ಕಲಬುರಗಿ: ಹಣ್ಣು ಹಂಪಲು, ಖರ್ಜೂರ, ಸಮೋಸ. ಇನ್ನೇನು ಉಪವಾಸ ವೃತ ತೊರೆಯೋದಕ್ಕೆ ರೆಡಿಯಾಗಿ ಕೂತಿರೋ ಮುಸ್ಲಿಮರು. ಅದರೊಂದಿಗೆ ಭ್ರಾತೃತ್ವ ಮೆರೆದ ಸಹ ಧರ್ಮೀಯರು. ಹೀಗೊಂದು ಭಾವೈಕ್ಯತೆಯ ಇಫ್ತಾರ್ ಕೂಟಕ್ಕೆ (Iftar In Kalaburagi) ಸಾಕ್ಷಿಯಾಯಿತು ಕಲಬುರಗಿ. ಹಿಂದೂ ವ್ಯಕ್ತಿಯಿಂದ ಮುಸ್ಲಿಮರಿಗಾಗಿ ಇಫ್ತಾರ್ ಕೂಟ ಆಯೋಜಿಸಿ ಸೂಫಿ ಶರಣರ ನಾಡಿನಲ್ಲಿ (Communal Harmony) ಸೌಹಾರ್ದದ ಸಂದೇಶ ಸಾರಿದ್ರು.
ಯೆಸ್, ಮುಸ್ಲಿಮರ ರಂಜಾನ್ ಉಪವಾಸ ಕೊನೆ ಗಳಿಗೆಯಲ್ಲಿದ್ದು, ಕಲಬುರಗಿಯಲ್ಲಿ ಖಾಸಗಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ. ವಿಕ್ರಮ ಸಿದ್ದಾರೆಡ್ಡಿ ಇಫ್ತಾರ್ ಕೂಟ ಆಯೋಜಿಸುವ ಮೂಲಕ ಮಾದರಿಯಾದ್ರು. ಹಿಂದೂ ಮುಸ್ಲಿಮರು ಇಫ್ತಾರ್ನಲ್ಲಿ ಭಾಗಿಯಾಗುವ ಮೂಲಕ ಸಮಾನತೆಯ ಸಂದೇಶವನ್ನು ಎಲ್ಲೆಡೆ ಸಾರಿದ್ರು.
ಇದನ್ನೂ ಓದಿ: Kalaburagi: ಕುಸ್ತಿ ಕಾಳಗದಲ್ಲಿ ಗೆದ್ದವರಿಗೆ ಚಿನ್ನದ ಉಂಗುರ!
ಸಹಪಂಕ್ತಿ ಇಫ್ತಾರ್
ಸಹಪಂಕ್ತಿಯಲ್ಲಿ ಕೂತು ಇಫ್ತಾರ್ ನಡೆಸುವ ಮೂಲಕ ಸೂಫಿ ಸಂತರ ನಾಡಿನ ಭಾವೈಕ್ಯತೆಯನ್ನ ಸಾರಿದರು. ಹಿಂದೂ, ಮುಸ್ಲಿಮರಲ್ಲದೇ ಕ್ರೈಸ್ತರು ಕೂಡಾ ಭಾಗವಹಿಸಿ ಇಫ್ತಾರ್ನಲ್ಲಿ ಭಾಗವಹಿಸಿದರು. ಡಾ. ವಿಕ್ರಮ್ ಸಿದ್ದಾರೆಡ್ಡಿ ಅವರು ಉಪವಾಸ ತೊರೆಯುವ ಮುಸ್ಲಿಮರಿಗಾಗಿ ಹಣ್ಣು ಹಂಪಲು, ಸಮೋಸದಂತಹ ತಿಂಡಿ ತಿನಿಸು, ಪಾನೀಯ ಹಾಗೂ ಭೋಜನದ ವ್ಯವಸ್ಥೆಯನ್ನು ಕಲ್ಪಿಸಿದ್ದರು.
ಶುಭಾಶಯ ವಿನಿಮಯ
ಸಿದ್ದಾರೆಡ್ಡಿ ಅವರ ಆಹ್ವಾನವನ್ನು ಸ್ವೀಕರಿಸಿದ ಮುಸ್ಲಿಮರೆಲ್ಲರೂ ಇಫ್ತಾರ್ನಲ್ಲಿ ಭಾಗಿಯಾಗಿ ಉಪವಾಸ ತೊರೆದರು. ಬಳಿಕ ನಮಾಜ್ ನಿರ್ವಹಿಸಿ, ಇಫ್ತಾರ್ ಆಯೋಜನೆ ಮಾಡಿದ ಡಾ. ವಿಕ್ರಮ್ ಸಿದ್ದಾರೆಡ್ಡಿ ಅವರಿಗೆ ಒಳಿತಾಗಲಿ ಎಂದು ಪ್ರಾರ್ಥಿಸಿದರು.
ಇದನ್ನೂ ಓದಿ: Free Hostel: ವಿದ್ಯಾರ್ಥಿಗಳಿಗೆ ಉಚಿತ ಹಾಸ್ಟೆಲ್ ಸೌಲಭ್ಯ, ಈಗಲೇ ಹೀಗೆ ಅರ್ಜಿ ಸಲ್ಲಿಸಿ
ಇನ್ನು ಈದ್ ಹಬ್ಬಕ್ಕೆ ತಯಾರಿ ನಡೆಸುತ್ತಿರುವ ಮುಸ್ಲಿಮ್ ಬಾಂಧವರಿಗೆ ವೈದ್ಯರು ಕೂಡಾ ಶುಭಾಶಯ ಸಲ್ಲಿಸಿ ಭಾವೈಕ್ಯತೆ ಮೆರೆದರು. ಒಟ್ಟಿನಲ್ಲಿ ಸೂಫಿ ಶರಣರ ನಾಡು ಕಲಬುರಗಿಯಲ್ಲಿ ಇಫ್ತಾರ್ ಕೂಟವನ್ನು ಹಿಂದೂ ವ್ಯಕ್ತಿಯೋರ್ವರು ಆಯೋಜಿಸುವ ಮೂಲಕ ನಾಡಿನ ಭಾವೈಕ್ಯತೆಗೆ ನಾಂದಿ ಹಾಡಿದ್ದಾರೆ. ಪರಸ್ಪರ ಪ್ರೀತಿ, ಸ್ನೇಹವೇ ಈ ನಾಡಿನ ಆಸ್ತಿ ಅನ್ನೋದನ್ನ ತೋರಿಸಿಕೊಟ್ಟಿದ್ದಾರೆ.
ವರದಿ:ಶ್ರೀಕಾಂತ ಬಿರಾಳ, ನ್ಯೂಸ್ 18 ಕನ್ನಡ ಡಿಜಿಟಲ್, ಕಲಬುರಗಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ