ಕಲಬುರಗಿ: ಹೊರಗಿಂದ ನೋಡೋಕೆ ಚೆಂದದ ಕೋಟೆ, ಸುತ್ತಲಿನ ಪರಿಸರ, ಕೋಟೆಯ ರಚನೆ ಎಲ್ಲವೂ ಅದ್ಭುತ! ಆದ್ರೆ ಇತಿಹಾಸದ (History) ಪುಟಗಳಲ್ಲಿ ಭವ್ಯತೆಯಿಂದ ಮೆರೆದಿದ್ದ ಈ ಕೋಟೆಯ (Firozabad Fort) ಒಳಹೊಕ್ಕಿದರೆ ತೆರೆದುಕೊಳ್ಳುತ್ತೆ ಬಿಸಿಲನಾಡಿನ (Kalaburagi News) ಈ ರಾಜನ ಕಥೆ!
ಯೆಸ್, ಕಲಬುರಗಿಯ ಭೀಮಾ ತೀರದಲ್ಲಿರುವ ಈ ಕೋಟೆಯೇ ಫಿರೋಜಾಬಾದ್ ಕೋಟೆ. ಇದನ್ನ ಬಹಮನಿ ಸುಲ್ತಾನರ ರಾಜ ಫಿರೋಜ್ ಶಾ ನಿಮಿಸಿದ್ದ ಎನ್ನುತ್ತೆ ಇತಿಹಾಸ. ಇದೇ ಕಾರಣಕ್ಕೆ ಈ ಕೋಟೆಗೆ ಫಿರೋಜಾಬಾದ್ ಎಂಬ ಹೆಸರು ಬಂದಿದೆ ಎನ್ನಲಾಗುತ್ತದೆ. ವಿಜಯನಗರ ಸಾಮ್ರಾಜ್ಯದ ಮೇಲೆ ದಂಡಯಾತ್ರೆ ಮುಗಿಸಿ ವಾಪಸ್ ಬರುವಾಗ ವಿಶ್ರಾಂತಿ ಪಡೆಯಲು ಒಂದು ವಾರಗಳ ಕಾಲ ಫಿರೋಜ್ ಶಾ ಭೀಮಾ ನದಿಯ ದಂಡೆಯಲ್ಲಿ ಉಳಿದುಕೊಳ್ಳುತ್ತಾರೆ.
ಕೋಟೆ ಕಟ್ಟಿದ ಕಾರಣವೇನು?
ಇಲ್ಲಿನ ವಿಶಾಲ ಪ್ರದೇಶ ಹಾಗೂ ನಿಸರ್ಗ, ವಾತಾವರಣವನ್ನು ಗಮನಿಸಿದ ಅರಸ ಕುದುರೆ ಆನೆಗಳಿಗೆ ನೀರು ಕೊಡಲು ಅನುಕೂಲವಾಗುತ್ತದೆ ಎಂದು ಗಮನಿಸಿದ. ಜೊತೆಗೆ ವಿಜಯನಗರ ಸೇನೆಯ ದಾಳಿಯನ್ನ ದಂಡೆಯಲ್ಲೇ ತಡೆಯುವ ಉದ್ದೇಶದಿಂದ ಈ ಕೋಟೆ ನಿರ್ಮಿಸಲಾಗಿದೆ ಎಂದು ಇತಿಹಾಸಕಾರರು ಅಂದಾಜಿಸುತ್ತಾರೆ.
ಇದನ್ನೂ ಓದಿ: Kalaburagi: 2 ಎಕರೆಯಲ್ಲಿರೋ ಈ ಮನೆಗೆ 48 ಕೋಣೆ, 108 ಬಾಗಿಲು!
ಐದು ಕಿಲೋ ಮೀಟರ್ ವ್ಯಾಪ್ತಿಯ ಕೋಟೆಯಿದು!
ಈ ಭಾಗದಲ್ಲಿರುವ ಏಕೈಕ ಬಹು ಮಹಡಿಯ ಕೋಟೆ ಎಂದರೆ ಫಿರೋಜಾಬಾದ್ ಕೋಟೆ ಒಂದೇ. ಸುಮಾರು ಐದು ಕಿಲೋ ಮೀಟರ್ ವಿಸ್ತೀರ್ಣದಲ್ಲಿ ಈ ಕೋಟೆಯು ಹರಡಿಕೊಂಡಿದೆ. ಬಹುಭಾಷಾ ಪರಿಣಿತನಾಗಿದ್ದ ಫಿರೋಜ್ ಶಾ ಹಿಂದೂ ಮುಸ್ಲಿಂ ಕ್ರೈಸ್ತರೆಲ್ಲರನ್ನ ಒಂದುಗೂಡಿಸಿ ಸಾಮರಸ್ಯ ಮೆರೆದವರು.
ಆಕರ್ಷಕ ವಾಸ್ತುಶಿಲ್ಪ ಹಾಗೂ ಕೋಟೆಯ ನಾಲ್ಕು ಭಾಗಗಳಲ್ಲಿ ವಿಶಾಲವಾದ ದ್ವಾರ ಬಾಗಿಲನ್ನ ಈ ಕೋಟೆ ಹೊಂದಿದೆ. ದುರದೃಷ್ಟ ಅಂದ್ರೆ ಇಂತಹ ಐತಿಹಾಸಿಕ ವಾಸ್ತುಶಿಲ್ಪ ಹಾಗೂ ಇತಿಹಾಸವನ್ನು ಹೊಂದಿರುವ ಫಿರೋಜಾಬಾದ್ ಕೋಟೆ ಇದೀಗ ಅಳಿವಿನಂಚಿನಲ್ಲಿ ಬಂದುನಿಂತಿದೆ.
ಇದನ್ನೂ ಓದಿ: Kalaburagi: ಪ್ರಧಾನಿ ಮೋದಿ ಮೆಚ್ಚಿದ ಕಲಬುರಗಿಯ ಸಿರಿಧಾನ್ಯ ಸಂಸ್ಥೆಯಿದು!
ಪ್ರಾಚ್ಯವಸ್ತು ಇಲಾಖೆಯ ನಿರ್ಲಕ್ಷದಿಂದ ಸಂಪೂರ್ಣ ಹಾಳಾಗಿ ಹೋಗಿದೆ. ಹಾಗಾಗಿ ಕಲ್ಯಾಣ ಕರ್ನಾಟಕ ಭಾಗದ ವಿಶಾಲವಾದ ಈ ಕೋಟೆಯನ್ನ ಉಳಿಸಿ ಬೆಳೆಸುವಂತಹ ಜವಾಬ್ದಾರಿ ಸರ್ಕಾರದ ಮೇಲಿದೆ.
ವರದಿ: ಶ್ರೀಕಾಂತ್ ಬಿರಾಳ, ನ್ಯೂಸ್ 18 ಕನ್ನಡ ಡಿಜಿಟಲ್, ಕಲಬುರಗಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ