Kalaburagi: ಕೆರೆ ಹೂಳೆತ್ತಲು ರೈತರಿಂದ ಲಕ್ಷ ಲಕ್ಷ ಹಣ ಸಂಗ್ರಹ!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಸದ್ಯ ಜಂಬಗಾ ಗ್ರಾಮದ ಎರಡು ಎಕರೆ ಪ್ರದೇಶ ಕೆರೆಯ ಹೂಳೆತ್ತುವ ಕೆಲಸ ಭರದಿಂದ ಸಾಗಿದೆ. ಅದಕ್ಕಾಗಿ ಜೆಸಿಬಿ, ಟಿಪ್ಪರ್​ಗಳು ಅವಿರತವಾಗಿ ದುಡಿಯುತ್ತಿವೆ.

  • News18 Kannada
  • 3-MIN READ
  • Last Updated :
  • Gulbarga, India
  • Share this:

    ಕಲಬುರಗಿ: ಘರ್ಜಿಸುತ್ತಿರೋ ಜೆಸಿಬಿ, ಮಣ್ಣು ತುಂಬಿ ಸಾಗೋ ಟಿಪ್ಪರ್, ಅಲ್ಲೇ ನಿಂತು ನೋಡ್ತಿರೋ ಜನ. ಇದೇನಿದು ಬಳ್ಳಾರಿ ಮಾದರಿಯಲ್ಲಿ (Ballari) ಇಲ್ಲೂ ಗಣಿಗಾರಿಕೆ ಶುರು ಮಾಡಿಬಿಟ್ರ ಅಂದ್ಕೊಂಡ್ರಾ? ಖಂಡಿತಾ ಇಲ್ಲ, ಇದು ಊರಿಗೆ ಉಪಕಾರ ಆಗೋವಂತ ಕೆಲ್ಸ. ಇಡೀ ಊರಿನ ದಾಹ ತಣಿಸುವಂತಹ (Developing Lakes) ಪುಣ್ಯದ ಕೆಲಸ. ಹಾಗಿದ್ರೆ ಏನಿದು ಅಂತೀರಾ? ಹೇಳ್ತೀವಿ ನೋಡಿ.


    ಯೆಸ್, ಬಿಸಿಲ ನಗರಿ ಕಲಬುರಗಿಯಲ್ಲಿ ಮಳೆಗಾಲ ಇರಲಿ, ಯಾವುದೇ ಕಾಲ ಬರಲಿ ನೀರಿಗೆ ತತ್ವಾರ ಇರುತ್ತೆ. ಹೀಗಿರ್ಬೇಕಾದ್ರೆ ಜನ ಜಾನುವಾರುಗಳ ಪರಿಸ್ಥಿತಿ ಹೇಳತೀರದ್ದು. ಈ ಸಮಸ್ಯೆ ಹೋಗಲಾಡಿಸೋಕೆ ಕಲಬುರಗಿ ಜಿಲ್ಲೆಯ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ನೇತೃತ್ವದಲ್ಲಿ ಕೆರೆಗಳ ಹೂಳೆತ್ತುವ ಕೆಲಸ ಕಾರ್ಯ ಆರಂಭಿಸಲಾಗಿದೆ.




    ಒಟ್ಟು 9 ಲಕ್ಷ ವೆಚ್ಚ
    ಕಲಬುರಗಿಯ ಜಂಬಗಾ ಗ್ರಾಮದಲ್ಲಿ ಎರಡು ಎಕರೆ ವಿಸ್ತೀರ್ಣದಲ್ಲಿ ಸುಮಾರು 9 ಲಕ್ಷ ವೆಚ್ಚದಲ್ಲಿ ಹೂಳೆತ್ತುವ ಕೆಲಸ ಭರದಿಂದ ಸಾಗಿದ್ದು, ಕೆರೆ ಪುನರುಜ್ಜೀವನ ಕೆಲಸವೇ ಗ್ರಾಮಸ್ಥರಲ್ಲಿ ಭರವಸೆ ಮೂಡಿಸಿದೆ.




    ಅವಿರತವಶಗಿ ದುಡಿಯುತ್ತಿವೆ ಜೆಸಿಬಿ, ಟಿಪ್ಪರ್​ಗಳು!
    ಸದ್ಯ ಜಂಬಗಾ ಗ್ರಾಮದ ಎರಡು ಎಕರೆ ಪ್ರದೇಶ ಕೆರೆಯ ಹೂಳೆತ್ತುವ ಕೆಲಸ ಭರದಿಂದ ಸಾಗಿದೆ. ಅದಕ್ಕಾಗಿ ಜೆಸಿಬಿ, ಟಿಪ್ಪರ್​ಗಳು ಅವಿರತವಾಗಿ ದುಡಿಯುತ್ತಿದೆ. ಊರ ಹಿರಿಯರು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಮುಂದಾಳುಗಳು ಮುಂಚೂಣಿಯಲ್ಲಿ ನಿಂತು ಸೂಕ್ತ ಮಾರ್ಗದರ್ಶನ ನೀಡ್ತಾ ಬಂದಿದ್ದಾರೆ.


    ಇದನ್ನೂ ಓದಿ: Nagavi Yellamma Temple: ಪ್ರಾಚೀನ ವಿಶ್ವವಿದ್ಯಾಲಯ ಈಗ ಹಾಳುಕೊಂಪೆ! ಹೇಳ್ತೀವಿ ಕೇಳಿ ಪುಣ್ಯತಾಣದ ವಿಚಿತ್ರ ಕಥೆ




    ಈ ಯೋಜನೆಗೆ ಧರ್ಮಸ್ಥಳ ಸಂಘವು 5 ಲಕ್ಷ ರೂಪಾಯಿ ನೆರವಾದರೆ, ರೈತರು ಸ್ವತಃ ನಾಲ್ಕು ಲಕ್ಷ ರೂಪಾಯಿ ಸಂಗ್ರಹಿಸಿ ನೀಡಿದ್ದಾರೆ. ಜೊತೆಗೆ ಸಾರ್ವಜನಿಕರೆಲ್ಲರೂ ಬಹುಪಯೋಗಿ ಕೆರೆ ಅಭಿವೃದ್ಧಿಗೆ ಬೇಕಾದ ಸಹಕಾರ ನೀಡಿದ್ದಾರೆ.




    ಇದನ್ನೂ ಓದಿ: Kalyana Karnataka: ಆರ್ಡಿನರಿ ಬಸ್​ಗೆ ಎಕ್ಸ್​ಪ್ರೆಸ್ ಟಿಕೆಟ್! ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ ಪ್ರಯಾಣಿಕರು ಹೀಗಂತಾರೆ


    ಜಂಬಗಾ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಈ ಕೆರೆ ರೈತರ ಜೀವನಾಡಿಯಾಗಿ ಸಮೃದ್ದ ಬೆಳೆಗೆ ಆಸರೆಯಾಗುವುದರಲ್ಲಿ ಅನುಮಾನವೇ ಇಲ್ಲ. ಅಷ್ಟೇ ಅಲ್ದೇ, ಜಾನುವಾರುಗಳಿಗೂ ಬೇಸಿಗೆ ದಾಹವನ್ನಈ ಕೆರೆ ನೀಗಿಸಬಲ್ಲದು. ಒಟ್ಟಾರೆ ಕೆರೆ ಹೂಳೆತ್ತುವಿಕೆ ಈ ಭಾಗದ ಜನರ ನೀರಿನ ಬವಣೆ ನಿವಾರಣೆಯಾಗುವ ಭರವಸೆ ಮೂಡಿದೆ.


    ವರದಿ:ಶ್ರೀಕಾಂ ಬಿರಾಳ, ನ್ಯೂಸ್ 18 ಕನ್ನಡ, ಡಿಜಿಟಲ್ ಕಲಬುರಗಿ

    Published by:ಗುರುಗಣೇಶ ಡಬ್ಗುಳಿ
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು