• Home
  • »
  • News
  • »
  • kalburgi
  • »
  • Job Fair: ಕಲಬುರಗಿ ಉದ್ಯೋಗ ಮೇಳ; ಭರ್ಜರಿ ಉದ್ಯೋಗಾವಕಾಶದ ಭರವಸೆ

Job Fair: ಕಲಬುರಗಿ ಉದ್ಯೋಗ ಮೇಳ; ಭರ್ಜರಿ ಉದ್ಯೋಗಾವಕಾಶದ ಭರವಸೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಉದ್ಯೋಗ ವಿನಿಮಯ ಕಚೇರಿಯಿಂದ ಆಯೋಜನೆ ಮಾಡಲಾದ ಉದ್ಯೋಗ ಮೇಳದಲ್ಲಿ ರಾಜ್ಯದ ಪ್ರಖ್ಯಾತ ಕಂಪನಿಗಳು ಭಾಗವಹಿಸಲಿವೆ.

  • News18 Kannada
  • Last Updated :
  • Gulbarga, India
  • Share this:

    ಕಲಬುರಗಿ: ಕೆಲಸಕ್ಕಾಗಿ ಅಲೆಯುತ್ತಿರುವ ಯುವಕ ಯುವತಿಯರಿಗಾಗಿ ಉದ್ಯೋಗ ವಿನಿಮಯ ಇಲಾಖೆಯು ಸುವರ್ಣ ಅವಕಾಶವನ್ನು ಕಲ್ಪಿಸಿಕೊಟ್ಟಿದೆ. ಇದೇ ನವೆಂಬರ್ 3 ರಂದು ಉದ್ಯೋಗ ಮೇಳವನ್ನು ಆಯೋಜಿಸಿದ್ದು ಅರ್ಹ ಅಭ್ಯರ್ಥಿಗಳು ಭಾಗವಹಿಸಿ ಕೆಲಸ ಗಿಟ್ಟಿಸಿಕೊಳ್ಳಬಹುದು. ರಾಷ್ಟ್ರೀಯ ವೃತ್ತಿ ಸೇವೆ ಯೋಜನೆಯಡಿ ಸರ್ಕಾರಿ ಐಟಿಐ ಕಾಲೇಜು ಹಿಂದುಗಡೆ ಇರುವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ನವೆಂಬರ್ 03ರಂದು ಬೆಳಗ್ಗೆ 10:30 ರಿಂದ 3 ಗಂಟೆಯವರೆಗೆ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಸಹಾಯಕ ನಿರ್ದೇಶಕರು ಮಾಹಿತಿ ನೀಡಿದ್ದಾರೆ.


    ಯಾವೆಲ್ಲ ಕಂಪನಿಗಳು ಭಾಗಿ?
    ಉದ್ಯೋಗ ವಿನಿಮಯ ಕಚೇರಿಯಿಂದ ಆಯೋಜನೆ ಮಾಡಲಾದ ಉದ್ಯೋಗ ಮೇಳದಲ್ಲಿ ರಾಜ್ಯದ ಪ್ರಖ್ಯಾತ ಕಂಪನಿಗಳು ಭಾಗವಹಿಸಲಿವೆ. ಪ್ಲಿಪ್​ಕಾರ್ಟ್, ಐಸಿಐಸಿಐ ಬ್ಯಾಂಕ್, ಏರೋ ಗ್ಲೋಬಲ್ ಟೆಕ್ನಾಲಜಿ, ಭಾರತ ಫೈನಾನ್ಸಿಯಲ್ ಇನ್​ಕ್ಲೂಜನ್, ಎಸ್​ಬಿಐ ಲೈಫ್ ಇನ್ಸೂರೆನ್ಸ್, ಮಠ ಮಲ್ಟಿಮೈಂಡ್, ಮೇಡ್ ಪ್ಲಸ್, ರೇ-ನ್ಯೂಸ್, ಕೃಷಿ ಬಂಧು‌ ಹಾಗೂ ಮೋತಿಲಾಲ್ ಓಲ್ಸೆಲ್ ಕಂಪನಿಗಳು ಭಾಗವಹಿಸಲಿವೆ.


    ಇದನ್ನೂ ಓದಿ: Banana Farming: ಕಲಬುರಗಿ ಬಾಳೆ ಇರಾಕ್​ಗೆ ರಫ್ತು! 20 ಲಕ್ಷ ಆದಾಯ ಗಳಿಸಿದ ರೈತ


    ಯಾರು ಅರ್ಹರು?
    ಎಸ್​ಎಸ್​ಎಲ್​ಸಿ, ಪಿಯುಸಿ, ಡಿಪ್ಲೊಮಾ, ಐಟಿಐ, ಡಿ-ಫಾರ್ಮಾಸಿ, ಬಿ-ಫಾರ್ಮಾಸಿ, ಬಿ.ಎ, ಬಿ.ಕಾಂ, ಬಿ.ಎಸ್​ಸಿ, ಬಿಬಿಎ, ಬಿಇ ಇಂಜಿನಿಯರಿಂಗ್, ಎಂ.ಕಾಮ್, ಎಂ.ಟೆಕ್, ಎಂಬಿಎ, ಎಮ್. ಎ. ಕನ್ನಡ- ಪತ್ರಿಕೋದ್ಯಮ ಪದವಿಗಳನ್ನು 18ರಿಂದ 35ವರ್ಷದೊಳಗಿನ ಪುರುಷರು ಹಾಗೂ ಮಹಿಳೆಯರು ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದಾಗಿದೆ.


    ಇದನ್ನೂ ಓದಿ: Karnataka Rajyotsava: ಕನ್ನಡ ತಾಯಿಯ ಚಿತ್ರ ಬಿಡಿಸಿ ಉಚಿತವಾಗಿ ಹಂಚುವ ಕಲಬುರಗಿ ಕಲಾವಿದ!


    ಕೆಲಸಕ್ಕಾಗಿ ಅಲೆಯುತ್ತಿರುವ ಯುವ ಪೀಳಿಗೆಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇಯು ವಿನೂತನ ಅವಕಾಶವನ್ನು ಕಲ್ಪಿಸಿತು ಅರ್ಹ ಅಭ್ಯರ್ಥಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಿ ಅವಕಾಶನ್ನು ಸದುಪಯೋಗ ಪಡೆದುಕೊಳ್ಳಬಹುದಾಗಿದೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಗೆ ಅಥವಾ ದೂರವಾಣಿ ಸಂಖ್ಯೆ: 08472-274846 ಸಂಪರ್ಕಿಸುವಂತೆ ಕೋರಲಾಗಿದೆ.


    ವರದಿ: ಶ್ರೀಕಾಂತ ಬಿರಾಳ, ಕಲಬುರಗಿ

    Published by:ಗುರುಗಣೇಶ ಡಬ್ಗುಳಿ
    First published: