• Home
  • »
  • News
  • »
  • kalburgi
  • »
  • Guleda Lakkamma: ಚಪ್ಪಲಿಯಿಂದ ಮುಖ, ಮೈಕೈ ಸವರಿಕೊಂಡ್ರೆ ಒಳ್ಳೇದು ಮಾಡುವ ದೇವರು!

Guleda Lakkamma: ಚಪ್ಪಲಿಯಿಂದ ಮುಖ, ಮೈಕೈ ಸವರಿಕೊಂಡ್ರೆ ಒಳ್ಳೇದು ಮಾಡುವ ದೇವರು!

ಇಲ್ಲಿ ನೋಡಿ ವಿಡಿಯೋ

"ಇಲ್ಲಿ ನೋಡಿ ವಿಡಿಯೋ"

ಸಸ್ಯಹಾರಿ ಭಕ್ತರು ಹೋಳಿಗೆ ಅರ್ಪಿಸಿದರೆ, ನಾನ್ ವೆಜ್ ಭಕ್ತರು ಕುರಿ ಮತ್ತು ಕೋಳಿಗಳನ್ನು ಬಲಿಕೊಟ್ಟು ಲಕ್ಕಮ್ಮನಿಗೆ ರಕ್ತತರ್ಪಣ ಮಾಡ್ತಾರೆ.

  • News18 Kannada
  • Last Updated :
  • Gulbarga, India
  • Share this:

    ಕಲಬುರಗಿ: ತೂಗು ಹಾಕಿರೋ ಚಪ್ಪಲಿಗಳು. ಅವುಗಳನ್ನ ತಲೆಗೆ ಸವರಿಕೊಳ್ತಿರೋ ಭಕ್ತರು. ಅರೇ! ಇದೇನು ವಿಚಿತ್ರವಾಗಿದೆಯಲ್ಲ! ಅಂದ್ಕೊಂಡ್ರಾ? ಕಲಬುರಗಿಯ ಗುಳೇದ ಲಕ್ಕಮ್ಮ ಜಾತ್ರೆಯ (Guleda Lakkamma Temple) ವಿಶೇಷವೇ ಇದು. ಬನ್ನಿ, ನಾವೂ ಒಂದ ಸುತ್ತು ಜಾತ್ರೆ ಸುತ್ತಾಡಿಬರೋಣ. ಜಾತ್ರೆ ಅಂದ್ಮೇಲೆ ಭಕ್ತರಿಗೆ ಬರವಿಲ್ಲ ಅಂತಾರಲ್ಲ..ಹಾಗೇ, ಗುಳೇದ ಲಕ್ಕಮ್ಮ ಜಾತ್ರೆಗೆ ಇಡೀ ಊರಿಗೆ ಊರೇ ಒಂದಾಗ್ತದೆ. ಸಹಸ್ರಾರು ಭಕ್ತರ ನಡುವೆ ಲಕ್ಕಮ್ಮ ದೇವರಿಗೆ (Goddess Lakkamma)ಪೂಜೆ ನಡೆಯುತ್ತದೆ. ವಿಶೇಷ ಅಂದ್ರೆ, ದೇವರಿಗೆ ಮುಖಕ್ಕೆ ಪೂಜೆ ಸಲ್ಲಿಸೋದು ವಾಡಿಕೆ. ಆದರೆ ಗುಳೇದ ಲಕ್ಕಮ್ಮನಿಗೆ ಪೂಜೆ ಸಲ್ಲಿಸೋ ರೀತಿನೇ ಬೇರೆಯಿದೆ!


    ಮಾಂಸಾಹಾರ ಸೇವಿಸಿದಳೆಂಬ ಕಾರಣಕ್ಕೆ ಧುತ್ತರಗಾಂವ ಗ್ರಾಮದ ಈರಣ್ಣ ಲಕ್ಕಮ್ಮನ ಬೆನ್ನತ್ತಿ ಬಂದನಂತೆ. ಈರಣ್ಣನಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಓಡ್ತಾ ಬಂದ ಲಕ್ಕಮ್ಮ ಗೋಳಾ ಗ್ರಾಮದ ಬಳಿ ಪಲ್ಟಿಯಾಗಿ ಬಿದ್ದಳಂತೆ. ಹಾಗೆ ಲಕ್ಕಮ್ಮ ಬೋರಲು ಬಿದ್ದ ಸ್ಥಿತಿಯಲ್ಲಿಯೇ ಭಕ್ತರು ಪೂಜೆ ಸಲ್ಲಿಸುವ ಸಂಪ್ರದಾಯ ಮುಂದುವರೆಸಿಕೊಂಡು ಬಂದಿದ್ದಾರೆ.


    ಲಕ್ಕಮ್ಮನಿಗೆ ರಕ್ತತರ್ಪಣ!
    ಇನ್ನು ಕೆಲವು ಭಕ್ತರು ಚಪ್ಪಲಿಗಳನ್ನು ಹರಕೆ ರೂಪದಲ್ಲಿ ನೀಡ್ತಾರೆ. ಅಲ್ಲದೇ ತೂಗುಹಾಕುವ ಹರಕೆಯ ಚಪ್ಪಲಿಗಳಿಂದ ತಮ್ಮ ಮುಖ, ಮೈ ಕೈಗಳಿಗೆ ಸವರಿಕೊಳ್ಳುತ್ತಾರೆ. ಸಸ್ಯಹಾರಿ ಭಕ್ತರು ಹೋಳಿಗೆ ಅರ್ಪಿಸಿದರೆ, ನಾನ್ ವೆಜ್ ಭಕ್ತರು ಕುರಿ ಮತ್ತು ಕೋಳಿಗಳನ್ನು ಬಲಿಕೊಟ್ಟು ಲಕ್ಕಮ್ಮನಿಗೆ ರಕ್ತತರ್ಪಣ ಮಾಡ್ತಾರೆ.


    ಇದನ್ನೂ ಓದಿ: Puneeth Rajkumar Temple: ಅಭಿಮಾನಿಯಿಂದ ಅಪ್ಪು ದೇವಸ್ಥಾನ ನಿರ್ಮಾಣ! ಬ್ರಹ್ಮ, ವಿಷ್ಣು, ಮಹೇಶ್ವರ ಎಲ್ಲಾ ನೀವೇ ಎಂದ ಫ್ಯಾನ್ಸ್


    ಇನ್ನು ಊರಿನಿಂದ ಕಳಶದ ಮೆರವಣಿಗೆಯ ಆಗಮನದ ನಂತ್ರ ದೇವಸ್ಥಾನದಲ್ಲಿ ಯಾರೂ ಉಳಿಯಲ್ಲ. ರಾತ್ರಿ ವೇಳೆ ದೆವ್ವಗಳು ಲಕ್ಕಮ್ಮನ ಜಾತ್ರೆ ನಡೆಸುತ್ತವೆ ಎಂಬ ನಂಬಿಕೆಯಿದೆ. ಹೀಗಾಗಿ ರಾತ್ರಿ ಯಾವ ಭಕ್ತರೂ ದೇವಸ್ಥಾನದ ಕಡೆ ಸುಳಿಯುವುದಿಲ್ಲ.


    ಇದನ್ನೂ ಓದಿ: Rajyotsava Award: ಓದಿದ್ದು 7ನೇ ಕ್ಲಾಸ್, ರಾಜ್ಯೋತ್ಸವ ಪ್ರಶಸ್ತಿಯೇ ಒಲಿದು ಬಂತು!


    Guledda Lakkamma Location
    ದೇವಸ್ಥಾನಕ್ಕೆ ಹೀಗೆ ಬನ್ನಿ ( ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)


    ಹೀಗೆ ಹತ್ತು ಹಲವು ವಿಶಿಷ್ಟ ಪೂಜೆ, ಆಚರಣೆಗಳ ಗುಳೇದ ಲಕ್ಕಮ್ಮ ಜಾತ್ರೆಗೆ ಊರೂರಿಂದಲೂ ಜನಸಾಗರವೇ ಹರಿದುಬರುತ್ತದೆ. ದರ್ಶನ ಮಾಡಿ, ಆಚರಣೆಗಳನ್ನ ಪೂರೈಸಿ ಕೈಮುಗಿಯುತ್ತಾರೆ.


    ವರದಿ: ಶ್ರೀಕಾಂತ ಬಿರಾಳ, ಕಲಬುರಗಿ

    Published by:ಗುರುಗಣೇಶ ಡಬ್ಗುಳಿ
    First published: