• Home
  • »
  • News
  • »
  • kalburgi
  • »
  • Farmers Subsidy: ಕೃಷಿಕರಿಗೆ ಕೇಂದ್ರ ಸರ್ಕಾರದ ಸಬ್ಸಿಡಿ; ತಕ್ಷಣ ಹೀಗೆ ಮಾಡಿ

Farmers Subsidy: ಕೃಷಿಕರಿಗೆ ಕೇಂದ್ರ ಸರ್ಕಾರದ ಸಬ್ಸಿಡಿ; ತಕ್ಷಣ ಹೀಗೆ ಮಾಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ನಾಟಿ ಬಿತ್ತನೆ ಸಲಕರಣೆ, ಅಂತರ ಸಾಗುವಳಿ ಸಲಕರಣೆ, ಡೀಸೆಲ್ ಪಂಪ್‌ಸೆಟ್, ಟ್ರ್ಯಾಕ್ಟರ್, ಟಿಲ್ಲರ್, ಇಂಜಿನ್ ಚಾಲಿತ ಸಸ್ಯ ಸಂರಕ್ಷಣೆ ಬೆಳೆ ಕೊಯ್ಲು ಹೀಗೆ ಕೃಷಿಗೆ ಬೇಕಾಗುವ ಯಂತ್ರಗಳ ಖರೀದಿಗೆ ಭಾಗಶಃ ಹಣ ನೀಡಲಾಗುತ್ತದೆ.

  • News18 Kannada
  • Last Updated :
  • Gulbarga, India
  • Share this:

    ಕಲಬುರಗಿ: ಕೃಷಿ ಚಟುವಟಿಕೆಗಳ ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರ ಕೇಂದ್ರ ಪುರಸ್ಕೃತ ಕೃಷಿ ಯಂತ್ರಕರಣ ಉಪ ಅಭಿಯಾನ (SMAM) ಯೋಜನೆಯಡಿ ಒಕ್ಕಲು ಯಂತ್ರಗಳ ವಿತರಣೆಗೆ ಮುಂದಾಗಿದ್ದು ಕೃಷಿಕರು ಯಂತ್ರಗಳ ಸೌಲಭ್ಯವನ್ನು (Farmers Subsidy)  ಪಡೆದುಕೊಳ್ಳಬಹುದಾಗಿದೆ. 2022–23ರ ಕೃಷಿ ಯಾಂತ್ರೀಕರಣ ಯೋಜನೆಯಡಿ ಉಳುಮೆ ಮಾಡಲು, ಕಟಾವು ಮಾಡಲು, ವಿವಿಧ ಮಾದರಿಗಳ ಟ್ರ್ಯಾಕ್ಟರ್‌ಗಳು, ಪವರ್ ಟಿಲ್ಲರ್‌ಗಳು, ಭೂಮಿ ಸಿದ್ಧಪಡಿಸುವ ಅನುದಾನದಿಂದ ಭಾಗಶಃ ಹಣವನ್ನು ನೀಡಲಾಗುತ್ತದೆ. ನಾಟಿ ಬಿತ್ತನೆ ಸಲಕರಣೆ, ಅಂತರ ಸಾಗುವಳಿ ಸಲಕರಣೆ, ಡೀಸೆಲ್ ಪಂಪ್‌ಸೆಟ್, ಟ್ರ್ಯಾಕ್ಟರ್, ಟಿಲ್ಲರ್, ಇಂಜಿನ್ ಚಾಲಿತ ಸಸ್ಯ ಸಂರಕ್ಷಣೆ ಬೆಳೆ ಕೊಯ್ಲು ಹೀಗೆ ಕೃಷಿಗೆ ಬೇಕಾಗುವ ಯಂತ್ರಗಳ ಖರೀದಿಗೆ ಭಾಗಶಃ ಹಣ ನೀಡಲಾಗುತ್ತದೆ.


    ಅರ್ಜಿ ಸಲ್ಲಿಸುವ ವಿಧಾನ
    ಅರ್ಜಿ ಸಲ್ಲಿಸಲು ರೈತ ಮಾಡಬೇಕಾದದ್ದು ಇಷ್ಟೆ. ಸಮೀಪದ ರೈತ ಸಂಪರ್ಕ ಕೇಂದ್ರಗಳಿಗೆ ಹೋಗಿ ಅರ್ಜಿ ಸಲ್ಲಿಸಬೇಕು. ಜೊತೆಗೆ ಇಲಾಖೆಯ ಅನುಮತಿಯನ್ನು ಮುಂಚಿತವಾಗಿ ಪಡೆಯಬೇಕು. ನೋ ಡ್ಯೂ ಸರ್ಟಿಫಿಕೇಟ್​ ಅನ್ನು ಕಡ್ಡಾಯವಾಗಿ ಲಗತ್ತಿಸಬೇಕು.


    ಇದನ್ನೂ ಓದಿ: Kalaburagi: ಸರ್ಕಾರಿ ಶಾಲೆ ಕಟ್ಟಲು ಜೋಳಿಗೆ ಹಿಡಿದ ಸ್ವಾಮೀಜಿ; ಸಂಗ್ರಹವಾಯ್ತು 40 ಲಕ್ಷ!


    ಯಾರು ಅರ್ಹರು?
    ಇನ್ನು ರೈತರು ಗಮನಿಸಬೇಕಾದ ಮುಖ್ಯ ವಿಚಾರವೆಂದರೆ ದಿನಾಂಕ 1-4-2022 ರ ನಂತರ ಖರೀದಿಸಿದ ವಿಶೇಷ ಉಪಕರಣಗಳಿಗೆ ಮಾತ್ರ ಸಬ್ಸಿಡಿ ನೀಡಲಾಗುತ್ತದೆ.


    ಇದನ್ನೂ ಓದಿ: Custard Apple: ತನ್ನಿಂದ ತಾನೇ ಬೆಳೆಯುತ್ತೆ ಸೀತಾಫಲ! ರುಚಿಯೂ ಸೂಪರ್ ಟೇಸ್ಟಿ


    ಒಮ್ಮೆ ಸಬ್ಸಿಡಿ ಪಡೆದರೆ ಏಳು ವರ್ಷ ಮತ್ತೆ ಸಿಗಲ್ಲ
    ಒಮ್ಮೆ ಉತ್ಪನ್ನಕ್ಕೆ ಸಬ್ಸಿಡಿ ನೀಡಿದರೆ ಮತ್ತೆ ಏಳು ವರ್ಷಗಳವರೆಗೆ ಸಬ್ಸಿಡಿ ಪಡೆಯುವಂತಿಲ್ಲ. ಪ್ರಯೋಜನಗಳನ್ನು ಪಡೆಯಲು, ಬೆಳೆಗಾರರು ಸಾಫ್ಟ್‌ವೇರ್‌ನೊಂದಿಗೆ ನೋಂದಾಯಿಸಿಕೊಳ್ಳಬೇಕು. ಜೊತೆಗೆ ಕೆ ಕಿಸಾನ್ ಮೂಲಕ ಅರ್ಜಿಯನ್ನು ಸಲ್ಲಿಸಿರಬೇಕು.

    Published by:ಗುರುಗಣೇಶ ಡಬ್ಗುಳಿ
    First published: