ಕಲಬುರಗಿ: ಕಲ್ಯಾಣ ಕರ್ನಾಟಕದ ಹೆಬ್ಬಾಗಿಲು ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿಯವರು (PM Narendra Modi) ಹಲವು ಯೋಜನೆಗಳಿಗೆ ಶಂಕುಸ್ಥಾಪನೆಯನ್ನು ನೆರವೇರಿಸಿದ್ದಾರೆ. ಇದೇ ವೇಳೆ ಕಲಬುರಗಿಯನ್ನು (Kalaburagi News) ಹಾದು ಹೋಗುವ ಪ್ರವೇಶ ನಿಯಂತ್ರಿತ ಸೂರತ್-ಚೆನ್ನೈ ಗ್ರೀನ್ ಫೀಲ್ಡ್ ಹೈವೆಗೂ (Surat- Chennai Green Field Highway) ಸಹ ಚಾಲನೆ ನೀಡಿದ್ದಾರೆ ಪ್ರಧಾನಿ ಮೋದಿ.
ಈ ಹೈವೆ ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿ ಸೇರಿದಂತೆ ರಾಯಚೂರು, ಯಾದಗಿರಿ ಮಾರ್ಗವಾಗಿ ಹಾದು ಹೋಗುವುದರಿಂದ ಈ ಭಾಗದ ಸಮಗ್ರ ಅಭಿವೃದ್ಧಿಗೆ ಸಹಕಾರವಾಗಲಿದೆ.
ಬಡದಾಳದಿಂದ ಆರಂಭವಾಗಲಿದೆ ಈ 6 ಪಥದ ಹೆದ್ದಾರಿ
ಕಲಬುರಗಿ ಅಫಜಲಪುರ ತಾಲೂಕಿನ ಬಡದಾಳದಿಂದ ಆರಂಭವಾಗುವ 6 ಪಥದ ಈ ರಾಷ್ಟ್ರೀಯ ಹೆದ್ದಾರಿ, ಗಾಣಗಾಪುರ, ಜೇವರ್ಗಿ, ಮುಂಡರಗಿ, ಆಂದೋಲ ಮಾರ್ಗವಾಗಿ ಯಾದಗಿರಿ ಜಿಲ್ಲೆಯ ಅಣಬಿಗೆ ಸಾಗಲಿದೆ.
ಎಂಟು ಗಂಟೆಗಳ ಕಾಲ ಪ್ರಯಾಣದ ಅವಧಿ ಕಡಿಮೆ
ಈ ಯೋಜನೆಯು ಸಾಕಾರಗೊಂಡಲ್ಲಿ ಸೂರತ್-ಚೆನ್ನೈ ನಡುವೆ 330 ಕಿ.ಮಿ ಪ್ರಯಾಣ ಅಂತರ ಹಾಗೂ ಎಂಟು ಗಂಟೆಗಳ ಕಾಲ ಪ್ರಯಾಣದ ಅವಧಿ ಕೂಡ ಕಡಿಮೆಯಾಗಲಿದೆ. 6 ಪಥದ ಈ ಹೆದ್ದಾರಿ ನಿರ್ಮಾಣದಿಂದ ಹಲವು ಜಿಲ್ಲೆಗಳ ಕೃಷಿ, ಕೈಗಾರಿಕೆ ಹಾಗೂ ಆರ್ಥಿಕತೆಗೆ ಉತ್ತೇಜನ ದೊರೆಯಲಿದೆ.
ಇದನ್ನೂ ಓದಿ: Kalaburagi Goshala: 200 ಕ್ಕೂ ಹೆಚ್ಚು ಗೋವುಗಳಿಗೆ 'ಪುಣ್ಯಕೋಟಿ'ಯ ಆಶ್ರಯ, ಕೃಷಿಕರಿಗೂ ಲಾಭ!
ಹಲವು ರಾಜ್ಯಗಳಿಗೆ ಸಂಪರ್ಕ
ಭಾರತ ಮಾಲಾ ಯೋಜನೆಯಲ್ಲಿ 50 ಸಾವಿರ ಕೋಟಿ ವೆಚ್ಚದ ಈ ಹೈವೆ 1,461 ಕಿ.ಮಿ ಉದ್ದದ ರಾಷ್ಟೀಯ ಹೆದ್ದಾರಿ 150-ಸಿ ಎಕ್ಸ್ಪ್ರೆಸ್ ವೇ ಗುಜರಾತ್, ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳ ಸಂಪರ್ಕವನ್ನು ಕಲ್ಪಿಸಲಿದೆ.
ಇದನ್ನೂ ಓದಿ: Kalaburagi: ಶ್ರೀಕೃಷ್ಣನಿಗೆ 56 ಬಗೆಯ ನೈವೇದ್ಯ! ವಿಶೇಷ ಸೇವೆ ಕಣ್ತುಂಬಿಸಿಕೊಳ್ಳಿ
ರಾಜ್ಯದ ಏಕೈಕ ಮತ್ತು ಮೊದಲ ಗ್ರೀನ್ ಫೀಲ್ಡ್ ಕಾರಿಡಾರ್
ರಾಜ್ಯದ ಕಲ್ಯಾಣ ಕರ್ನಾಟಕದ ಜಿಲ್ಲೆಗಳಾದ ಕಲಬುರಗಿ ರಾಯಚೂರು, ಯಾದಗಿರಿ ಜಿಲ್ಲೆಗಳ ಸಂಪರ್ಕವನ್ನು ಕಲ್ಪಿಸಲಿದ್ದು, ರಾಜ್ಯದ ಏಕೈಕ ಮತ್ತು ಮೊದಲ ಗ್ರೀನ್ ಫೀಲ್ಡ್ ಕಾರಿಡಾರ್ ಇದಾಗಿದೆ.
ವರದಿ: ಶ್ರೀಕಾಂತ ಬಿರಾಳ, ಕಲಬುರಗಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ