• Home
  • »
  • News
  • »
  • kalburgi
  • »
  • Voting List: 17 ವರ್ಷಕ್ಕೇ ವೋಟರ್​ ಲಿಸ್ಟ್​ಗೆ ಸೇರಿ! ರಾಜ್ಯದ ಒಟ್ಟು ಮತದಾರರ ವಿವರ ಇಲ್ಲಿದೆ ನೋಡಿ

Voting List: 17 ವರ್ಷಕ್ಕೇ ವೋಟರ್​ ಲಿಸ್ಟ್​ಗೆ ಸೇರಿ! ರಾಜ್ಯದ ಒಟ್ಟು ಮತದಾರರ ವಿವರ ಇಲ್ಲಿದೆ ನೋಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

6 ಲಕ್ಷ ಮತದಾರರ ಹೆಸರನ್ನ ಡಿಲೀಟ್ ಮಾಡಲಾಗಿದೆ. ಹೊಸದಾಗಿ 3 ಲಕ್ಷಕ್ಕೂ ಹೆಚ್ಚು ಮತದಾರರನ್ನ ಪಟ್ಟಿಗೆ ಸೇರಿಸಲಾಗಿದೆ. 57 ಸಾವಿರ ಮತದಾರರ ವಿಳಾಸ ಬದಲಾವಣೆ ಆಗಿದೆ.

  • News18 Kannada
  • Last Updated :
  • Gulbarga, India
  • Share this:

    ಕಲಬುರಗಿ: ಹದಿನೆಂಟು ವರ್ಷ ತುಂಬಲು ಕೇವಲ ಮೂರು ತಿಂಗಳು ಕಡಿಮೆ ಇದ್ದರೆ ಅವರು ಕೂಡ ಮತದಾನ ಮಾಡಲು ಅರ್ಹರಿರುತ್ತಾರೆ. ಅರ್ಹರು ಬೇಗನೆ ಮತದಾರರ ಪಟ್ಟಿಯಲ್ಲಿ (Voting List) ತಮ್ಮ ಹೆಸರು ಸೇರ್ಪಡೆಗೆ ಮುಂದಾಗುವಂತೆ ಕಲಬುರಗಿ ಜಿಲ್ಲಾಧಿಕಾರಿ ಯಶವಂತ ವಿ ಗುರುಕರ್  ಮನವಿ ಮಾಡಿದ್ದಾರೆ. ಕಲಬುರಗಿ ಜಿಲ್ಲೆಯಲ್ಲಿ 18-20 ವರ್ಷದ ಮಕ್ಕಳು ನೋಂದಣೆ ಮಾಡುವುದನ್ನು ಕಡಿಮೆಯಾಗಿದೆ ಎಲ್ಲರೂ ನೋಂದಣಿ ಮಾಡಬೇಕೆಂದು ಅವರು ತಿಳಿಸಿದರು. ವೋಟರ್ ಹೆಲ್ಪೆಲೈನ್ ಆ್ಯಪ್ ಅಥವಾ ವೆಬ್ ಸೈಟ್ ಆನ್‍ಲೈನ್ (Register Name in Voting List)  ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು. 


    ಅರ್ಜಿಗಳನ್ನು ಸಲ್ಲಿಸುವುದು ಹೇಗೆ?
    ಸಾರ್ವಜನಿಕರು ಹಾಗೂ ಮತದಾರರು ಪಟ್ಟಿ ಪರೀಕ್ಷಿಸಿ ಆಕ್ಷೇಪಣೆಗಳಿದ್ದರೆ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಲು ತಿದ್ದುಪಡಿ ಮಾಡಲು ಹೆಸರು ತೆಗೆದು ಹಾಕಲು ವರ್ಗಾವಣೆ ಮಾಡಲು ಸಂಬಂಧಿತ ಮತಗಟ್ಟೆ ಅಧಿಕಾರಿ (ಬಿ.ಎಲ್.ಒ) ಹತ್ತಿರ ಅವಶ್ಯವಿರುವ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು.  


    ಅರ್ಜಿ ಸಲ್ಲಿಸಲು ಇಲ್ಲಿದೆ ನೋಡಿ ಲಿಂಕ್
    ಮತದಾರರ ಪಟ್ಟಿ ಪರಿಷ್ಕರಣೆ ವೇಳಾಪಟ್ಟಿಯಂತೆ 2022 ನವೆಂಬರ್ 9 ರಿಂದ 2023 ಜನವರಿ 5 ರ ವರೆಗೆ ನಡೆಯಲಿದೆ.  ಹೆಸರು ಇಲ್ಲದೆ ಇರೋ ಮತದಾರರು ಫಾರ್ಮ್ 6 ರ ಮೂಲಕ ಸೇರ್ಪಡೆ ಆಗಬಹುದು. ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ


    ಮೇ  ತಿಂಗಳಿನಲ್ಲಿ ಚುನಾವಣೆ ನಡೆಯುವ ಸಾಧ್ಯತೆ
    17 ವರ್ಷ ತುಂಬಿದ ಯುವಕ, ಯುವತಿಯರು ಮತದಾರರ ಪಟ್ಟಿಗೆ ಸೇರ್ಪಡೆ ಆಗಬಹುದು. ಒಂದು ವರ್ಷ ಮೊದಲೇ,  ಅಂದರೆ 18 ವರ್ಷಕ್ಕಿಂತ ಮೊದಲೇ ಪಟ್ಟಿಗೆ ಸೇರ್ಪಡೆ ಆಗಬಹುದು. ಆದರೆ ಜನವರಿ 1ಕ್ಕೆ 18 ವರ್ಷ ತುಂಬಿದರೆ ಮತದಾನಕ್ಕೆ ಅವಕಾಶ  ನೀಡಲಾಗುತ್ತದೆ. 1 ನೇ ಏಪ್ರಿಲ್ 2023 ಕ್ಕೆ 18 ವರ್ಷ ಆಗುತ್ತಾರೋ ಅವರೆಲ್ಲರೂ ಮತದಾನದ ಅವಕಾಶ ಸಿಗಲಿದೆ. ಮೇ  ತಿಂಗಳಿನಲ್ಲಿ ಚುನಾವಣೆ ನಡೆಯಬಹುದು.


    6 ಲಕ್ಷ ಮತದಾರರ ಹೆಸರು ಡಿಲೀಟ್
    ನಿರಂತರವಾಗಿ ಮತದಾರರ ಪಟ್ಟಿಗೆ ಹೆಸರು ಸೇರಿಸಲು ಅವಕಾಶವಿದೆ. ಎಲ್ಲ ಅರ್ಜಿಗಳು ಆನ್ ಲೈನ್ ನಲ್ಲಿ ಲಭ್ಯವಿದೆ, ವಿಳಾಸ ಮತ್ತು ವಯಸ್ಸಿನ ದೃಢೀಕರಣ ಅದ್ರೇ ಉಳಿದ ವಿಚಾರ ಸುಲಭವಾಗಲಿದೆ. 6 ಲಕ್ಷ ಮತದಾರರ ಹೆಸರನ್ನ ಡಿಲೀಟ್ ಮಾಡಲಾಗಿದೆ. ಹೊಸದಾಗಿ 3 ಲಕ್ಷಕ್ಕೂ ಹೆಚ್ಚು ಮತದಾರರನ್ನ ಪಟ್ಟಿಗೆ ಸೇರಿಸಲಾಗಿದೆ. 57 ಸಾವಿರ ಮತದಾರರ ವಿಳಾಸ ಬದಲಾವಣೆ ಆಗಿದೆ.


    ಇದನ್ನೂ ಓದಿ: Kalaburagi: ವೀರಭದ್ರೇಶ್ವರ ದೇವರ ಪವಾಡ! ಭಕ್ತರ ಕೆಂಡ ಹಾಯೋ ಸಾಹಸ!


    ಕರ್ನಾಟಕದ ಮತದಾರರ ಪಟ್ಟಿ
    ಒಟ್ಟು ಮತದಾರರು : 5,09,01,662
    ಪುರುಷ ಮತದಾರರು: 2,56,85,954
    ಮಹಿಳಾ ಮತದಾರರು : 2,52,11,218
    ಇತರರು :  4,490


    ನಕಲಿ ಮತದಾನ ತಪ್ಪಿಸಲು ಆಧಾರ್​ಗೆ ಲಿಂಕ್
    ಮತದಾರರು ಓಟರ್ ಐಡಿಗೆ ಆಧಾರ್ ಲಿಂಕ್‌ ಮಾಡಿಸಬೇಕು. ಇದರಿಂದ ನಕಲಿ ಮತದಾನ ನಿಲ್ಲುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.


    ಇದನ್ನೂ ಓದಿ: Kalaburagi Rose: ಕಲಬುರಗಿ ಗುಲಾಬಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು! ದಿನಕ್ಕೆ 3 ಸಾವಿರ ಆದಾಯ!


    ಅತಿ ಹೆಚ್ಚು ಮತದಾರರು ಇರುವ ಕ್ಷೇತ್ರ ಯಾವುದು?
    68% ಜನರು ಈವರೆಗೂ ಮತದಾರ ಪಟ್ಟಿ ಜೊತೆ ಆಧಾರ್ ಲಿಂಕ್ ಮಾಡಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಅತಿ ಹೆಚ್ಚು ಮತದಾರರಿರುವ ಕ್ಷೇತ್ರ. ಕೊಡಗು ಅತಿ ಕಡಿಮೆ ಮತದಾರರಿರುವ ಕ್ಷೇತ್ರ. 224 ಕ್ಷೇತ್ರದ ಪೈಕಿ ಬೆಂಗಳೂರು ದಕ್ಷಿಣ ಅತಿ ಹೆಚ್ಚು ಮತದಾರರಿರುವ ಕ್ಷೇತ್ರ. ಬೆಂಗಳೂರು  ದಕ್ಷಿಣದಲ್ಲಿ 6,41,466 ಮತದಾರರಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ವಿಧಾನಸಭಾ ಕ್ಷೇತ್ರ ಅತಿ ಕಡಿಮೆ ಮತದಾರರಿರುವ ಕ್ಷೇತ್ರವಾಗಿದೆ. ಬಾಗಲಕೋಟೆ, ರಾಯಚೂರು, ಚಿಕ್ಕಬಳ್ಳಾಪುರ, ರಾಮನಗರ, ಕೊಡಗು, ಮೈಸೂರು ಸೇರಿದಂತೆ 13 ಜಿಲ್ಲೆಗಳಲ್ಲಿ ಮಹಿಳಾ ಮತದಾರರು ಹೆಚ್ಚಿದ್ದಾರೆ.

    Published by:ಗುರುಗಣೇಶ ಡಬ್ಗುಳಿ
    First published: