ಕಲಬುರಗಿ: ತೊಗರಿ ನಾಡು ಎನಿಸಿಕೊಂಡ್ರು ಇತ್ತೀಚೆಗೆ ತೊಗರಿ ಬೆಳೆಯಿಂದಲೇ (Toor Dall Farming) ರೈತರು ವಿಮುಖರಾಗಿದ್ರು. ಇನ್ನೇನು ತೊಗರಿ ಕಣಜ ಟೈಟಲ್ಲೇ ಮರೆತು ಹೋಗುವಂತಹ ಸ್ಥಿತಿ ಕಲಬುರಗಿಯಲ್ಲಿ (Kalaburagi News) ನಿರ್ಮಾಣ ಆಗಿತ್ತು. ಆದರೆ ಈಗ ಮತ್ತೆ ತೊಗರಿ ಬೆಳೆಯ ಬೆಲೆ ಚೇತರಿಸಿಕೊಂಡಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ರೈತರು ಮತ್ತೆ ತೊಗರಿಯತ್ತ ಮುಖ ಮಾಡಿದ್ದಾರೆ.
ತೊಗರಿಯಿಂದ ವಿಮುಖರಾಗಿದ್ರು!
ಯೆಸ್, ಕಲಬುರಗಿ ಎಂದಾಕ್ಷಣ ಥಟ್ ಅಂತ ನೆನಪಿಗೆ ಬರೋದು ತೊಗರಿ ಬೆಳೆ. ಆದರೆ, ಇತ್ತೀಚಿಗೆ ತಾವು ಬೆಳೆದ ಬೆಳೆಗೆ ಉತ್ತಮ ಬೆಲೆ ಬಾರದ ಕಾರಣ ರೈತರು ಕಂಗಾಲಾಗಿದ್ರು. ಅಷ್ಟೇ ಅಲ್ಲ, ತೊಗರಿ ಬೆಳೆಯೇ ಬೆಳೆಯೋದೆ ಬೇಡ ಅಂತ ಕೆಲ ರೈತರು ನಿರ್ಧಾರವನ್ನು ಸಹ ಮಾಡಿದ್ದರು. ಅತ್ತ ಸರ್ಕಾರದಿಂದಲೂ ರೈತರಿಗೆ ಸೂಕ್ತ ಬೆಂಬಲ ಬೆಲೆ ಸಿಗಲಿಲ್ಲ.
ಮತ್ತೆ ತೊಗರಿಯತ್ತ ಚಿತ್ತ
ಆದ್ರೆ ಇದೀಗ ಅಡತ್ ಮಾಲೀಕರು ರೈತರ ಬೆನ್ನಿಗೆ ನಿಂತಿದ್ದು, ತೊಗರಿ ಬೆಳೆಗಾರರಿಗೂ ಮತ್ತೆ ಮರಳಿ ತೊಗರಿ ಬೆಳೆಯತ್ತ ಮುಖ ಮಾಡುವಂತೆ ಮಾಡಿದೆ. ಕಲಬುರಗಿಯ ಎಪಿಎಂಸಿ ಅಡತ್ ಮಾಲೀಕರು ರೈತರಿಗೆ ತೊಗರಿ ಮೇಲೆ ಆಸಕ್ತಿ ಹೆಚ್ಚಿಸುವುದರ ಜೊತೆಗೆ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಿದ್ದಾರೆ.
ಏರಿಕೆ ಆಯ್ತು ದರ!
ಎಪಿಎಮ್ಸಿಯಲ್ಲಿ ಪ್ರತಿ ಕ್ವಿಂಟಲ್ ತೊಗರಿಗೆ 8,400 ರೂಪಾಯಿ ದರ ನಿಗದಿ ಮಾಡಲಾಗಿದೆ. ಇದರಿಂದ ರೈತರು ಅಡತ್ಗೆ ತಾವು ಬೆಳೆದ ತೊಗರಿಯನ್ನು ಮಾರಾಟ ಮಾಡಲು ಮುಂದಾಗಿದ್ದಾರೆ. ಕ್ವಿಂಟಲ್ ತೊಗರಿಗೆ ಸರ್ಕಾರ ನಿಗದಿಪಡಿಸಿದ ಎಂಎಸ್ಪಿ ದರ 6,600 ರೂಪಾಯಿ ಮಾತ್ರ. ಆದರೆ ಎಪಿಎಂಸಿ ಅಡತ್ಗಳಲ್ಲಿ 8,400 ರೂ. ಸಿಗುತ್ತಿದ್ದು, ರೈತರು ಖುಷಿಯಾಗಿದ್ದಾರೆ.
ಇದನ್ನೂ ಓದಿ: Kalaburagi: ಬರೋಬ್ಬರಿ 100 ವರ್ಷಗಳಿಂದ ಅನ್ನದಾನ, ಇದೇ ನೋಡಿ ಭಕ್ತಿ ಅಂದ್ರೆ!
ಹೀಗಿದೆ ನೋಡಿ ಲೇಟೆಸ್ಟ್ ದರ
ಕಳೆದ ಹತ್ತು ವರ್ಷದ ಹಿಂದೆ ಅಂದ್ರೆ 2012-13ರಲ್ಲಿ ಕ್ವಿಂಟಲ್ ತೊಗರಿಗೆ 12,000 ರೂಪಾಯಿ ಬೆಲೆ ನೀಡಲಾಗಿತ್ತು. ಅದಾದ ಬಳಿಕ ಇದೇ ಮೊದಲ ಬಾರಿಗೆ 8400 ರೂ. ದರವನ್ನು ನಿಗದಿ ಮಾಡಲಾಗಿದೆ. ಸದ್ಯಕ್ಕೆ ಸರ್ಕಾರದ ಎಂಎಸ್ಪಿ ದರ 6600 ಇದೆ. ಆದರೆ ರೈತರ ಬೇಡಿಕೆ 10,000 ಬೆಂಬಲ ಬೆಲೆ ನೀಡಬೇಕು ಎಂಬುವುದಾಗಿದೆ.
ಇದನ್ನೂ ಓದಿ: Cooker Dhaba: ಈ ಡಾಬಾದಲ್ಲಿ ಎಲ್ಲಾ ಕುಕ್ಕರ್ನಲ್ಲೇ ರೆಡಿಯಾಗುತ್ತೆ! 10 ನಿಮಿಷ ಕಾದರೆ ಸಾಕು ಊಟ ರೆಡಿ!
ಒಟ್ಟಿನಲ್ಲಿ ತೊಗರಿ ಬೆಳೆಗಾರರಿಗೆ ಎಪಿಎಮ್‌ಸಿ ಅಡತ್ ಮಾಲಿಕರು ಉತ್ತಮ ಬೆಲೆ ನೀಡುವ ಮೂಲಕ ರೈತರ ಶ್ರಮಕ್ಕೆ ಒಳ್ಳೆಯ ಬೆಲೆ ನಿಗದಿ ಮಾಡಿದ್ದಾರೆ. ಇದ್ರಿಂದ ರೈತರು ಖುಷಿಯಾಗಿದ್ದು, ತೊಗರಿ ನಾಡಿನಲ್ಲಿ ಮತ್ತೆ ತೊಗರಿ ಬೆಳೆ ಚಟುವಟಿಕೆ ಇನ್ನಷ್ಟು ಸಕ್ರಿಯಗೊಂಡಿದೆ.
ವರದಿ: ಶ್ರೀಕಾಂತ ಬಿರಾಳ, ನ್ಯೂಸ್ 18 ಕನ್ನಡ ಡಿಜಿಟಲ್, ಕಲಬುರಗಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ