಅನುಕೂಲದ ಭರವಸೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಗೂಗಲ್ ಪ್ಲೇ ಸ್ಟೋರ್​ನಲ್ಲಿ ಇದನ್ನು ಡೌನ್‍ಲೋಡ್ ಮಾಡಿಕೊಂಡು ರೈತರು ತಮ್ಮ ಹೆಸರು, ಮೊಬೈಲ್ ಸಂಖ್ಯೆ ನೀಡಿ ನೋಂದಣಿ ಮಾಡಿಕೊಂಡು ಕಬ್ಬು ಬೆಳೆ ವಿವರ ಮತ್ತು ಬಿತ್ತನೆ ದಿನಾಂಕ ನೀಡಿದಲ್ಲಿ ಕಟಾವಿನ ದಿನಾಂಕ ತಂತ್ರಾಂಶ ನಿಗದಿಪಡಿಸಲಿದೆ.

  • News18 Kannada
  • Last Updated :
  • Gulbarga, India
  • Share this:

    ಕಲಬುರಗಿ ಜಿಲ್ಲಾಡಳಿತವು ಕಬ್ಬು ಬೆಳೆಗಾರರಿಗೆ ಆಗುತ್ತಿರುವ ಮೋಸ ಹಾಗೂ ಸಕ್ಕರೆ ಕಾರ್ಖಾನೆಗಳ ಚೆಲ್ಲಾಟವನ್ನು ತಪ್ಪಿಸಲು, ವಿನೂತನ ಕ್ರಮವನ್ನು ಕೈಗೊಂಡಿದ್ದು. ಇದು ಕಬ್ಬು ಬೆಳೆಗಾರರಿಗೆ (Sugarcane Farmers) ತುಂಬಾ ಸಹಕಾರವಾಗಲಿದೆ. ಸಕ್ಕರೆ ಕಾರ್ಖಾನೆಗಳು ಹಾಗೂ ರೈತರ ನಡುವೆ ದ್ವಿಪಕ್ಷೀಯ ಒಪ್ಪಂದಕ್ಕೆ ಸಹಿ ಹಾಕಿದ ಕಲಬುರಗಿ ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ರೈತರಿಗೆ ಸಹಕಾರ ವಾಗಲಿ ಎಂಬ ನಿಟ್ಟಿನಲ್ಲಿ ಕಬ್ಬು ಮಿತ್ರ ಮೊಬೈಲ್ ಆ್ಯಪ್ ಲಾಂಚ್ (Kabbu Mitra Mobile App) ಮಾಡಲಾಗಿದೆ.“ಕಬ್ಬು ಮಿತ್ರ” ತಂತ್ರಾಂಶದ (Kabbu Mitra App) ಬಿಡುಗಡೆ ಮಾಡಿದರು. ಕಬ್ಬು ಕಟಾವಿನಿಂದ ಹಿಡಿದು ರೈತರಿಗೆ ಹಣ ಪಾವತಿ ವರೆಗೆ ಪಾರದರ್ಶಕತೆ ತರಲು “ಕಬ್ಬು ಮಿತ್ರ” ಆ್ಯಪ್ ಸಹಕಾರವಾಗಲಿದೆ.


    ಆ್ಯಪ್ ಬಳಕೆ ಹೇಗೆ
    ಗೂಗಲ್ ಪ್ಲೇ ಸ್ಟೋರ್​ನಲ್ಲಿ ಇದನ್ನು ಡೌನ್‍ಲೋಡ್ ಮಾಡಿಕೊಂಡು ರೈತರು ತಮ್ಮ ಹೆಸರು, ಮೊಬೈಲ್ ಸಂಖ್ಯೆ ನೀಡಿ ನೋಂದಣಿ ಮಾಡಿಕೊಂಡು ಕಬ್ಬು ಬೆಳೆ ವಿವರ ಮತ್ತು ಬಿತ್ತನೆ ದಿನಾಂಕ ನೀಡಿದಲ್ಲಿ ಕಟಾವಿನ ದಿನಾಂಕ ತಂತ್ರಾಂಶ ನಿಗದಿಪಡಿಸಲಿದೆ.


    ಎಫ್.ಆರ್.ಪಿ. ದರ ನಿಗದಿ ಎಷ್ಟು?
    ಪ್ರಸ್ತುತ ಪ್ರತಿ ಟನ್ ಕಬ್ಬಿಗೆ 3,100 ರೂ. ಇದ್ದು, ಎರಡರಿಂದ ಮೂರು ದಿನಗಳಲ್ಲಿ ಮುಖ್ಯಮಂತ್ರಿಗಳು ಕಬ್ಬು ಬೆಳೆಗಾರರೊಂದಿಗೆ ಸಭೆ ನಡೆಸಲಿದ್ದು, ಅಲ್ಲಿ ಹೊಸ ಎಫ್.ಆರ್.ಪಿ. ದರ ನಿಗದಿಪಡಿಸಲಾಗುತ್ತಿದೆ. ರೈತರು ಮಂದಹಾಸ ಮೂಡುವಂತೆ ದರ ನಿಗದಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಕಬ್ಬು ತುಂಬಿಕೊಂಡ ಲಾರಿಗೆ ಟೋಲ್ ಗೇಟ್‍ನಲ್ಲಿ ಶುಲ್ಕ ವಿನಾಯಿತಿ ನೀಡಬೇಕೆಂಬ ರೈತರ ಬೇಡಿಕೆಯನ್ನು ಸರ್ಕಾರದ ಗಮನಕ್ಕೆ ತರುವುದಾಗಿ ಡಿಸಿ ತಿಳಿಸಿದ್ದಾರೆ.


    ಕ್ರಾಂತಿಕಾರಿ ಹೆಜ್ಜೆ, ಒಪ್ಪಂದಕ್ಕೆ ಸಹಿ ಹಾಕಿ
    ಕಲಬುರಗಿ ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಮಾತನಾಡಿ, ಕಬ್ಬು ಬೆಳೆಯುವ ರೈತರು ಕಂಪನಿಯವರು ಕಬ್ಬು ಕಟಾವು ಮಾಡಿಲ್ಲ, ಸರಕು ದರ ಹೆಚ್ಚಿಸಿದ್ದಾರೆ, ಪರಿಹಾರ ಕೊಟ್ಟಿಲ್ಲ ಎನ್ನುವ ಸಾಮಾನ್ಯ ದೂರುಗಳಿಗೆ ಪರಿಹಾರ ಕಂಡುಕೊಳ್ಳಲು ದ್ವಿಪಕ್ಷೀಯ ಒಪ್ಪಂದ ಪದ್ಧತಿ ಜಾರಿಗೆ ತಂದಿದ್ದು, ಇದು ಕ್ರಾಂತಿಕಾರಿ ಹೆಜ್ಜೆಯಾಗಿದೆ.


    ಇದನ್ನೂ ಓದಿ: Kalaburagi: ಈ ಡಾಕ್ಟರ್ ಫೀಸ್ 10 ರೂಪಾಯಿ ಮಾತ್ರ!


    ಸುಪ್ರೀಂ ಕೋರ್ಟ್ ತೀರ್ಪಿನಂತೆ ರೈತರು ಯಾವುದೇ ಕಾರ್ಖಾನೆಗೆ ಕಬ್ಬು ಮಾರಾಟ ಮಾಡಬಹುದು. ರೈತರು ಒಪ್ಪಂದಕ್ಕೆ ಸಹಿ ಹಾಕಬೇಕು ಮತ್ತು ಅದರಂತೆ ಪರಸ್ಪರರು ನಡೆಯಬೇಕು ಎಂದು ಜಿಲ್ಲಾಡಳಿತ ಸೂಚಿಸಿದೆ.


    ಇದನ್ನೂ ಓದಿ: Kalaburagi: ಸಗಣಿಯಿಂದ ಹಣತೆ! ಬೆಳಗಲಿವೆ 2 ಲಕ್ಷಕ್ಕೂ ಹೆಚ್ಚು ದೀಪಗಳು!


    ಕಟಾವಿಗೆ  ನೀಡುವಂತಿಲ್ಲ!
    ಪ್ರಸ್ತುತ ಕಬ್ಬನ್ನು ಮಶೀನ್‍ಗಳಿಂದ ಕಟಾವು ಮಾಡಿದಲ್ಲಿ ಸಾರಿಗೆ ಮತ್ತು ಕಟಾವು ವೆಚ್ಚದ ಜೊತೆಗೆ ಹೆಚ್ಚುವರಿಯಾಗಿ ಶೇ.5ರಷ್ಟು ಮೊತ್ತವನ್ನು ಕಾರ್ಖಾನೆಯವರು ರೈತರಿಂದ ಪಡೆಯುತ್ತಿದ್ದಾರೆ. ದ್ವಿಪಕ್ಷೀಯ ಒಪ್ಪಂದಕ್ಕೆ ಸಹಿ ಹಾಕಿದಲ್ಲಿ ರೈತರು ಶೇ.5ರಷ್ಟು ಹೆಚ್ಚುವರಿ ಹಣ ನೀಡಬೇಕಿಲ್ಲ.


    ವರದಿ: ಶ್ರೀಕಾಂತ ಬಿರಾಳ, ಕಲಬುರಗಿ

    Published by:ಗುರುಗಣೇಶ ಡಬ್ಗುಳಿ
    First published: