• Home
 • »
 • News
 • »
 • kalburgi
 • »
 • Diesel Subsidy: ರೈತರಿಗೆ ಡೀಸೆಲ್ ಸಬ್ಸಿಡಿ ಘೋಷಣೆ; ಅರ್ಜಿ ಹಾಕಬೇಕಂತಲೂ ಇಲ್ಲ!

Diesel Subsidy: ರೈತರಿಗೆ ಡೀಸೆಲ್ ಸಬ್ಸಿಡಿ ಘೋಷಣೆ; ಅರ್ಜಿ ಹಾಕಬೇಕಂತಲೂ ಇಲ್ಲ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಸಾಮಾನ್ಯವಾಗಿ ರೈತರಿಗೆ ಟ್ರ್ಯಾಕ್ಟರ್​ನಲ್ಲಿ ಒಂದು ಎಕರೆ ಭೂಮಿ ಉಳುಮೆ ಮಾಡಲು 20 ಲೀಟರ್ ಡೀಸೆಲ್ ಬೇಕಾಗುತ್ತದೆ. ಈ ಪೈಕಿ ತಲಾ ಲೀಟರಿಗೆ 25 ರೂ. ನಂತೆ 10 ಲೀಟರ್ ಗೆ 250 ರೂ. ಸಬ್ಸಿಡಿ ನೀಡಲಾಗುವುದು.

 • Share this:

  ಕಲಬುರಗಿ: ಕರ್ನಾಟಕ ಸರ್ಕಾರ ರೈತರ ಬ್ಯಾಂಕ್ ಖಾತೆಗೆ ಡೀಸೆಲ್ ಸಬ್ಸಿಡಿಯನ್ನು ಜಮಾ ಮಾಡಲು ನಿರ್ಧರಿಸಿದೆ. ಆದರೆ ಈ ಸಹಾಯಧನ ಪಡೆಯಲು ರೈತರು ಅರ್ಜಿ ಸಲ್ಲಿಸಬೇಕಾದ ಅವಶ್ಯಕತೆಯೇ ಇಲ್ಲ. ಹಾಗಾದ್ರೆ ಸಬ್ಸಿಡಿ ಪಡೆಯುವುದು ಹೇಗೆ ಎಂಬ ಗೊಂದಲಕ್ಕೆ ಇಲ್ಲಿದೆ ಸ್ಪಷ್ಟನೆ. ಹೌದು, ರೈತರು ಡೀಸೆಲ್ ಸಬ್ಸಿಡಿಯನ್ನು (Diesel Subsidy To Farmers) ಪಡೆಯಲು, ಕೃಷಿ ಇಲಾಖೆ ಕಚೇರಿಗೆ ಅಲೆದಾಡಬೇಕಾಗಿಲ್ಲ, ಸರ್ಕಾರ ತನ್ನ ಬಳಿ ಲಭ್ಯವಿರುವ ಕಿಸಾನ್ ಸಮ್ಮಾನ್ ನಿಧಿ ದತ್ತಾಂಶ ಆಧರಿಸಿ ನೇರವಾಗಿ ರೈತರ ಖಾತೆಗೆ ಹಣ ಜಮಾ ಮಾಡಲಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ (Karnataka Agriculture Minister BC Patil) ಅವರು ತಿಳಿಸಿದ್ದಾರೆ.


  ಬಜೆಟ್​ನಲ್ಲಿ ಘೋಷಿಸಿದಂತೆ 'ರೈತ ಶಕ್ತಿ ಯೋಜನೆ'(Karnataka Raitha Shakti Scheme 2022) ಅಡಿ ಈ ಸಹಾಯಧನ ನೀಡಲಾಗುತ್ತದೆ. ಪ್ರತಿ ರೈತರಿಗೆ ಮೊದಲ ಬಾರಿಗೆ ಪ್ರತಿ ಎಕರೆಗೆ 250 ರೂ. ಗಳಂತೆ ಗರಿಷ್ಠ 5 ಎಕರೆಗೆ ಡೀಸೆಲ್ ಸಹಾಯಧನ ನೀಡಲು ಸರ್ಕಾರ ಅಗತ್ಯ ವ್ಯವಸ್ಥೆಯನ್ನು ಸರ್ಕಾರ ಮಾಡಿಕೊಂಡಿದೆ.


  5 ಎಕರೆವರೆಗೆ ಜಮೀನು ಹೊಂದಿರುವ ಅರ್ಹ ರೈತರಿಗೆ ಡೀಸೆಲ್ ಸಬ್ಸಿಡಿ
  ಈಗಾಗಲೇ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿ ರೈತರಿಗೆ ನೀಡುತ್ತಿರುವ ಪ್ರೋತ್ಸಾಹ ಧನಕ್ಕಾಗಿ ರಾಜ್ಯದ 53 ಲಕ್ಷ ರೈತರಿಂದ ದಾಖಲೆಗಳನ್ನು ಕೂಡ ಸಂಗ್ರಹಿಸಲಾಗಿದೆ. ಜಮೀನು ಪಹಣಿ, ಆಧಾರ್ ಜೋಡಣೆಯೂ ಆಗಿದೆ. ಇದರ ಆಧಾರದ ಮೇಲೆ 5 ಎಕರೆವರೆಗೆ ಜಮೀನು ಹೊಂದಿರುವ ಅರ್ಹ ರೈತರಿಗೆ ಡೀಸೆಲ್ ಸಬ್ಸಿಡಿ ನೀಡಲಾಗುವುದು ಸಚಿವರು ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.


  ಇದನ್ನೂ ಓದಿ: Kalaburagi: ಕಣ್ಣಿಗೆ ಕಾಣದ ಹಾವು 600 ಜನರಿಗೆ ಕಚ್ಚಿದೆಯಂತೆ! ಕಲಬುರಗಿಯ ಈ ಗ್ರಾಮದಲ್ಲಿ ತ್ರಿಶಂಕು ಸ್ಥಿತಿ


  ಎಷ್ಟು ಲೀಟರ್ ಡೀಸೆಲ್ ನೀಡಲಾಗುತ್ತೆ?
  ಸಾಮಾನ್ಯವಾಗಿ ರೈತರಿಗೆ ಟ್ರ್ಯಾಕ್ಟರ್​ನಲ್ಲಿ ಒಂದು ಎಕರೆ ಭೂಮಿ ಉಳುಮೆ ಮಾಡಲು 20 ಲೀಟರ್ ಡೀಸೆಲ್ ಬೇಕಾಗುತ್ತದೆ. ಈ ಪೈಕಿ ತಲಾ ಲೀಟರಿಗೆ 25 ರೂ. ನಂತೆ 10 ಲೀಟರ್ ಗೆ 250 ರೂ. ಸಬ್ಸಿಡಿ ನೀಡಲಾಗುವುದು. 5 ಎಕರೆ ಭೂಮಿ ಹೊಂದಿದವರಿಗೆ ಗರಿಷ್ಠ 1,250 ರೂ. ಸಬ್ಸಿಡಿ ಕೊಡಲಾಗುತ್ತದೆ ಎಂದು ತಿಳಿಸಿದ್ದಾರೆ.


  ಡೀಸೆಲ್ ದುಬಾರಿಯಿಂದ ಉಳುಮೆ ಕಡಿಮೆ
  ರೈತರಿಗಾಗಿ ಸರ್ಕಾರ ಈಗಾಗಲೇ 500 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಡೀಸೆಲ್ ದರ ದುಬಾರಿ ಆಗಿರುವುದರಿಂದ ಸಣ್ಣ ರೈತರು ಉಳುಮೆ ಮಾಡುವುದು ಕಷ್ಟವಾಗಿದೆ. ಸಾಕಷ್ಟು ಮಂದಿ ಉಳುಮೆ ಮಾಡುವುದನ್ನೇ ನಿಲ್ಲಿಸಿದ್ದಾರೆ.


  ಇದನ್ನೂ ಓದಿ: Kalaburagi: ವೀರಭದ್ರೇಶ್ವರ ದೇವರ ಪವಾಡ! ಭಕ್ತರ ಕೆಂಡ ಹಾಯೋ ಸಾಹಸ!


  ಹೀಗಾಗಿ ಮತ್ತೆ ಉಳುಮೆ ಮಾಡಿ, ಕೃಷಿ ಬೆಳೆಗಳ ವ್ಯಾಪ್ತಿ ಹೆಚ್ಚಿಸುವುದರ ಜೊತೆಗೆ ಕೃಷಿ ಉತ್ಪನ್ನಗಳ ಪ್ರಮಾಣವೂ ಹೆಚ್ಚಾಗಲಿ ಹಾಗೂ ಈ ಮೂಲಕ ರೈತರು ಮತ್ತು ರೈತ ಕುಟುಂಬಗಳು ಮತ್ತೆ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲಿ ಎಂಬ ನಿಟ್ಟಿನಲ್ಲಿ ಸರ್ಕಾರ ಈ ರೀತಿ ವಿನೂತನ ಸೌಲಭ್ಯವನ್ನು ಜಾರಿಗೆ ತಂದಿದೆ ಎಂದು ಬಿಸಿ ಪಾಟೀಲ್ ಟ್ವಿಟರ್ ಮೂಲಕ ರೈತರಿಗೆ ಮಾಹಿತಿ ನೀಡಿದ್ದಾರೆ.


  ವರದಿ: ಶ್ರೀಕಾಂತ ಬಿರಾಳ, ಕಲಬುರಗಿ

  Published by:ಗುರುಗಣೇಶ ಡಬ್ಗುಳಿ
  First published: