ಕಲಬುರಗಿ: ಮೆಟ್ರಿಕ್ ನಂತರ ಶಿಕ್ಷಣ ಪಡೆಯುತ್ತಿರುವ ಕೋಲಿ ಸಮುದಾಯದ ಬಡ ಮಕ್ಕಳಿಗೆ ಸಿಹಿಸುದ್ದಿಯೊಂದು ಇಲ್ಲಿದೆ. ಅರ್ಹ ಕೋಲಿ ಸಮುದಾಯದ ಮಕ್ಕಳಿಗೆ ಮಹರ್ಷಿ ವೇದ ವ್ಯಾಸ ಮಂಥನ ಮತ್ತು ಪ್ರೇರಣ ಟ್ರಸ್ಟ್ ವತಿಯಿಂದ ಉಚಿತ ವಸತಿ ನಿಲಯಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ. ಸೂಕ್ತ ದಾಖಲಾತಿ, ಅರ್ಹತೆ ಇದ್ದಲ್ಲಿ ಅಂತಹ ವಿದ್ಯಾರ್ಥಿಗಳು ಮೆಟ್ರಿಕ್ ನಂತರದ ಶಿಕ್ಷಣವನ್ನು ಉಚಿತ ವಸತಿಯೊಂದಿಗೆ ಪಡೆಯಬಹುದಾಗಿದೆ.
ಸೌಲಭ್ಯ ನೀಡುತ್ತಿರುವ ಸಂಸ್ಥೆ | ಪ್ರೇರಣ ಟ್ರಸ್ಟ್ |
ಎಲ್ಲಿದೆ ವಸತಿ ನಿಲಯ? | ಕಲಬುರಗಿ ನಗರದ ಹೀರಾಪುರ ಮುಖ್ಯ ರಸ್ತೆಯ ಡಾ. ಬಿ ಆರ್ ಅಂಬೇಡ್ಕರ್ ವೃತ್ತದ ಸಮೀಪ |
ಅರ್ಜಿ ಎಲ್ಲಿ ಸಿಗುತ್ತೆ? | ವಸತಿ ನಿಲಯದಲ್ಲಿ |
ಕೊನೆಯ ದಿನಾಂಕ | ಏಪ್ರಿಲ್ 25 |
ಹೆಚ್ಚಿನ ಮಾಹಿತಿಗಾಗಿ | 9606385688 ಅಥವಾ 9448045396 |
ಎಲ್ಲಿದೆ ವಸತಿ ನಿಲಯ?
ಕೋಲಿ ಸಮುದಾಯದ ಬಡ ವಿದ್ಯಾರ್ಥಿಗಳಿಗಾಗಿ 2023-24 ನೇ ಸಾಲಿಗೆ ಈ ಅರ್ಜಿ ಆಹ್ವಾನಿಸಲಾಗಿದೆ. ಕಲಬುರಗಿ ನಗರದ ಹೀರಾಪುರ ಮುಖ್ಯ ರಸ್ತೆಯ ಡಾ. ಬಿ ಆರ್ ಅಂಬೇಡ್ಕರ್ ವೃತ್ತದ ಸಮೀಪದಲ್ಲಿರುವ ಜೆಡಿಎ ಕಾಲೋನಿಯಲ್ಲಿರುವ ವಸತಿ ನಿಲಯಕ್ಕೆ ಅರ್ಜಿ ಆಹ್ವಾನಿಸಲಾಗಿದ್ದು ಕೂಡಲೇ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಕೆ ಹೇಗೆ?
ಅರ್ಹ ಕೋಲಿ ಸಮುದಾಯದ ಅಭ್ಯರ್ಥಿಗಳು ವಸತಿ ನಿಲಯದಲ್ಲಿ ನಮೂದಿಸಿದ ಅರ್ಜಿಯನ್ನು ಪಡೆದು ಭರ್ತಿ ಮಾಡಿ ಸಲ್ಲಿಸಬೇಕಾಗುತ್ತದೆ.
ಕೊನೆ ದಿನಾಂಕ
ಅರ್ಹ ಅಭ್ಯರ್ಥಿಗಳು ಅರ್ಜಿ ಪಡೆದು ಏಪ್ರಿಲ್ 25 ರ ಒಳಗಾಗಿ ನೀಡುವಂತೆ ಸೂಚನೆ ನೀಡಲಾಗಿದೆ.
ಇದನ್ನೂ ಓದಿ: Summer Camp In Kalaburagi: ಕಲಬುರಗಿ ರಂಗಾಯಣದಲ್ಲಿ ಮಕ್ಕಳಿಗೆ ವಿಶೇಷ ಶಿಬಿರ, ಇಲ್ಲಿದೆ ವಿವರ
ಹೆಚ್ಚಿನ ಮಾಹಿತಿಗಾಗಿ ಇವರನ್ನು ಸಂಪರ್ಕಿಸಿ
ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಡಾ. ಮಲ್ಲಿಕಾರ್ಜುನ ಮುಕ್ಕಾ-9606385688, ಅಭಿಷೇಕ-9448045396 ದೂರವಾಣಿ ಸಂಖ್ಯೆ ಕರೆ ಮಾಡಿ ಮಾಹಿತಿ ಪಡೆಯಬಹುದಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ