• ಹೋಂ
 • »
 • ನ್ಯೂಸ್
 • »
 • ಕಲ್ಬುರ್ಗಿ
 • »
 • Kalaburagi Dargah: ಇಲ್ಲಿ ಬೀಗ ಹಾಕಿದ್ರೆ ಸಾಕು ನೀವು ಬೇಡಿದ್ದು ಈಡೇರುತ್ತಂತೆ! ಇದು ಖಲೀಫತ್ ರೆಹಮನ್ ದರ್ಗಾದ ವಿಶೇಷ

Kalaburagi Dargah: ಇಲ್ಲಿ ಬೀಗ ಹಾಕಿದ್ರೆ ಸಾಕು ನೀವು ಬೇಡಿದ್ದು ಈಡೇರುತ್ತಂತೆ! ಇದು ಖಲೀಫತ್ ರೆಹಮನ್ ದರ್ಗಾದ ವಿಶೇಷ

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಇನ್ನೂ ಮದುವೆ ಆಗದವರು, ಮಾನಸಿಕ ಸಮಸ್ಯೆಗಳಿದ್ದರೂ ಇಲ್ಲಿಗೆ ಬರುತ್ತಾರೆ. ಹೀಗಾಗಿ, ಖಲೀಫರ್ ರಹೇಮನ್ ದರ್ಗಾವನ್ನು ಕೀಲಿ ಕೈ ದೇವರೆಂದೇ ಕರೆಯಲಾಗುತ್ತೆ.

 • News18 Kannada
 • 3-MIN READ
 • Last Updated :
 • Gulbarga, India
 • Share this:

ಕಲಬುರಗಿ: ಬೀಗದ ಅಂಗಡಿಯಲ್ಲೇ ಇಷ್ಟೊಂದು ಬೀಗ ರಾಶಿ ಕಾಣಸಿಗುತ್ತೋ ಗೊತ್ತಿಲ್ಲ. ಆದ್ರೆ ಈ ದರ್ಗಾಕ್ಕೆ ಬಂದ್ರೆ ಇಡೀ ಆವರಣದಲ್ಲಿ ಕೀಲಿ ಹಾಕಿರೋ ಬೀಗಗಳು, ನೀರು ಸಂಗ್ರಹಿಸಿಟ್ಟ ಬಾಟಲಿಗಳು, ಜೇನುತುಪ್ಪ, ತೆಂಗಿನಕಾಯಿಗಳನ್ನ ನೋಡಬಹುದು. ಅಷ್ಟೇ ಅಲ್ಲ ಭಯ ಭಕ್ತಿಯಿಂದ ದರ್ಗಾದಲ್ಲಿನ (Kalaburagi Dargah) ಗೋರಿಯ ಆಶೀರ್ವಾದ ಪಡೆಯೋದನ್ನ, ದೈವ ಆಹ್ವಾನೆಯಾಗಿ ನರಳಾಡುತ್ತಿರೋರನ್ನ ಇಲ್ಲಿ ಕಾಣಬಹುದಾಗಿದೆ. ಅಷ್ಟಕ್ಕೂ ಈ ದರ್ಗಾ (Special Dargah) ಯಾವುದು ಅಂತೀರ? ಈ ಸ್ಟೋರಿ ನೋಡಿ.


ಕೀಲಿ ಕೈ ಹರಕೆ
ಯೆಸ್, ದೇವರಿಗೆ ತೆಂಗು, ಕಾಯಿ-ಕರ್ಪೂರ ಹಣ್ಣು-ಹಂಪಲುಗಳನ್ನು ಹರಕೆ ರೂಪದಲ್ಲಿ ಕೊಡೋದು ಕಾಮನ್. ಆದ್ರೆ, ಕಲಬುರಗಿಯ ಸೇಡಂ ತಾಲೂಕಿನ ಮಳಖೇಡ್ ಗ್ರಾಮದ ಖಲೀಫತ್ ರೆಹಮನ್ ದರ್ಗಾದಲ್ಲಿ ಕೀಲಿ ಕೈ ಬಹುದೊಡ್ಡ ಹರಕೆ. ತಮ್ಮ ಇಷ್ಟಾರ್ಥಗಳ ಈಡೇರಿಕೆಗಾಗಿ ಭಕ್ತರು ಹೀಗೆ ಬೀಗಗಳನ್ನು ಹಾಕಿ ತೆರಳುತ್ತಾರೆ. ಹೀಗೆ ರಾಶಿ ರಾಶಿ ಬೀಗದ ಕೀಲಿಗಳು ಇಲ್ಲಿ ಕಾಣಸಿಗುತ್ತವೆ.
ಹಲವು ಸಮಸ್ಯೆಗಳಿಗೆ ಪರಿಹಾರ?
ಜೊತೆಗೆ ಮೈಮೇಲೆ ದೆವ್ವಭೂತ ಇದ್ದರೆ ಅಂತವರೂ ಕೂಡ ಕೀಲಿ ಕೈ ಕಟ್ಟುತ್ತಾರೆ. ಹೀಗೆ ಮಾಡೋದರಿಂದ ದೆವ್ವಭೂತಗಳು ಮೈಮೇಲಿಂದ ಹೋಗುತ್ತವೆ ಅನ್ನೋ ನಂಬಿಕೆ ಇಲ್ಲಿನ ಭಕ್ತರದ್ದು. ಅಲ್ಲದೇ ತಮ್ಮ ಮನಸ್ಸಿನಲ್ಲಿ ಏನೇ ಅಂದುಕೊಂಡು ಕೀಲಿ ಕೈ ಕಟ್ಟಿದ್ರೇ ಅದೆಲ್ಲವೂ ಆಗುತ್ತೆ ಅನ್ನೋ ನಂಬಿಕೆಯೂ ಇದೆ. ಇನ್ನೂ ಮದುವೆ ಆಗದವರು, ಮಾನಸಿಕ ಸಮಸ್ಯೆಗಳಿದ್ದರೂ ಇಲ್ಲಿಗೆ ಬರುತ್ತಾರೆ. ಹೀಗಾಗಿ, ಖಲೀಫರ್ ರಹೇಮನ್ ದರ್ಗಾವನ್ನು ಕೀಲಿ ಕೈ ದೇವರೆಂದೇ ಕರೆಯಲಾಗುತ್ತೆ.
ಸಂಜೀವಿನಿಯಂತೆ ಇಲ್ಲಿನ ನೀರು!
ಇನ್ನು ದರ್ಗಾದ ಪಕ್ಕದಲ್ಲಿಯೇ ಇರೋ ಬಾವಿ ರೋಗಿಗಳಿಗೆ ಸಂಜೀವಿನಿ ಆಗಿದೆ. ಇಲ್ಲಿಯ ನೀರು ಕುಡಿದ್ರೇ ಎಲ್ಲಾ ರೋಗಗಳು ಗುಣಮುಖವಾಗುತ್ತವೆ ಅನ್ನೋ ನಂಬಿಕೆ ಇದೆ. ಹೀಗಾಗಿ, ಇಲ್ಲಿಗೆ ಬರೋ ಪ್ರತಿಯೊಬ್ಬ ಭಕ್ತರು ಬಾಟಲ್​ಗಳಲ್ಲಿ ಬಾವಿ ನೀರನ್ನು ತುಂಬಿಕೊಳ್ಳುತ್ತಾರೆ.
ಅದಕ್ಕೆ ದರ್ಗಾದ ಸಜ್ಜಾದೆ ಅವರು ಮಂತ್ರಿಸಿ ಕೊಡ್ತಾರೆ. ಅದು ಪ್ರತಿನಿತ್ಯ ಕುಡಿಯೋದರಿಂದ ಯಾವುದೇ ರೋಗ ಇದ್ದರೂ ಗುಣಮುಖವಾಗುತ್ತವೆ. ಹೀಗಾಗಿ, ಇಲ್ಲಿ ಬಂದಿರೋ ಪ್ರತಿಯೊಬ್ಬರು ಈ ಬಾವಿಯ ನೀರು ತೆಗೆದುಕೊಂಡು ಹೋಗಿ ಪ್ರಸಾದ ರೂಪದಲ್ಲಿ ಸೇವಿಸುತ್ತಾರೆ.


ಇದನ್ನೂ ಓದಿ: Kalaburagi Success Story: ಸಾವಯವ ಬೆಲ್ಲದಿಂದ ಲಕ್ಷಾಧಿಪತಿಗಳಾದ ಅಣ್ಣ ತಮ್ಮಂದಿರು!
ರೋಗ ಶಮನ ನಂಬಿಕೆ
ಇದಲ್ಲದೇ ಇಲ್ಲಿಯ ಭಕ್ತರಿಗೆ ಬಾದಾಮಿ ಬೀಜ, ಜೇನು ತಪ್ಪಾ ಮತ್ತು ಕೊಬ್ಬರಿ ಎಣ್ಣೆ ಕೂಡ ಮಂತ್ರಿಸಿ ಕೊಡಲಾಗುತ್ತೆ. ಹೀಗೆ ಅದೆಲ್ಲವೂ ರೋಗ ಶಮನ ಮಾಡುತ್ತೆ ಅನ್ನೋ ಬಹುದೊಡ್ಡ ನಂಬಿಕೆಯಿದೆ.
ಪ್ರತಿ ಅಮವಾಸ್ಯೆ, ಹುಣ್ಣಿಮೆಯಲ್ಲದೇ ಪ್ರತಿನಿತ್ಯವೂ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಬಂದು ಹೋಗುತ್ತಾರೆ. ಇನ್ನು ಇಲ್ಲಿಗೆ ಕರ್ನಾಟಕವಲ್ಲದೇ ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ ರಾಜ್ಯಗಳ ಭಕ್ತರು ಆಗಮಿಸಿ ಕೀಲಿ ಕೈಗಳನ್ನು ಕಟ್ಟಿ ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಪ್ರಾರ್ಥಿಸುತ್ತಾರೆ.


ಇದನ್ನೂ ಓದಿ: Kalaburagi News: ಅಂಬೇಡ್ಕರ್‌ ಹಬ್ಬ ಆಚರಣೆಗೆ ತವರಿಗೆ ವಾಪಸ್‌ ಆದ ಹೆಣ್ಮಕ್ಕಳು!


ಒಟ್ಟಿನಲ್ಲಿ ಕೀಲಿ ಕೈ ಹಾಕುವ ಮೂಲಕ ಹರಕೆ ಸಲ್ಲಿಸುವ ವಿಶಿಷ್ಟ ಸಂಪ್ರದಾಯ ಈ ದರ್ಗಾದಲ್ಲಿದ್ದು, ಭಕ್ತರ ನಂಬಿಕೆಯನ್ನ ಪ್ರತಿನಿಧಿಸುವಂತಿದೆ.

First published: