• Home
  • »
  • News
  • »
  • kalburgi
  • »
  • Gadinadu Utsav: ವಿದ್ಯಾರ್ಥಿಗಳಲ್ಲಿ ಕನ್ನಡ ಅಭಿಮಾನ ಮೂಡಿಸಿದ ಗಡಿನಾಡು ಉತ್ಸವ

Gadinadu Utsav: ವಿದ್ಯಾರ್ಥಿಗಳಲ್ಲಿ ಕನ್ನಡ ಅಭಿಮಾನ ಮೂಡಿಸಿದ ಗಡಿನಾಡು ಉತ್ಸವ

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಈ ಉತ್ಸವದಲ್ಲಿ ವಿದ್ಯಾರ್ಥಿಗಳು ಉತ್ತರ ಕರ್ನಾಟಕದ ಗ್ರಾಮೀಣ ಸೊಗಡಿನ ರೇಷ್ಮೆ ಹಾಗೂ ಇಳಕಲ್ ಸೀರೆಗಳನ್ನ ತೊಟ್ಟು ಮಿಂಚಿದರು.

  • Share this:

    ಕಲಬುರಗಿ: ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಹೀಗೆ ವೈವಿಧ್ಯಮಯ ಉಡುಪುಗಳನ್ನ ತೊಟ್ಟು ದೇಶ, ಭಾಷೆ, ನಾಡಿನ ಅಭಿಮಾನದ ಹಾಡುಗಳಿಗೆ ಹೆಜ್ಜೆ ಹಾಕುತ್ತಿರುವ ಮಕ್ಕಳು, ನೃತ್ಯ ವೀಕ್ಷಿಸಿ ಸಂಭ್ರಮಿಸುತ್ತಿರುವ ಪೋಷಕರು. ಈ ಎಲ್ಲಾ ದೃಶ್ಯಗಳು ಕಂಡದ್ದು, ಕಲಬುರಗಿಯ  (Kalaburagi News) ಕನ್ನಡ ಭವನದಲ್ಲಿ.


    ಮಕ್ಕಳಿಗೆ ಸಾಹಿತ್ಯ, ಸಂಸ್ಕೃತಿಯಲ್ಲಿ ಆಸಕ್ತಿ ಮೂಡಿಸಬೇಕು ಎಂದು ಕಲಬುರಗಿಯ ಕನ್ನಡ ಭವನದಲ್ಲಿ ಗಡಿನಾಡ ಉತ್ಸವ ಆಯೋಜಿಸಲಾಗಿತ್ತು. ಮಕ್ಕಳಲ್ಲಿ ನಾಡಿನ ಬಗ್ಗೆ ಸ್ವಾಭಿಮಾನ ಹೆಚ್ಚಿಸುವ ನಿಟ್ಟಿನಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಜಂಟಿಯಾಗಿ ಆಯೋಜನೆ ಮಾಡಿದ್ದ ಸಮಾರಂಭ ಅದ್ದೂರಿಯಾಗಿ ಜರುಗಿತು.




    ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಲರವ
    ಕಲಬುರಗಿ ನಗರ ಸೇರಿದಂತೆ ಜಿಲ್ಲೆಯ ವಿವಿಧ ಶಾಲೆಗಳಿಂದ ಆಗಮಿಸಿದ ಮಕ್ಕಳು ನೃತ್ಯ, ಸಂಗೀತ ಹಾಗೂ ನಾಟಕವನ್ನು ಪ್ರದರ್ಶಿಸಿಸುವ ಮೂಲಕ ನೆರೆದವರ ಗಮನಸೆಳೆದರು.


    ಇದನ್ನೂ ಓದಿ: Bhagyavanti Temple: ಭಾಗ್ಯವಂತಿ ದೇವಿಯ ದರ್ಶನದಿಂದ ಅದೃಷ್ಟ ಒಲಿಯುತ್ತಂತೆ!


    ಉತ್ತರ ಕರ್ನಾಟಕದ ಸೊಬಗು
    ವಿದ್ಯಾರ್ಥಿಗಳು ಉತ್ತರ ಕರ್ನಾಟಕದ ಗ್ರಾಮೀಣ ಸೊಗಡಿನ ರೇಷ್ಮೆ ಹಾಗೂ ಇಳಕಲ್ ಸೀರೆಗಳನ್ನ ತೊಟ್ಟು ಮಿಂಚಿದರು. ಹಲವು ವಿದ್ಯಾರ್ಥಿಗಳು ಅದ್ಭುತ ಭಾಷಣ ಮಾಡಿ, ಸ್ವರಚಿತ ಕವಿತೆಗಳನ್ನ ಬರೆದು ವಾಚನ ಮಾಡುವ ಮೂಲಕ ಪ್ರಶಂಸೆ ಗಿಟ್ಟಿಸಿಕೊಂಡರು.


    ಇದನ್ನೂ ಓದಿ: PM Narendra Modi Statue: ಪಿಎಂ ಮೋದಿಯ 60 ಪ್ರತಿಮೆ ತಯಾರಿಸಿದ ಕಲಬುರಗಿ ಕಲಾವಿದ! ಇವ್ರ 'ಆ ಆಸೆ' ಈಡೇರುತ್ತಾ?


    ಒಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಗಡಿನಾಡು ಅಭಿವೃದ್ಧಿ ಪ್ರಾಧಿಕಾರ ಏರ್ಪಡಿಸಿದ್ದ ಗಡಿನಾಡು ಉತ್ಸವದ ಕಲಬುರಗಿ ಜಿಲ್ಲೆಯ ಸಹೃದಯರ ಗಮನ ಸೆಳೆಯಿತು.


    ವರದಿ: ಶ್ರೀಕಾಂತ ಬಿರಾಳ, ಕಲಬುರಗಿ

    Published by:ಗುರುಗಣೇಶ ಡಬ್ಗುಳಿ
    First published: