ಕಲಬುರಗಿ: ಡೊಳ್ಳು, ನಗಾರಿಯ ಸದ್ದು, ಯುವಕರ ಕೇಕೆ ಸಂಭ್ರಮದ ನಡುವೆ ಜಾತ್ರಾ ವೈಭವ. ಮೆರವಣಿಗೆಯಲ್ಲಿ ಸಾಗಿ ಬಂದ ದೇವರ ಪಲ್ಲಕ್ಕಿಗೆ ಭಕ್ತರ ಜೈಕಾರ. ಕೊನೆಗೆ ಈ ವರ್ಷದ ಭವಿಷ್ಯವಾಣಿಯ (Future Predictions) ಪ್ರಕಟ! ಈ ಎಲ್ಲ ದೃಶ್ಯಗಳು ಕಂಡು ಬಂದಿದ್ದು ಕಲಬುರಗಿಯ (Kalaburagi News) ಬೀರಲಿಂಗೇಶ್ವರ (Beeralingeshwara Jatra) ಜಾತ್ರೆಯಲ್ಲಿ.
ಭವಿಷ್ಯವಾಣಿ ಹೇಳುವ ಜಾತ್ರೆಗೆ ಫೇಮಸ್ ಆಗಿರುವ ಜಂಬಗಾ ಬಿ ಗ್ರಾಮದಲ್ಲಿ ಶ್ರೀ ಬೀರಲಿಂಗೇಶ್ವರ ದೇವರ ಜಾತ್ರಾ ಮಹೋತ್ಸವವು ಅದ್ದೂರಿಯಾಗಿ ಜರುಗಿತು. ಭಕ್ತರೆಲ್ಲರೂ ಒಟ್ಟಾಗಿ ವಿಜೃಂಭಣೆಯಿಂದ ಪಲ್ಲಕ್ಕಿ ಮೆರವಣಿಗೆ ನಡೆಸಿ ಭಂಡಾರದ ಓಕುಳಿಯಲ್ಲಿ ಮಿಂದೆದ್ದರು. ಡೊಳ್ಳು ಕುಣಿತ, ಭಂಡಾರ ಓಕುಳಿ ಭಕ್ತರ ಸಂಭ್ರಮ ಹೆಚ್ಚಿಸಿತ್ತು.
ಪೂಜೆ ಪುನಸ್ಕಾರ
ಗ್ರಾಮದಲ್ಲಿ ನಡೆದ ಬೀರಲಿಂಗೇಶ್ವರ ದೇವರ ಜಾತ್ರಾ ವೈಭವ, ಧಾರ್ಮಿಕ ಕಾರ್ಯಕ್ರಮಗಳು ಭಕ್ತರ ಭಕ್ತಿ ಇಮ್ಮಡಿಗೊಳಿಸಿತು. ಇನ್ನು ಅದ್ದೂರಿ ಪಲ್ಲಕ್ಕಿ ಉತ್ಸವಕ್ಕಂತೂ ಜನಸಾಗರವೇ ಸೇರಿತ್ತು. ಇನ್ನು ಜಾತ್ರಾ ನಿಮಿತ್ತ ಬೀರಲಿಂಗೇಶ್ವರ ದೇವರಿಗೆ ರುದ್ರಾಭಿಷೇಕ, ಮಹಾಪೂಜೆ ನೆರವೇರಿತು.
ಈ ವರ್ಷದ ಭವಿಷ್ಯ ಹೀಗಿದೆ
ಜಾತ್ರೋತ್ಸವದ ಹಿನ್ನಲೆ ನರೋಣಾದ ಕ್ಷೇಮಲಿಂಗೇಶ್ವರ ದೇವಸ್ಥಾನದ ಕೆರೆಯಲ್ಲಿ ಗಂಗಾಸ್ನಾನ ಕಾರ್ಯಕ್ರಮ ನೆರವೇರಿತು. ಬಳಿಕ ಗ್ರಾಮದ ತುಂಬೆಲ್ಲ ಪಲ್ಲಕ್ಕಿ ಮೆರವಣಿಗೆ ನಡೆಯಿತು. ನಂತರ ವಿವಿಧ ಕಡೆಗಳಿಂದ ಆಗಮಿಸಿದ ಭಕ್ತರು ಬೀರಲಿಂಗೇಶ್ವರ ದೇವರ ದರ್ಶನ ಪಡೆದು ದೇವರಿಗೆ ಹರಕೆ ಸಮರ್ಪಿಸಿ ಪುನೀತರಾದರು.
ಇದನ್ನೂ ಓದಿ: Kalaburagi: ಪಕ್ಷಿಗಳ ದಾಹ ಇಂಗಿಸಲು ಕಲಬುರಗಿ ಯುವಕರ ಹೊಸ ಉಪಾಯ!
ಇದೇ ಸಂದರ್ಭ ದೇವಸ್ಥಾನ ಅರ್ಚಕರು ಈ ಬಾರಿ ರಾಜ್ಯದಲ್ಲಿ ಉತ್ತಮ ಮಳೆ, ಬೆಳೆಯಾಗಿ ಜನ ಸಮೃದ್ಧಿಯಿಂದ ಬದುಕುತ್ತಾರೆ ಎಂದು ಭವಿಷ್ಯವಾಣಿ ನುಡಿದರು.
ಇದನ್ನೂ ಓದಿ: Cooker Dhaba: ಈ ಡಾಬಾದಲ್ಲಿ ಎಲ್ಲಾ ಕುಕ್ಕರ್ನಲ್ಲೇ ರೆಡಿಯಾಗುತ್ತೆ! 10 ನಿಮಿಷ ಕಾದರೆ ಸಾಕು ಊಟ ರೆಡಿ!
ಜಾತ್ರಾ ಮಹೋತ್ಸವದಲ್ಲಿ ವಿವಿಧ ಮಠಾಧೀಶರು ಭಾಗವಹಿಸಿದರು. ದೇವಸ್ಥಾನಕ್ಕೆ ಆಗಮಿಸಿದ ಭಕ್ತರು ಜಾತ್ರಾ ಸಮಿತಿ ವತಿಯಿಂದ ಏರ್ಪಡಿಸಿದ ದಾಸೋಹದಲ್ಲಿ ಪ್ರಸಾದ ಸೇವಿಸಿ ಬೀರಲಿಂಗೇಶ್ವರ ದೇವರ ಕೃಪೆಗೆ ಪಾತ್ರರಾದರು.
ವರದಿ: ಶ್ರೀಕಾಂತ ಬಿರಾಳ, ನ್ಯೂಸ್ 18 ಕನ್ನಡ ಡಿಜಿಟಲ್, ಕಲಬುರಗಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ