• Home
 • »
 • News
 • »
 • kalburgi
 • »
 • Bank Loan Clearance: ಬ್ಯಾಂಕ್ ಸಾಲ ಕ್ಲಿಯರ್ ಮಾಡ್ಕೊಳ್ಳಿ! ಬಡ್ಡಿಗೆ ಶೇ 40% ರಷ್ಟು ಬಂಪರ್ ರಿಯಾಯಿತಿ ಘೋಷಣೆ

Bank Loan Clearance: ಬ್ಯಾಂಕ್ ಸಾಲ ಕ್ಲಿಯರ್ ಮಾಡ್ಕೊಳ್ಳಿ! ಬಡ್ಡಿಗೆ ಶೇ 40% ರಷ್ಟು ಬಂಪರ್ ರಿಯಾಯಿತಿ ಘೋಷಣೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ರಾಜ್ಯದಲ್ಲಿ ಮೊದಲ ಬಾರಿಗೆ ರೈತರಿಗೆ ಅನುಕೂಲವಾಗಲಿ ಎಂಬ ನಿಟ್ಟಿನಲ್ಲಿ ಒನ್ ಟೈಮ್ ಸೆಟಲ್​ಮೆಂಟ್ ಯೋಜನೆಯನ್ನು ಜಾರಿಗೆ ತರಲಾಗಿದೆ.

 • News18 Kannada
 • Last Updated :
 • Gulbarga, India
 • Share this:

  ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳ ರೈತರಿಗಾಗಿ ಡಿಸಿಸಿ ಬ್ಯಾಂಕ್ (DCC Bank) ವತಿಯಿಂದ ಬಂಪರ್ ಆಫರ್ (Bank Loan Clearance)  ಘೋಷಣೆ ಮಾಡಲಾಗಿದೆ. ಕೃಷಿಕರಿಗೆ ಎಂದೇ ಮಧ್ಯಮ ಅವಧಿ ಸಾಲದ ಬಡ್ಡಿಯಲ್ಲಿ ಶೇ.40% ರಿಯಾಯಿತಿಯನ್ನು ಕಲ್ಪಿಸಲಾಗಿದೆ. ರಾಜ್ಯದಲ್ಲಿ ಮೊದಲ ಬಾರಿಗೆ ರೈತರಿಗೆ ಅನುಕೂಲವಾಗಲಿ ಎಂಬ ನಿಟ್ಟಿನಲ್ಲಿ ಒನ್ ಟೈಮ್ ಸೆಟಲ್​ಮೆಂಟ್ ಯೋಜನೆಯನ್ನು ಜಾರಿಗೆ ತರಲಾಗಿದೆ. ಬ್ಯಾಂಕಿನ ಅಭಿವೃದ್ಧಿಯಲ್ಲಿ (Bank Development)  ಪ್ರಮುಖವಾಗಿ ಹೊಸದಾಗಿ ಸಾಲ ವಿತರಿಸಲು ಮಾಧ್ಯಮ ಅವಧಿ ಸಾಲ ವಸೂಲಾತಿಯು (Loan Recovery) ಬಹುಮುಖ್ಯವಾಗಿದೆ.


  ಸಾಲ ವಸತಿಗಾಗಿ ರಾಯಚೂರಿನ ಸಹಕಾರಿ ಸಂಘಗಳ ಜಂಟಿ ನಿರ್ದೇಶಕರು ಈಗಾಗಲೇ ನೋಟಿಸ್ ನೀಡಿದ್ದಲ್ಲದೇ, ಸಿವಿಲ್ ಕೋರ್ಟ್ ನಲ್ಲಿ ದಾವೆ ಹೂಡಿ ಆಸ್ತಿ ಹರಾಜು ಪ್ರಕ್ರಿಯೆಗೆ ಮುಂದಾಗಿದ್ದಾರೆ. ಆದ್ದರಿಂದ ರೈತರು ಇದ್ಯಾವುದಕ್ಕೂ ಅವಕಾಶ ಕೊಡದೆ ಸಾಲ ಮರುಪಾವತಿಸುವುದು ಸೂಕ್ತವಾಗಿದೆ ಎಂದು ಮಾಹಿತಿ ನೀಡಲಾಗಿದೆ.


  ಇದನ್ನೂ ಓದಿ: Positive Story: ಸರ್ಕಾರಿ ಶಾಲೆ ಕಟ್ಟಲು 21 ದಿನಗಳಲ್ಲಿ 60 ಲಕ್ಷ ಸಂಗ್ರಹಿಸಿದ ಸ್ವಾಮೀಜಿ


  ಸರ್ಕಾರ ಒಟಿಎಸ್ ಜಾರಿಗೆ ಅನುಮೋದನೆ
  ನಬಾರ್ಡ್​, ಆರ್​ಬಿಐ, ಮಾರ್ಗಸೂಚಕ ಪ್ರಕಾರ ನಿಯಮಗಳನ್ನು ರೂಪಿಸಿ ಸರ್ಕಾರವು ಕೆಲವು ಶರತ್ತುಗಳೊಂದಿಗೆ ಸರ್ಕಾರ ಒಟಿಎಸ್ ಜಾರಿಗೆ ಅನುಮೋದನೆ ನೀಡಿದೆ ಎಂದು ಪ್ರಕಟಣೆ ಮೂಲಕ ತಿಳಿಸಲಾಗಿದೆ.


  ಇದನ್ನೂ ಓದಿ: Kalaburagi: ಕಲಬುರಗಿಯ ಕಲ್ಲುನಾಡಿನ ಕಲಿಗಳು, 'ಶಿಕ್ಷಿತ'ರಿಂದ ಊರಿಡೀ ಹಚ್ಚಹಸಿರು!


  ಇನ್ನೂ ರೈತರು ಹೆಚ್ಚಿನ ಮಾಹಿತಿಗಾಗಿ ಬ್ಯಾಂಕ್​ ಉಪಾಧ್ಯಕ್ಷರು, ನಿರ್ದೇಶಕರು ಹಾಗೂ ವ್ಯವಸ್ಥಾಪಕ ನಿರ್ದೇಶಕರಿಗೆ ಸಂಪರ್ಕಿಸಬಹುದಾಗಿದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಶಾಸಕ ರಾಜಕುಮಾರ್ ಪಾಟೀಲ್ ತೇಲ್ಕೂರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


  ಹೆಚ್ಚಿನ ಮಾಹಿತಿಗಾಗಿ ಸಂಪರ್ಕ ಸಂಖ್ಯೆ: ಬಸವರಾಜ್ ಕಲ್ಲೂರ್, ಡಿಸಿಸಿ ಬ್ಯಾಂಕ್ ಅಧಿಕಾರಿ 9481167082


  ವರದಿ: ಶ್ರೀಕಾಂತ ಬಿರಾಳ, ಕಲಬುರಗಿ

  Published by:ಗುರುಗಣೇಶ ಡಬ್ಗುಳಿ
  First published: