Kalaburagi: ಪಿಯುಸಿ ಮಾತ್ರ ಓದಿರೋ ಈ ಮಹಿಳೆ ಭಾರತದ ಮೊದಲ ಮಹಿಳಾ ಸೂಪರ್ ಬಜಾರ್ ಆರಂಭಿಸಿದ್ರು!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಕೇವಲ ಪಿಯುಸಿವರೆಗೂ ಮಾತ್ರ ಓದಿರೋ ಯುಗಾಂತ್ರಿ ದೇಶಮಾನ್ಯೆ, ಮಹಿಳೆಯರು ತಮ್ಮ ಮನೆಯಲ್ಲಿ ತಯಾರಿಸಿರೋ ವಸ್ತುಗಳನ್ನು ಮಾರಾಟ ಮಾಡಲು ಇಡೀ ದೇಶವನ್ನೇ ಸುತ್ತಿದ್ದಾರೆ!

  • News18 Kannada
  • 2-MIN READ
  • Last Updated :
  • Gulbarga, India
  • Share this:

    ಕಲಬುರಗಿ: ಬಿದಿರಿನ ಬುಟ್ಟಿ, ಜೂಟ್ ಐಟಮ್, ಬ್ಯಾಗ್, ಅಲಂಕಾರಿ ವಸ್ತುಗಳು. ಇದರ ಮಧ್ಯೆಯೇ ಅರಳಿದ ಸ್ವಾಭಿಮಾನಿ ಮಹಿಳೆ. ಇಷ್ಟಕ್ಕೇ ಸೀಮಿತವಾಗದೇ ಮಹಿಳಾ ಸಬಲೀಕರಣದ ತುಡಿತ, ಹೆಣ್ಮಕ್ಕಳಲ್ಲಿರುವ ಕೌಶಲಗಳ ಪರಿಚಯ. ಅದಕ್ಕೊಂದು ಸೂಕ್ತ ಮಾರುಕಟ್ಟೆ ವೇದಿಕೆ. ಯೆಸ್, ಇದುವೇ ಮಹಿಳೆಯರಿಗೆ ಸ್ವಾಭಿಮಾನ ಬದುಕು (Positive Story) ಕಲ್ಪಿಸಿಕೊಡೋ ಸ್ವಾಭಿಮಾನಿ (Kalaburagi Success Story) ಮಹಿಳೆಯ ಕಥೆ.


    ಅಂದಹಾಗೆ ಇವರು ಯುಗಾಂತ್ರಿ ದೇಶಮಾನ್ಯೆ. ಕಲಬುರಗಿಯ ಬಾಪೂನಗರ ನಿವಾಸಿ. ಯುಗಾಂತ್ರಿ ದೇಶಮಾನ್ಯೆ. ಅವರು ಕಳೆದ 20 ವರ್ಷಗಳ ಹಿಂದೆಯೇ ತಮ್ಮ ತವರು ಮನೆಯಾಗಿರೋ ಕಲಬುರಗಿ ತಾಲೂಕಿನ ಬೆಳಕೋಟಾ ಗ್ರಾಮದಲ್ಲಿ ಅರುಂತಿ ವಿವಿದ್ದೋದ್ದೇಶ ಮಹಿಳಾ ಸ್ವ-ಸಹಾಯ ಸ್ತ್ರೀ ಶಕ್ತಿ ಸಂಘ ಕಟ್ಟಿಕೊಂಡರು. ಈ ಮೂಲಕ ಮಹಿಳೆಯರು ಹೇಗೆ ಬದುಕು ಕಟ್ಟಿಕೊಳ್ಳಬೇಕು ಎನ್ನೋದನ್ನು ತಿಳಿಸಲು ಪ್ರಾರಂಭಿಸಿದ್ರು.


    ಮಹಿಳಾ ಸೂಪರ್ ಬಜಾರ್
    ಮಹಿಳೆಯರಲ್ಲಿರುವ ಕೌಶಲ್ಯಗಳಿಗೆ ಪ್ರೇರೇಪಿಸಿ, ಅವರು ಮನೆಗಳಲ್ಲಿ ಸಿದ್ದ ಮಾಡುತ್ತಿದ್ದ ವಸ್ತುಗಳಿಗೆ ಮಾರುಕಟ್ಟೆಯನ್ನು ಒದಗಿಸಿಕೊಟ್ಟಿದ್ದಾರೆ. ಅವರಿಗೆ ಬೇಕಾದ ತರಬೇತಿಗಳನ್ನು ಸರಕಾರದಿಂದ ಕೊಡಿಸುವ ಕೆಲಸ ಮಾಡಿದ್ದಾರೆ. ಅಲ್ಲದೇ ಮಹಿಳೆಯದ್ದೇ ಆಗಿರೋ ಒಂದು ಪ್ರತ್ಯೇಕ ಮಹಿಳಾ ಸೂಪರ್ ಬಜಾರ್ ಆರಂಭಿಸುವಂತೆ ಸರಕಾರದ ಮೇಲೆ ಒತ್ತಡ ತಂದು ಅದರಲ್ಲೂ ಯಶಸ್ವಿಯಾದವರು.


    ನೂರಾರು ಮಹಿಳೆಯರಿಗೆ ಉದ್ಯೋಗ
    ಹೀಗೆ ದೇಶದ ಮೊದಲ ಮಹಿಳಾ ಸೂಪರ್ ಬಜಾರ್ ಕಲಬುರಗಿಯಲ್ಲಿ ತಲೆ ಎತ್ತಿರೋದ್ರ ಹಿಂದೆ ಯುಗಾಂತ್ರಿ ದೇಶಮಾನ್ಯೆ ಕೆಲಸ ಮಾಡಿದ್ದರು. ಅವರೊಂದಿಗೆ ಇದೀಗ ನೂರಾರು ಮಹಿಳೆಯರು ಕೂಡಾ ಬದುಕು ಕಟ್ಟಿಕೊಂಡಿದ್ದಾರೆ. ಕೇವಲ ಪಿಯುಸಿವರೆಗೂ ಮಾತ್ರ ಓದಿರೋ ಯುಗಾಂತ್ರಿ ದೇಶಮಾನ್ಯೆ, ಮಹಿಳೆಯರು ತಮ್ಮ ಮನೆಯಲ್ಲಿ ತಯಾರಿಸಿರೋ ವಸ್ತುಗಳನ್ನು ಮಾರಾಟ ಮಾಡಲು ಇಡೀ ದೇಶವನ್ನೇ ಸುತ್ತಿದ್ದಾರೆ.


    ಮಾರ್ಕೆಟಿಂಗ್ ವ್ಯವಸ್ಥೆ
    ಯುಗಾಂತ್ರಿ ಅವರು ದೇಶದ ಯಾವುದೇ ಮೂಲೆಯಲ್ಲಿ ವಸ್ತು ಪ್ರದರ್ಶನ ಆದ್ರೂ ಅಲ್ಲಿಗೆ ಹೋಗಿ ಮಾರ್ಕೆಟಿಂಗ್ ಮಾಡಿದ್ದಾರೆ. ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ಮಹಿಳೆಯರು ತಯಾರಿಸಿರೋ ವಸ್ತುಗಳನ್ನು ಅಲ್ಲಿಯ ಜನಕ್ಕೆ ಪರಿಚಯಿಸಿ ಅವುಗಳನ್ನು ಮಾರಾಟ ಮಾಡ್ತಾರೆ. ಬಿದರಿನ ಬುಟ್ಟಿ, ಜೂಟ್ ಐಟಮ್, ಬ್ಯಾಗ್, ಡೆಕೋರೇಷನ್ ವಸ್ತುಗಳು, ಮುತ್ತಿನ ತುಳಸಿ ಕಟ್ಟೆ, ಮುತ್ತಿನ ದೀಪ ಸೇರಿದಂತೆ ನೂರಾರು ವೆರೈಟಿಯ ವಸ್ತುಗಳನ್ನು ಮಹಿಳೆಯರು ತಮ್ಮ ಮನೆಯಲ್ಲಿ ತಯಾರಿಸಿ ಇವ್ರಿಗೆ ಕೊಟ್ರೆ ಸಾಕು, ಅದಕ್ಕೆ ಬೇಕಾದ ಮಾರುಕಟ್ಟೆ ವ್ಯವಸ್ಥೆ ನೀಡ್ತಾರೆ.


    ಇದನ್ನೂ ಓದಿ: Kalaburagi: ಹೈ ಹೀಲ್ಡ್ ಚಪ್ಪಲಿ ಧರಿಸಿ ಪುರುಷರ ಕ್ಯಾಟ್ ವಾಕ್!




    ಕುಶಲಕರ್ಮಿಯೂ ಹೌದು!
    ಅಲ್ಲದೇ ಸ್ವತ: ಇವರು ಕೂಡ ಕುಶಲಕರ್ಮಿ ಆಗಿದ್ದು ಮನೆಯಲ್ಲಿ ಎಲ್ಲಾ ರೀತಿಯ ವಸ್ತುಗಳನ್ನು ತಯಾರಿಸುತ್ತಾರೆ. ಇದಲ್ಲದೇ ಉತ್ತರ ಕರ್ನಾಟಕ ರೊಟ್ಟಿ, ಶೇಂಗಾ ಹೋಳಿಗೆ ಸೇರಿ ಪ್ರತಿಯೊಂದು ಆಹಾರ ಪದಾರ್ಥಗಳನ್ನು ಸಿದ್ದಪಡಿಸಿ ತಮ್ಮ ಮಳಿಗೆಯಲ್ಲಿ ಮಾರಾಟ ಮಾಡ್ತಿದ್ದಾರೆ.


    ಇದನ್ನೂ ಓದಿ: Temple: ಇಲ್ಲಿ ಮದ್ವೆ ಆಗ್ಬೇಕು ಅಂದ್ರೆ ದೇವಿ ಅಪ್ಪಣೆ ಬೇಕೇ ಬೇಕು!


    ಇವರು ರೂಪಿಸಿದ ಮಹಿಳಾ ಸುಪರ್ ಬಜಾರ್​ನ ಮಹಿಳೆಯರು ತಮ್ಮ ಕೈಯಿಂದ ಸಿದ್ದಪಡಿಸುವ ವಸ್ತುಗಳಿಗೆ ಭರ್ಜರಿ ದರವನ್ನೇ ಪಡೆಯುತ್ತಿದ್ದಾರೆ. ಒಟ್ಟಿನಲ್ಲಿ ಯುಗಾಂತ್ರಿ ದೇಶಮಾನ್ಯೆ ತಾನು ದುಡಿದು, ಇತರರಿಗೂ ಕೆಲಸವನ್ನ ನೀಡಿ ಆ ಮೂಲಕ ಸ್ವಾಭಿಮಾನದ ಬದುಕು ಕಟ್ಟಿಕೊಡೋ ಕ್ಯಾಪ್ಟನ್ ಆಗಿರೋದು ವಿಶೇಷವೇ ಸರಿ.


    ವರದಿ: ಶ್ರೀಕಾಂತ ಬಿರಾಳ, ನ್ಯೂಸ್18 ಕನ್ನಡ ಡಿಜಿಟಲ್, ಕಲಬುರಗಿ

    Published by:ಗುರುಗಣೇಶ ಡಬ್ಗುಳಿ
    First published: