ಕಲಬುರಗಿ: ನೋಡೋದಕ್ಕೆ ಅಂದ ಚೆಂದದ ಮಣ್ಣಿನ ಮಡಿಕೆಗಳು. ಮನುಷ್ಯನ ಆರೋಗ್ಯಕ್ಕೂ ಈ ಮಡಿಕೆಗಳೇ ತಂಪು. ಆದ್ರೆ ಮಡಿಕೆ (Mud Pot) ಮಾಡೋರ ಬದುಕು ಮಾತ್ರ ಇನ್ನೂ ದೀಪದ ಕೆಳಗೆ ಇರೋ ಕತ್ತಲಿನಂತೆ. ಮಣ್ಣು ತುಳಿದು ಮೈ ಬೆವರು ಹರಿಸಿದ್ರೂ ಕುಂಬಾರನಿಗೆ ಇನ್ನೂ (Potter) ದಕ್ಕಿಲ್ಲ ಉತ್ತಮ ಬದುಕು. ಹಾಗಿದ್ರೆ ಮಣ್ಣಿನ ಮಡಿಕೆ ತಯಾರಿಕೆ ಮಾಡೋ ಕುಂಬಾರರ ಬದುಕಿನ ಕಥೆ ನೋಡಿ.
ಕಲಿತ ವಿದ್ಯೆ ಮರೆತವರಲ್ಲ!
ಯೆಸ್, ಹೇಳೋದಕ್ಕೆ ಅವರು ಮಣ್ಣನು ಹದಮಾಡಿ ಆಕರ ಕೊಡುವವರು. ಜೊತೆಗೆ ಅದನ್ನೇ ನಂಬಿ ಬದುಕು ಸಾಗಿಸುವವರು ಕೂಡ. ಇವರ ಕಲೆಗೆ ತಲೆದೂಗದವರೇ ಇಲ್ಲ. ಆದರೆ ಆಧುನಿಕ ತಂತ್ರಜ್ಞಾನದ ನಡುವೆ ಇವರ ಕಲೆ ಮಸುಕಾಗಿದೆ. ಆದ್ರೂ ಕಲಿತ ವಿದ್ಯೆಯನ್ನು ಮರೆತಲ್ಲ. ಮಣ್ಣಿನ ಜೊತೆ ಬೆರೆಯುವುದನ್ನೂ ಈ ಕುಂಬಾರರು ಬಿಟ್ಟಿಲ್ಲ.
ಕುಂಬಾರಿಕೆಯಿಂದ ಸಂಕಷ್ಟ
ಆದ್ರೆ ನಿರೀಕ್ಷಿತ ಲಾಭವಿಲ್ಲದೇ ಕಂಗಾಲಾಗಿರುವ ಕುಂಬಾರರು, ಬೇರೆ ವಿಧಿ ಕಾಣದೇ ಮಣ್ಣಿನ ಮಡಿಕೆಯ ತಯಾರಿಕೆಯಲ್ಲಿ ಇಂದಿಗೂ ತೊಡಗಿದ್ದಾರೆ. ಆರೋಗ್ಯಕ್ಕೆ ತಂಪು ಅನುಭವ ನೀಡುವ ಮಣ್ಣಿನ ಮಡಿಕೆ ಬಗ್ಗೆ ಈಗಿನ ಜನರಿಗೆ ಮಾಹಿತಿ ಇಲ್ಲದಿರುವುದು ಕೂಡಾ ಅದ್ರ ಮಾರ್ಕೆಟಿಂಗ್ಗೆ ಅನಾನುಕೂಲವಾಗಿದೆ. ಒಟ್ಟಿನಲ್ಲಿ ಕುಂಬಾರರ ಶ್ರಮಕ್ಕೆ ಬೆಲೆ ಇಲ್ಲದಂತಾಗಿದೆ. ಹೀಗಾಗಿ ಹಲವು ಕುಟುಂಬಗಳು ಇಂದು ಕುಂಬಾರಿಕೆಯಿಂದ ದೂರವಾಗಿ, ಬೇರೆ ಊರಿಗೆ ವಲಸೆ ಹೋಗಿರುವ ಸಂಖ್ಯೆಯೂ ಜಾಸ್ತಿಯಾಗಿದೆ.
ಅನಿವಾರ್ಯವಾಗಿ ಕುಂಬಾರಿಕೆಯಲ್ಲಿ!
ಅಂದಹಾಗೆ, ಕಲಬುರಗಿ ಜಿಲ್ಲೆಯ ಚಿತ್ತಾಪೂರ ತಾಲೂಕಿನ ಭಂಕೂರ್ ಗ್ರಾಮದಲ್ಲಿ ಕೆಲವು ಕುಟುಂಬಗಳು ಇನ್ನೂ ಕೂಡ ಕುಂಬಾರಿಕೆ ಕೆಲಸ ಮುಂದುವರಿಸಿಕೊಂಡು ಬಂದಿದೆ. ಮಣ್ಣು ತುಳಿದು ಮಡಿಕೆ ಮಾಡ್ತಿದ್ದಾರೆ. ಅದರಲ್ಲಿ ಮಲ್ಲಪ್ಪ ಕುಂಬಾರ ಒಬ್ಬ. ಮಲ್ಲಪ್ಪ ಕುಂಬಾರ, ಶಾಲೆ ಕಲಿಯದ ಕಾರಣ ಕುಂಬಾರಿಕೆಯನ್ನು ಮುಂದುವರಿಸಿಕೊಂಡು ಹೋಗ್ತಿದ್ದಾರೆ. ಚಿಕ್ಕ ವಯಸ್ಸಿನಿಂದಲೇ ಕುಂಬಾರಿಕೆ ಕಲೆ ಕಲಿತಿದ್ದು ಅದನ್ನೇ ತನ್ನ ವೃತ್ತಿಯನ್ನಾಗಿ ಮಾಡಿಕೊಂಡು ಕಳೆದ ಹಲವು ವರ್ಷಗಳಿಂದ ಜೀವನ ಸಾಗಿಸುತ್ತಿದ್ದಾರೆ.
ಇದನ್ನೂ ಓದಿ: Kalaburagi Temple: ಬಸವಣ್ಣನ ಪಾದುಕೆಗೆ ಇಲ್ಲಿ ಪ್ರತಿನಿತ್ಯ ನಡೆಯುತ್ತೆ ಪೂಜೆ!
ಹಲವು ಮಣ್ಣಿನ ಪಾತ್ರೆ
ಇನ್ನು ಮಲ್ಲಪ್ಪನ ತಂದೆ ಬಸವರಾಜ ಕುಂಬಾರ ಕೂಡ ತಮ್ಮ ಮುತ್ತಾತನಿಂದ ಬಂದಿರೋ ಕುಂಬಾರಿಕೆಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ.
ಮಲ್ಪಪ್ಪ ಹೆಂಡತಿ ಪುಷ್ಟಾ ಕೂಡ ಸಾಥ್ ನೀಡ್ತಿದ್ದು, ಮಲ್ಲಪ್ಪನ ಹೆಗಲಿಗೆ ಹೆಗಲು ಕೊಟ್ಟು ದುಡಿಯುತ್ತಿದ್ದಾರೆ. ಇನ್ನು ಈ ದಂಪತಿಗಳು ಮಣ್ಣಿನಿಂದ ತರಹೇವಾರಿ ವಸ್ತುಗಳನ್ನು ತಯಾರಿಸುತ್ತಾರೆ. ಮಣ್ಣಿನ ಗಡಿಗೆ, ದೀಪ, ಮಗಿ, ದೂಪರ್ತಿ, ಪರ್ಯಾಣ, ಒಲೆಗಳು, ಬಟ್ಟಲುಗಳು, ಗುಳ್ಳಿಗಳು, ಪಣತಿ, ಹೂವಿನ ಕುಂಡಾ, ಗಲ್ಲಾ ಪೆಟ್ಟಿಗೆ ಸೇರಿದಂತೆ ವಿವಿಧ ವೆರೈಟಿಯ ವಸ್ತುಗಳು ಮಣ್ಣಿನಿಂದ ತಯಾರಿಸುತ್ತಾರೆ. ಇದು ಮೂರ್ನಾಲ್ಕು ತಲೆಮಾರುಗಳಿಂದಲೂ ಬಂದಿದ್ದು, ಅದನ್ನೇ ಮುಂದುವರೆಸಿಕೊಂಡು ಬಂದಿದ್ದಾರೆ.
ಇದನ್ನೂ ಓದಿ: District Wise GDP: ರಾಜ್ಯದಲ್ಲೇ ಅತೀ ಕಡಿಮೆ ತಲಾ ಆದಾಯ ಈ ಜಿಲ್ಲೆಯದ್ದು
ಸರ್ಕಾರದ ಸಹಕಾರ ಮುಖ್ಯ
ಒಟ್ಟಾರೆಯಾಗಿ ಕುಂಬಾರನ ಬದುಕು ಮಣ್ಣಿನಂತೆ ಹದವಾಗಿಲ್ಲ. ಸಾಕಷ್ಟು ವರ್ಷಗಳಿಂದ ದುಡಿದ್ರೂ ಆತನ ಬದುಕು ಹಸನಾಗಿಲ್ಲ. ಆದರು ಕುಂಬಾರಿಕೆಗೆ ಬದುಕನ್ನೆ ಸವೆಸುತ್ತಿರುವ ಈ ಕುಟುಂಬಕ್ಕೆ ನಿಜಕ್ಕೂ ಹ್ಯಾಟ್ಸಾಪ್ ಹೇಳಲೇಬೇಕು. ಸರ್ಕಾರದ ನೆರವು ಸಿಕ್ಕರೆ ಇನ್ನಷ್ಟು ಸಹಕಾರವಾಗುತ್ತದೆ ಎಂಬ ಮನವಿ ಕುಂಬಾರಿಕೆ ನಡೆಸುತ್ತಿರೋ ಕುಟುಂಬಗಳದ್ದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ