ಕಲಬುರಗಿ: ಕಲಬುರಗಿ ನಗರದಲ್ಲಿ (Kalaburagi News) ನೀವೇನಾದರೂ ಉದ್ಯಮ ನಡೆಸುತ್ತಿದ್ದೀರ? ಉದ್ದಿಮೆ ಪರವಾನಗಿ ಸಮಯ ಅಂತ್ಯವಾಗಿದೆಯೇ? ಅಥವಾ ಇನ್ನೇನು ಪರವಾನಗಿ ಅಂತ್ಯ ಆಗೋದರಲ್ಲಿದೆಯೇ? ಹಾಗಿದ್ರೆ ಕೂಡಲೇ ನವೀಕರಣ ಮಾಡಿಕೊಂಡು ದಂಡ ವಿಧಿಸಿಕೊಳ್ಳುವುದರಿಂದ ತಪ್ಪಿಸಿಕೊಳ್ಳಬಹುದಾಗಿದೆ. ಉದ್ದಿಮೆ ಪರವಾನಗಿ ನವೀಕರಣ ಹಾಗೂ ಹೊಸ ಉದ್ದಿಮೆ (Business) ಪರವಾನಗಿ ಪಡೆಯಲು ಆಸಕ್ತರಿರುವವರಿಗಾಗಿಯೇ ಕಲಬುರಗಿ ಮಹಾನಗರ ಪಾಲಿಕೆ 2 ದಿನಗಳ ವಿಶೇಷ ಉದ್ದಿಮೆ ಪರವಾನಗಿ ಶಿಬಿರವನ್ನು ಆಯೋಜಿಸಿದೆ. ಹೀಗಾಗಿ ಉದ್ಯಮಿಗಳು, ವ್ಯಾಪಾರಿಗಳು ಈ ಎರಡು ದಿನಗಳ ಉದ್ದಿಮೆ ಪರವಾನಗಿ ಶಿಬಿರದ ಲಾಭವನ್ನು ಪಡೆಯಬಹುದಾಗಿದೆ.
ಯಾವಾಗ ಉದ್ದಿಮೆ ಪರವಾನಗಿ ಶಿಬಿರ?
ಕಲಬುರಗಿ ಮಹಾನಗರ ಪಾಲಿಕೆಯು ಡಿಸೆಂಬರ್ 24 ಹಾಗೂ 25 ನಗರದ ಎರಡು ಪ್ರತ್ಯೇಕ ಸ್ಥಳದಲ್ಲಿ ದಿನವಿಡೀ ನೋಂದಣಿ ಪ್ರಕ್ರಿಯೆಯ ಶಿಬಿರವನ್ನು ನಡೆಸಲಿದೆ.
ಡಿಸೆಂಬರ್ 24 ರಂದು ನಗರದ ಮುಸ್ಲಿಂ ಕಾಲೋನಿಯ ತಾಜ್ ನಗರದ ಬಳಿ ಹಾಗೂ ಡಿಸೆಂಬರ್ 25 ರಂದು ಮೋಮಿನಪುರ ಮಿಜಗೋರಿಯ ಅಲ್ ಸಗೀರ್ ಸಭಾಂಗಣದಲ್ಲಿ ನಡೆಯಲಿದೆ.
ಶಿಬಿರದ ಸಮಯ
ಉದ್ದಿಮೆ ಪರವಾನಿಗೆ ನವೀಕರಣ ಹಾಗೂ ಹೊಸದಾದ ನೋಂದಣಿಯು ಈ ಎರಡು ದಿನಗಳಲ್ಲಿ ನಿಗದಿತ ಸ್ಥಳದಲ್ಲಿ ಬೆಳಿಗ್ಗೆ 10 ಗಂಟೆಯಿಂದ ಸಾಯಂಕಾಲ 5 ಗಂಟೆಯವರೆಗೆ ನಡೆಯಲಿದೆ.
ನೋಂದಣಿಗೆ ಬೇಕಾದ ದಾಖಲಾತಿ
ನೋಂದಣಿ ಶಿಬಿರದಲ್ಲಿ ಪಾಲ್ಗೊಳ್ಳುವ ಉದ್ದಿಮೆದಾರರು, ವ್ಯಾಪಾರಿಗಳು ಆಧಾರ್ ಪ್ರತಿ, ಬಾಡಿಗೆ ಕರಾರು ಪತ್ರ, ಚಾಲ್ತಿ ವರ್ಷದ ತೆರಿಗೆ ಪಾವತಿ ರಶೀದಿ, 2 ಪಾಸ್ ಪೋರ್ಟ್ ಸೈಜಿನ ಭಾವಚಿತ್ರ ಹಾಗೂ ನಿರಕ್ಷೇಪಣಾ / ಸ್ವಯಂ ಘೋಷಣಾ ಪತ್ರಗಳನ್ನು ಸಲ್ಲಿಸಬೇಕಾಗುತ್ತದೆ.
ಇದನ್ನೂ ಓದಿ: Kalaburagi: ಯೂಟ್ಯೂಬ್ ನೋಡಿ ಹಾವು ಹಿಡಿಯಲು ಕಲಿತ ಯುವಕ!
ನಿಯಮ ಉಲ್ಲಂಘಿಸಿದ್ದಲ್ಲಿ ಕ್ರಮ
ಇನ್ನು ಎರಡು ದಿನಗಳ ಶಿಬಿರದಲ್ಲೂ ಭಾಗವಹಿಸದೇ ಪಾಲಿಕೆಗೆ ವಂಚಿಸಲು ಮುಂದಾದರೆ ಅಂತಹ ವ್ಯಾಪಾರಿಗಳಿಗೆ ದಂಡ ವಿಧಿಸುವುದಾಗಿ ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ