• Home
  • »
  • News
  • »
  • kalburgi
  • »
  • Kalaburagi: ಇದೇ ನೋಡಿ ಕಲಬುರಗಿಯ ಮೊದಲ ಶಾಲೆ!

Kalaburagi: ಇದೇ ನೋಡಿ ಕಲಬುರಗಿಯ ಮೊದಲ ಶಾಲೆ!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಹಳೆಯ ಕಟ್ಟಡದಲ್ಲಿ ಹಾಲಿ ಪಿಯು ತರಗತಿಗಳು ನಡೆಯುತ್ತಿವೆ. ನೂರಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ. ಹಲವು ಹಿರಿಯರು, ಮಹನೀಯರಿಗೂ ಶಿಕ್ಷಣ ನೀಡದಂತಹ ಸಂಸ್ಥೆ ಇದಾಗಿದೆ.

  • News18 Kannada
  • Last Updated :
  • Gulbarga, India
  • Share this:

    ಹಳೆಯ ಕಟ್ಟಡ, ಮುಂದೊಂದು ಧ್ವಜಸ್ತಂಭ. ಹಳೆಯ ಶೀಲ್ಡ್​ಗಳು, ಕಚೇರಿ ಪೀಠೋಪಕರಣಗಳು. ಹೀಗೆ ಒಳಹೊಕ್ಕು ನೋಡಿದರೆ ಶತಮಾನಕ್ಕೂ ಹಿಂದಿನ ಅಪರೂಪದ ವಸ್ತುಗಳ ಸಂಗ್ರಹ. ಇಷ್ಟೆಲ್ಲ ವಿಶೇಷತೆಗಳನ್ನು ಹೊಂದಿರೋ ಇದು ಕಲಬುರಗಿಯ ಮೊದಲ ಶಾಲೆ. ಯೆಸ್,ಕಲಬುರಗಿ ನಗರದ ಸೂಪರ್ ಮಾರ್ಕೆಟ್ ಪ್ರದೇಶದಲ್ಲಿರುವ ಶತಮಾನ ಕಂಡ ಈ ಹಳೆಯ ಸರ್ಕಾರಿ ಶಾಲೆ (Old Government School)  ಕಟ್ಟಡ ಇಂದಿಗೂ ಹಾಗೆಯೇ ಇದೆ. ಇದನ್ನೇ ಕಲಬುರಗಿ ನಗರ (Kalaburagi News)  ಪ್ರಪ್ರಥಮ ಶಾಲೆ ಎಂದು ಇತಿಹಾಸಕಾರರು ಉಲ್ಲೇಖಿಸುತ್ತಾರೆ. ಸ್ಥಳೀಯವಾಗಿ 'MPHS ಸ್ಕೂಲ್' ಎಂದೇ ಕರೆಯಲ್ಪಡುವ ಈ ಶಾಲೆ, ಆರನೇ ನಿಜಾಮ ನವಾಬ್ ಮೀರ ಮಹಬೂಬ್ ಅಲಿ ಖಾನ್ ಬಹಾದ್ದೂರ್​ರವರ ಕೊಡುಗೆ ಎನ್ನಲಾಗಿದೆ.


    ಮೊದಲಿಗೆ ಸುಬಾ ಕೇಂದ್ರಗಳಲ್ಲಿ ಹೈಸ್ಕೂಲ್ ಶಿಕ್ಷಣ ನೀಡುವ ಶಾಲೆಗಳು ಪ್ರಾರಂಭವಾದವು. ಹೀಗೆ ಅಂದು ನಿಜಾಮ್ ರಾಜ್ಯದ ಸುಬಾ ಕೇಂದ್ರವಾದ ಕಲಬುರಗಿ ನಗರದಲ್ಲೂ ಹೈಸ್ಕೂಲ್ ಶಿಕ್ಷಣವನ್ನು ನೀಡುವ ಶಾಲೆಯನ್ನು ಸ್ಥಾಪಿಸಲಾಯ್ತು. ಅದುವೇ ಈಗಿನ ಸೂಪರ್ ಮಾರ್ಕೆಟ್ ಏರಿಯಾದಲ್ಲಿನ ಶಾಲೆ.


    ಹಳೆಯ ಕಟ್ಟಡದ ಶೈಲಿ ಬದಲಾಗಿಲ್ಲ
    ವಸಾಹತುಶಾಹಿ ಯುಗದ ವಾಸ್ತುಶೈಲಿಯಲ್ಲಿರುವ ಈ ಹೈಸ್ಕೂಲ್ ಕಟ್ಟಡದ ಉದ್ಘಾಟನೆ 1886 ರ ಜನವರಿಯಲ್ಲಿ ನಡೆದಿದೆ ಅನ್ನೋ ಉಲ್ಲೇಖವಿದೆ. ಸದ್ಯ ಹಳೆಯ ಕಟ್ಟಡದಲ್ಲಿ ಒಂದಿಷ್ಟು ಬದಲಾವಣೆ, ಸೇರ್ಪಡೆ ಮಾಡಿದರೂ ಹಳೆಯ ಕಟ್ಟಡದ ಮೂಲ ಶೈಲಿ ಮಾತ್ರ ಬದಲಾಗಿಲ್ಲ. ಇಂದಿಗೂ ಈ ಹಳೆಯ ಕಟ್ಟಡದಲ್ಲಿಯೇ ಮಕ್ಕಳು ವಿದ್ಯಾಭ್ಯಾಸ ಮಾಡ್ತಿದ್ದಾರೆ.


    ಇದನ್ನೂ ಓದಿ: Sharana Basaveshwara Temple: ಶರಣಬಸಪ್ಪ-ದೊಡ್ಡಪ್ಪ ಅಪ್ಪ ಜೋಡು ಮೂರ್ತಿಯ ಪವಿತ್ರ ದೇಗುಲ, ಅರಸಿ ಬಂದವರಿಗೆ ಆಶೀರ್ವದಿಸುವ ಕ್ಷೇತ್ರ


    ಧರಮ್ ಸಿಂಗ್ ಸಹ ಇಲ್ಲೇ ಕಲಿತಿದ್ರು
    ಹಳೆಯ ಕಟ್ಟಡದಲ್ಲಿ ಹಾಲಿ ಪಿಯು ತರಗತಿಗಳು ನಡೆಯುತ್ತಿವೆ. ನೂರಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ. ಹಲವು ಹಿರಿಯರು, ಮಹನೀಯರಿಗೂ ಶಿಕ್ಷಣ ನೀಡದಂತಹ ಸಂಸ್ಥೆ ಇದಾಗಿದೆ. ರಾಜ್ಯದ ಮಾಜಿ ಮುಖ್ಯಮಂತ್ರಿ ಧರಮ್ ಸಿಂಗ್ ಕೂಡಾ ಇಲ್ಲೇ ವಿದ್ಯಾಭ್ಯಾಸ ಪಡೆದಿದ್ದರು ಅನ್ನೋದು ವಿಶೇಷ.


    ಇದನ್ನೂ ಓದಿ: Kalaburagi: ಯೂಟ್ಯೂಬ್ ನೋಡಿ ಹಾವು ಹಿಡಿಯಲು ಕಲಿತ ಯುವಕ!


    Govt PU College MPHS
    ಈ ಶಾಲೆಗೆ ಹೀಗೆ ಬನ್ನಿ (ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)


    ಹೀಗೆ ಇತಿಹಾಸ ಹೊಂದಿರುವ, ಕಲಬುರಗಿಯ ಮೊಟ್ಟ ಮೊದಲ ಶಾಲೆ ಇಂದಿಗೂ ತನ್ನ ಹಳೆಯ ವಾಸ್ತು ಶಿಲ್ಪವನ್ನ ಉಳಿಸಿಕೊಂಡಿದೆ. ಅದ್ಯಾವುದೋ ಪ್ರವಾಸಿ ಸ್ಥಳದಂತೆಯೂ ಭಾಸವಾಗುವ ಈ ಶಾಲೆ ದೇಶದ ಶೈಕ್ಷಣಿಕ ಬದಲಾವಣೆಯ ಪ್ರತೀಕವಾಗಿಯೂ ಕಂಗೊಳಿಸುತ್ತಿದೆ.


    ವರದಿ: ಶ್ರೀಕಾಂತ ಬಿರಾಳ, ನ್ಯೂಸ್18 ಕನ್ನಡ ಕಲಬುರಗಿ

    Published by:ಗುರುಗಣೇಶ ಡಬ್ಗುಳಿ
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು