ಕಲಬುರಗಿ: ಜಿಲ್ಲೆಯ ಉದ್ಯೋಗಾಕಾಂಕ್ಷಿಗಳಿಗೆ ಸಿಹಿ ಸುದ್ದಿ. ಪ್ರತಿಷ್ಠಿತ ಕಂಪೆನಿಗಳಲ್ಲಿ ಕೆಲಸ ಮಾಡಲು ಉತ್ಸುಕರಾಗಿರುವ ಯುವ ಜನತೆಗಾಗಿ ನಡೆಯುತ್ತಿದೆ ನೋಡಿ ಉದ್ಯೋಗ ಮೇಳ. ಇದೇ ಜನವರಿ 7 ರಂದು ನಡೆಯಲಿರುವ ಉದ್ಯೋಗ ಮೇಳದಲ್ಲಿ ಪ್ರತಿಷ್ಠಿತ ತನಿಷ್ಕಾ ಜ್ಯುವೆಲ್ಲರ್ಸ್ ಹಾಗೂ ರಿಲಯನ್ಸ್ ಜಿಯೋ ಸಹಿತ ಹಲವು ಕಂಪೆನಿಗಳು ಭಾಗವಹಿಸಲಿದೆ. ಆಸಕ್ತ ಯುವಕ, ಯುವತಿಯರು ಈ ಉದ್ಯೋಗ ಮೇಳದ ಲಾಭವನ್ನು ಪಡೆಯಬಹುದಾಗಿದೆ.
ಎಲ್ಲಿ, ಯಾವಾಗ ಉದ್ಯೋಗ ಮೇಳ?
ಕಲಬುರಗಿಯ ಸರಕಾರಿ ಐಟಿಐ ಕಾಲೇಜಿನ ಹಿಂದುಗಡೆಯಿರುವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಜ.7ರಂದು ಬೆಳಗ್ಗೆ 10.30 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ.
ತನಿಷ್ಕಾ ಜ್ಯುವೆಲ್ಲರಿ
ಉದ್ಯೋಗ ಮೇಳದಲ್ಲಿ ತನಿಷ್ಠಾ ಜ್ಯುವೆಲ್ಲರಿ ಭಾಗವಹಿಸಲಿದೆ. ಸಂಸ್ಥೆಯು ತನ್ನಲ್ಲಿರು ಸ್ಟೋರ್ ಮ್ಯಾನೇಜರ್ ಹಾಗೂ ರಿಟೈಲ್ ಸೇಲ್ಸ್ ಆಫೀಸರ್ ಹುದ್ದೆಗಳಿಗೆ ನೇಮಕಾತಿ ನಡೆಸಲಿದೆ.
ವಿದ್ಯಾರ್ಹತೆ : ಈ ಹುದ್ದೆಗೆ ಅರ್ಜಿ ಸಲ್ಲಿಸುವವರು ಕನಿಷ್ಟ ಯಾವುದೇ ಪದವಿ ವಿದ್ಯಾರ್ಹತೆ ಹೊಂದಿರಬೇಕು.
ವಯೋಮಿತಿ: ಅಭ್ಯರ್ಥಿಗಳು ಕನಿಷ್ಟ 18 ರಿಂದ 30 ವರ್ಷದೊಳಗಿರಬೇಕು.
ಕೃಷಿ ಬಂಧು
ಕೃಷಿ ಬಂಧು ಸಂಸ್ಥೆಯಲ್ಲಿರುವ ಬಿಜಿನೆಸ್ ಡೆವಲಪ್ಮೆಂಟ್ ಆಫೀಸರ್, ಸೇಲ್ಸ್ ಆಂಡ್ ಮಾರ್ಕೆಟಿಂಗ್, ವೆಬ್ಸೈಟ್ ಡಿಸೈನರ್, ಆಂಡ್ರಾಯ್ಡ್ ಮೊಬೈಲ್ ಅಪ್ಲಿಕೇಶನ್ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಭರ್ತಿ ಮಾಡಿಕೊಳ್ಳಲಿದೆ.
ವಿದ್ಯಾರ್ಹತೆ: ಅರ್ಜಿದಾರರು ಯಾವುದೇ ಪದವಿ ವಿದ್ಯಾರ್ಹತೆ ಹೊಂದಿರಬೇಕು.
ವಯೋಮಿತಿ: ಕನಿಷ್ಟ 18 ರಿಂದ ಗರಿಷ್ಟ 30 ವರ್ಷದ ಒಳಗಿನವರಾಗಿರಬೇಕು.
ರಿಲಯನ್ಸ್ ಜಿಯೋ
ರಿಲಯನ್ಸ್ ಜಿಯೋ ಎಂಟರ್ಪ್ರೈಸೆಸ್ ಸೇಲ್ಸ್ ಆಫೀಸರ್ ಹುದ್ದೆಗೆ ಸಂಸ್ಥೆಯು ನೇಮಕಾತಿ ಮಾಡಿಕೊಳ್ಳಲಿದೆ. ಅಭ್ಯರ್ಥಿಯು ಯಾವುದೇ ಪದವಿ ವಿದ್ಯಾರ್ಹತೆ ಹೊಂದಿರಬೇಕು.
ವಯೋಮಿತಿ: ಕನಿಷ್ಟ 18 ರಿಂದ ಗರಿಷ್ಟ 30 ವರ್ಷದೊಳಗಿರಬೇಕು.
ದಾಖಲಾತಿ ಪ್ರತಿ ಕಡ್ಡಾಯ
ಆಸಕ್ತ ಅಭ್ಯರ್ಥಿಗಳು ತಮ್ಮ ಎಲ್ಲಾ ಅಂಕಪಟ್ಟಿಗಳ ಜೆರಾಕ್ಸ್, ರೆಸ್ಯೂಮ್ ಜೊತೆಗೆ ಭಾವಚಿತ್ರಗಳು ಹಾಗೂ ಆಧಾರ್ಕಾರ್ಡ್ ದಾಖಲಾತಿಗಳೊಂದಿಗೆ ಸಂದರ್ಶನಕ್ಕೆ ಹಾಜರಾಗಬೇಕು.
ಹೆಚ್ಚಿನ ಮಾಹಿತಿಗಾಗಿ
ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ದೂರವಾಣಿ ಸಂಖ್ಯೆ 08472-274846 ಸಂಪರ್ಕಿಸಬಹುದಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ