Kalaburagi News: ಕಿವುಡು ಮಕ್ಕಳ ಉಚಿತ ಶಿಕ್ಷಣಕ್ಕೆ ಅರ್ಜಿ ಆಹ್ವಾನ, ಹೀಗೆ ಅಪ್ಲೈ ಮಾಡಿ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಶೈಕ್ಷಣಿಕ ಅವಧಿಯಲ್ಲಿ ಕಿವುಡು ಬಾಲಕರಿಗೆ ಉಚಿತ ಊಟ, ವಸತಿ, ಹಾಸಿಗೆ, ಹೊದಿಕೆ, ಪಠ್ಯ ಪುಸ್ತಕಗಳು ಹಾಗೂ ವೈದ್ಯಕೀಯ ಮತ್ತಿತರ ಸೌಲಭ್ಯಗಳನ್ನು ನೀಡಲಾಗುತ್ತದೆ.

  • News18 Kannada
  • 5-MIN READ
  • Last Updated :
  • Gulbarga, India
  • Share this:

ಕಲಬುರಗಿ: ನಗರದ ಆಳಂದ ಕಾಲೋನಿಯ ಕಿವುಡ ಮಕ್ಕಳ ಸರ್ಕಾರಿ ಶಾಲೆಯಲ್ಲಿ 2023-24ನೇ ಶೈಕ್ಷಣಿಕ ಸಾಲಿಗೆ ಪೂರ್ವ ಪ್ರಾಥಮಿಕದಿಂದ 7ನೇ ತರಗತಿಯವರೆಗೆ ಪ್ರವೇಶ ಪಡೆಯಲು ಅರ್ಹ ಕಿವುಡ ಬಾಲಕರಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವ ಮೂಲಕ ಇದರ ಸದುಪಯೋಗವನ್ನು ಪಡೆಯಬಹುದಾಗಿದೆ.


ಯಾರೆಲ್ಲ ಅರ್ಜಿ ಸಲ್ಲಿಸಬಹುದು?
ಒಂದನೇ ತರಗತಿಗೆ ಪ್ರವೇಶ ಪಡೆಯಲು ವಯೋಮಿತಿ 6 ರಿಂದ 9 ವರ್ಷದೊಳಗಿನ ಕಿವುಡ ಬಾಲಕರು ಅರ್ಜಿ ಸಲ್ಲಿಸಬಹುದಾಗಿದೆ. ಈಗಾಗಲೇ ಇತರೆ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣ ಪಡೆಯುತ್ತಿರುವ ಕಿವುಡ ಮಕ್ಕಳು ಪ್ರವೇಶ ಬಯಸಿದಲ್ಲಿ ಅವರನ್ನೂ ಸಹ ದಾಖಲಾತಿ ಮಾಡಿಕೊಳ್ಳಲಾಗುವುದು.


ಇದನ್ನೂ ಓದಿ: Kalaburagi Success Story: ಸಾವಯವ ಬೆಲ್ಲದಿಂದ ಲಕ್ಷಾಧಿಪತಿಗಳಾದ ಅಣ್ಣ ತಮ್ಮಂದಿರು!


ಉಚಿತ ವಸತಿ ಸೌಲಭ್ಯ
ಈ ಸಂಸ್ಥೆಯಲ್ಲಿ ಕಿವುಡ ಬಾಲಕರಿಗೆ ಉಚಿತ ವಸತಿಯುತ ಹಾಗೂ ಬಾಹ್ಯ ವಿದ್ಯಾರ್ಥಿಗಳಿಗೆ ಉಚಿತವಾಗಿ ಪೂರ್ವ ಪ್ರಾಥಮಿಕ ತರಗತಿಯಿಂದ 7ನೇ ತರಗತಿಯವರಗೆ ಬೋಧನಾ ವ್ಯವಸ್ಥೆಯನ್ನು ಕಲ್ಪಿಸಲಾಗುವುದು. ಶೈಕ್ಷಣಿಕ ಅವಧಿಯಲ್ಲಿ ಕಿವುಡು ಬಾಲಕರಿಗೆ ಉಚಿತ ಊಟ, ವಸತಿ, ಹಾಸಿಗೆ, ಹೊದಿಕೆ, ಪಠ್ಯ ಪುಸ್ತಕಗಳು ಹಾಗೂ ವೈದ್ಯಕೀಯ ಮತ್ತಿತರ ಸೌಲಭ್ಯಗಳನ್ನು ನೀಡಲಾಗುತ್ತದೆ.




ಅರ್ಜಿ ಸಲ್ಲಿಸುವ ವಿಧಾನ
ಪ್ರವೇಶ ಪಡೆಯಲು ಕಿವುಡ ಬಾಲಕರ ತಂದೆ-ತಾಯಿ ಅಥವಾ ಪೋಷಕರು ಕಲಬುರಗಿ ಕಿವುಡ ಮಕ್ಕಳ ಸರ್ಕಾರಿ ಶಾಲೆಗೆ ಭೇಟಿ ನೀಡಿ ನಿಗದಿತ ಅರ್ಜಿ ನಮೂನೆಯನ್ನು ಶಾಲೆಯ ಕಚೇರಿಯಿಂದ ಉಚಿತವಾಗಿ ಪಡೆದು ಭರ್ತಿ ಮಾಡಿ ಅಗತ್ಯ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ.


ಇದನ್ನೂ ಓದಿ: Free Hostel: ವಿದ್ಯಾರ್ಥಿಗಳಿಗೆ ಉಚಿತ ಹಾಸ್ಟೆಲ್ ಸೌಲಭ್ಯ, ಈಗಲೇ ಹೀಗೆ ಅರ್ಜಿ ಸಲ್ಲಿಸಿ


ಹೆಚ್ಚಿನ ಮಾಹಿತಿಗಾಗಿ
ಅರ್ಜಿಯೊಂದಿಗೆ ಲಗತ್ತಿಸಬೇಕಾದ ದಾಖಲೆಗಳು ಹಾಗೂ ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಶಾಲೆಯ ಅಧೀಕ್ಷಕರಿಗೆ ಅಥವಾ ದೂರವಾಣಿ ಸಂಖ್ಯೆ 08472-274963 ಇಲ್ಲವೇ ಮೊಬೈಲ್ ಸಂಖ್ಯೆ 9741953333, 9731351462, 8431855508 ಗಳಿಗೆ ಸಂಪರ್ಕಿಸಲು ಕೋರಲಾಗಿದೆ.


ವರದಿ: ಶ್ರೀಕಾಂತ ಬಿರಾಳ, ನ್ಯೂಸ್ 18 ಕನ್ನಡ ಡಿಜಿಟಲ್, ಕಲಬುರಗಿ

First published: