• Home
 • »
 • News
 • »
 • kalburgi
 • »
 • Kalaburagi: ಕಲಬುರಗಿಯ ಈ ಹಳ್ಳಿಯ ಪ್ರತಿ ಮನೆಯಲ್ಲೂ ಡಾಕ್ಟರ್, ಇಂಜಿನಿಯರ್!

Kalaburagi: ಕಲಬುರಗಿಯ ಈ ಹಳ್ಳಿಯ ಪ್ರತಿ ಮನೆಯಲ್ಲೂ ಡಾಕ್ಟರ್, ಇಂಜಿನಿಯರ್!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಪ್ರತಿ ಹೆಜ್ಜೆ ಹೆಜ್ಜೆಗೂ ಈ ಹಳ್ಳಿಯಲ್ಲಿ ವೈದ್ಯರು, ಇಂಜಿನಿಯರ್​ಗಳು ಕಣ್ಣಿಗೆ ಬೀಳ್ತಾರೆ. ಕಮ್ಮಿ ಎಂದ್ರೂ ಈ ಊರಲ್ಲಿ 100ಕ್ಕೂ ಹೆಚ್ಚು ಜನ ವೈದ್ಯರಿದ್ರೆ, 150ಕ್ಕೂ ಹೆಚ್ಚು ಜನ ಇಂಜನಿಯರ್​ಗಳಿದ್ದಾರೆ.

 • News18 Kannada
 • 2-MIN READ
 • Last Updated :
 • Gulbarga, India
 • Share this:

  ಕಲಬುರಗಿ: ಒಂದೇ ಮನೆಯಲ್ಲಿ ಕಾಣಸಿಗ್ತಾರೆ ಐದಾರು ವೈದ್ಯರು, ಇಂಜಿನಿಯರ್, ಕನಿಷ್ಟ ಊರಿಗೊಬ್ರು ಡಾಕ್ಟ್ರು, ಇಂಜಿನಿಯರ್ ಸಹ ಇಲ್ದಿರೋ ಈ ಸಮಯದಲ್ಲೂ ಈ ಹಳ್ಳಿಯ ವಿಶೇಷವೇ ಬೇರೆ! ಈ ಹಳ್ಳಿ ಒಂಥರಾ ಪುಟ್ಟ ಶಿಕ್ಷಣ ಕಾಶಿಯೇ (Education Hub) ಸರಿ. ಹಾಗಿದ್ರೆ ಕಲಬುರಗಿಯ ಅಂತಹ ವಿಶೇಷ ಹಳ್ಳಿ (Kalaburagi news) ಯಾವುದು ಅಂತೀರಾ? ಇದೆಲ್ಲನೂ ಸಾಧ್ಯವಾಗಿದ್ದು ಹೇಗೆ ಅಂತೀರಾ? ಹೇಳ್ತೀವಿ ನೋಡಿ.


  ಹೌದು, ಇಲ್ಲಿ ಒಂದೇ ಮನೆಯಲ್ಲಿ ಐದಾರು ಜನ ವೈದ್ಯರು, ಇಂಜನಿಯರ್​ಗಳು ಸಿಗ್ತಾರೆ. ಇಂತಹ ಹಳ್ಳಿ ಕಾಣಸಿಗುವುದು ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಹಳ್ಳಿ ಸಲಗರ್ ಗ್ರಾಮದಲ್ಲಿ. ಈ ಹಳ್ಳಿ ಸಲಗರ್ ಗ್ರಾಮ ಶಿಕ್ಷಣ ಪ್ರೇಮಿಗಳ ತವರೂರು, ಕಲಬುರಗಿಯ ಶಿಕ್ಷಣ ಕಾಶಿ ಎಂದೇ ಫೇಮಸ್. ಅಷ್ಟೊಂದು ಜನ ವಿದ್ಯಾವಂತರು, ಉನ್ನತ ಶಿಕ್ಷಣ ಪಡೆದವರು ಇಲ್ಲಿದ್ದಾರೆ. ಅದರಲ್ಲೂ ವೈದ್ಯರು, ಇಂಜಿನಿಯರ್​ಗಳು ಹೆಚ್ಚಾಗಿರೋದು ಈ ಹಳ್ಳಿಯ ವಿಶೇಷತೆ.


  ಪ್ರತಿಯೊಬ್ರೂ ಒಂದೊಂದು ಫೀಲ್ಡ್​ನಲ್ಲಿ ಸ್ಪೆಷಲಿಸ್ಟ್!
  ಪ್ರತಿ ಹೆಜ್ಜೆ ಹೆಜ್ಜೆಗೂ ಈ ಹಳ್ಳಿಯಲ್ಲಿ ವೈದ್ಯರು, ಇಂಜಿನಿಯರ್​ಗಳು ಕಣ್ಣಿಗೆ ಬೀಳ್ತಾರೆ. ಕಮ್ಮಿ ಎಂದ್ರೂ ಈ ಊರಲ್ಲಿ 100ಕ್ಕೂ ಹೆಚ್ಚು ಜನ ವೈದ್ಯರಿದ್ರೆ, 150ಕ್ಕೂ ಹೆಚ್ಚು ಜನ ಇಂಜಿನಿಯರ್​ಗಳಿದ್ದಾರೆ. ಅಷ್ಟೇ ಅಲ್ಲ, ವೈದ್ಯರಲ್ಲಿ ಪ್ರತಿಯೊಬ್ಬರು ಒಂದೊಂದು ಫೀಲ್ಡ್ ನಲ್ಲಿ ಸ್ಪೆಷಲಿಸ್ಟ್ ಸಹಾ ಆಗಿದ್ದಾರೆ.
  ವಿದೇಶಗಳಲ್ಲೂ ಸೇವೆ!
  ಕೆಲವರು ಖಾಸಗಿ ಆಸ್ಪತ್ರೆಗಳನ್ನು ತೆರೆದು ಚಿಕಿತ್ಸೆ ನೀಡ್ತಿದ್ರೆ, ಹಲವರು ಸರ್ಕಾರದ ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇನ್ನು ಇಂಜಿನಿಯರ್ ವಿಭಾಗದಲ್ಲಿರುವ ಸಾಕಷ್ಟು ಜನರು ಸರ್ಕಾರಿ ಮತ್ತು ಖಾಸಗಿ ಕಂಪೆನಿಗಳನ್ನು ಸೇವೆ ಸಲ್ಲಿಸುತ್ತಿದ್ದಾರೆ. ಇನ್ನು ಕೆಲವು ಜನ ವೈದ್ಯರು ಕಲಬುರಗಿಯಲ್ಲಿ ಆಸ್ಪತ್ರೆಗಳನ್ನು ತೆರೆದಿದ್ದರೆ ಹಲವರಂತೂ ಅಮೇರಿಕ, ಅರಬ್ ದೇಶಗಳಲ್ಲಿ ವೈದ್ಯ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ.


  ಇದನ್ನೂ ಓದಿ: Bhagyavanti Temple: ಭಾಗ್ಯವಂತಿ ದೇವಿಯ ದರ್ಶನದಿಂದ ಅದೃಷ್ಟ ಒಲಿಯುತ್ತಂತೆ!


  ತಮ್ಮೂರಿನ ರೋಗಿಗಳಿಗೆ ಫ್ರೀ ಚಿಕಿತ್ಸೆ!
  ಇನ್ನೊಂದು ವಿಶೇಷ ಎಂದ್ರೆ ತಮ್ಮೂರಿಂದ ಯಾವುದೇ ರೋಗಿಗಳು ಇವರ ಆಸ್ಪತ್ರೆಗಳಿಗೆ ಹೋದ್ರೆ ನಯಾಪೈಸೆ ದುಡ್ಡಿಲ್ಲದೇ ಉಚಿತವಾಗಿ ಚಿಕಿತ್ಸೆ ನೀಡ್ತಾರೆ. ಈ ಊರಿನ ಹಿರಿಯರೆಲ್ಲ ಬಹುತೇಕರು ಕೃಷಿಕರೇ ಆಗಿದ್ದಾರೆ.


  ಇದನ್ನೂ ಓದಿ: Kalaburagi: ಕಲ್ಯಾಣ ಕರ್ನಾಟಕದ ಈ ಊರಿನಿಂದಲೇ ಶುರುವಾಗಲಿದೆ 6 ಪಥದ ರಾಷ್ಟ್ರೀಯ ಹೆದ್ದಾರಿ!


  ಆದರೆ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ ಎಷ್ಟೇ ಕಷ್ಟ ಬಂದ್ರೂ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗದಂತೆ ನೋಡಿಕೊಂಡಿರೋದೇ ಈ ಕ್ರಾಂತಿಗೆ ಕಾರಣವಂತೆ. ಒಟ್ಟಾರೆ ಹಳ್ಳಿ ಸಲಗರ್ ಗ್ರಾಮದಲ್ಲಿ ಅತೀ ಹೆಚ್ಚು ವೈದ್ಯರು, ಇಂಜಿನಿಯರ್​ಗಳು ಇರೋದು ವಿಶೇಷವಾಗಿದ್ದು, ಇಡೀ ರಾಜ್ಯವನ್ನೇ ತನ್ನತ್ತ ಗಮನ ಸೆಳೆಯುವಂತೆ ಮಾಡುವ ಮೂಲಕ ಮಾದರಿ ಗ್ರಾಮ ಎನಿಸಿಕೊಂಡಿದೆ.


  ವರದಿ: ಶ್ರೀಕಾಂತ ಬಿರಾಳ, ಕಲಬುರಗಿ

  Published by:ಗುರುಗಣೇಶ ಡಬ್ಗುಳಿ
  First published: