• Home
 • »
 • News
 • »
 • kalburgi
 • »
 • Benne Dose In Kalaburagi: ಕಲಬುರಗಿಯಲ್ಲಿ ದಾವಣಗೆರೆ ಬೆಣ್ಣೆದೋಸೆ! ರುಚಿ ಹೇಗಿದೆ ಗೊತ್ತಾ?

Benne Dose In Kalaburagi: ಕಲಬುರಗಿಯಲ್ಲಿ ದಾವಣಗೆರೆ ಬೆಣ್ಣೆದೋಸೆ! ರುಚಿ ಹೇಗಿದೆ ಗೊತ್ತಾ?

ಇಲ್ಲಿ ನೋಡಿ ವಿಡಿಯೋ

"ಇಲ್ಲಿ ನೋಡಿ ವಿಡಿಯೋ"

ದಾವಣಗೆರೆ ಬೆಣ್ಣೆದೋಸೆ ಸದ್ಯ ಕಲಬುರಗಿಯಲ್ಲೂ ತನ್ನ ಹವಾ ಹೆಚ್ಚಿಸಿದೆ. ಹಿಂದೆಲ್ಲ ಬೆಣ್ಣೆ ದೋಸೆ ಎಂದಾಗ ದಾವಣಗೆರೆಯತ್ತ ನೋಡುತ್ತಿದ್ದವರು, ಈಗ ಕಲಬುರಗಿಯಲ್ಲೆ ಆ ರುಚಿಯನ್ನ ಸವಿಯುತ್ತಿದ್ದಾರೆ.

 • News18 Kannada
 • Last Updated :
 • Gulbarga, India
 • Share this:

  ಬಿಸಿಬಿಸಿ ಬೆಣ್ಣೆ ದೋಸೆ ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ.. ಅದ್ರಲ್ಲೂ ದಾವಣಗೆರೆ ಬೆಣ್ಣೆ ದೋಸೆ ಅಂದ್ರೆ ಕೇಳ್ಬೇಕೆ? ಆ ಕಡೆ ತಯಾರಾಗ್ತಲೇ ಈ ಕಡೆ ಬಾಯಲ್ಲಿ ನೀರೂರುತ್ತೆ. ಗರಿ ಗರಿಯಾದ ದೋಸೆಯನ್ನ ಚಟ್ನಿನೋ, ಸಾಂಬಾರಿಗೋ ನೆಚ್ಚಿಕೊಂಡು ತಿಂದ್ರಂತೂ ಸೂಪರ್ರೋ ಸೂಪರು! ನೀವೇನಾದ್ರೂ ಕಲಬುರಗಿಯಲ್ಲಿದ್ರೆ, ದಾವಣಗೆರೆ ಬೆಣ್ಣೆ ದೋಸೆ (Dava ತಿನ್ಬೇಕು ಅಂತಾದ್ರೆ ಎಲ್ಲೆಲ್ಲೋ ಹೋಗ್ಬೇಕಿಲ್ಲ. ಈ ಶುಚಿ ರುಚಿಯಾದ ಬೆಣ್ಣೆ ದೋಸೆ ಬಿಸಿಲ ನಗರಿಯಲ್ಲೂ (Benne Dose In Kalaburagi) ಸಿಗುತ್ತೆ ನೋಡಿ.


  ದಾವಣಗೆರೆಯತ್ತ ಹೋದ್ರೆ ಬೆಣ್ಣೆದೋಸೆಯ ರುಚಿ ಸವಿಯದೆ ವಾಪಸ್ ಬರದೇ ಇರಲು ಸಾಧ್ಯವೇ ಇಲ್ಲ. ಹಾಗೇ ಈಗ ಕಲಬುರಗಿಯಲ್ಲೂ ಅದೇ ದಾವಣಗೆರೆ ಬೆಣ್ಣೆ ದೋಸೆ ರುಚಿ ಸವಿಯಬಹುದಾಗಿದೆ. ಕಲಬುರಗಿ ನಗರದ ಶರಣಬಸವೇಶ್ವರ ದೇವಸ್ಥಾನದ ರಸ್ತೆಯಲ್ಲಿರುವುವ ಈ ಫೇಮಸ್ ಆನಂದ ದಾವಣಗೆರೆ ಬೆಣ್ಣೆ ದೋಸೆ ಹೊಟೇಲ್​ನಲ್ಲಿ ದೋಸೆ ಗರಿಗರಿಯಾಗಿರಲು ಹಾಗೂ ರುಚಿ ಹೆಚ್ಚಾಗಿರಲು ದಾವಣಗೆರೆಯಿಂದಲೆ ಪ್ಯೂರ್ ಬೆಣ್ಣೆ ತರಿಸಲಾಗುತ್ತೆ. ಪ್ರತಿದಿನ ಒಟ್ಟು ಹತ್ತು ಕೆಜಿ ಬೆಣ್ಣೆ ಖರ್ಚಾಗುತ್ತಂತೆ. ಥೇಟ್ ದಾವಣಗೆರೆಯಲ್ಲಿ ಸಿಗುವ ರೀತಿಯಲ್ಲೆ ರುಚಿ ಇರುತ್ತೆ ಅಂತಾರೆ ಇಲ್ಲಿ ಬೆಣ್ಣೆ ದೋಸೆ ಸವಿದವರು.


  ಇದನ್ನೂ ಓದಿ: Kalaburagi: ಕಣ್ಣಿಗೆ ಕಾಣದ ಹಾವು 600 ಜನರಿಗೆ ಕಚ್ಚಿದೆಯಂತೆ! ಕಲಬುರಗಿಯ ಈ ಗ್ರಾಮದಲ್ಲಿ ತ್ರಿಶಂಕು ಸ್ಥಿತಿ


  ದೋಸೆ ಸವಿಯೋಕೆ ಎಷ್ಟು ಹೊತ್ತಾದ್ರೂ ನಿಲ್ತಾರೆ!
  ಇತ್ತೀಚಿಗೆ ಆರಂಭವಾದ ಈ ಹೋಟೆಲ್​ನಲ್ಲಿ ಬೆಳಗ್ಗೆಯಾದ್ರೆ ಸಾಕು ಜನ ನೆರೆದಿರ್ತಾರೆ. ಸರತಿ ಸಾಲಿನಲ್ಲಿ ನಿಂತು ಟೋಕನ್ ಪಡೆದು ಬೆಣ್ಣೆ ದೋಸೆ ಸವಿತಾರೆ. ಇಲ್ಲಿನ ಗರಿಗರಿ ದೋಸೆ ಸವಿಯಲು ತೊಗರಿ ನಾಡಿನ ಜನ ಎಷ್ಟು ಹೊತ್ತು ಬೇಕಾದರೂ ಕಾಯಲು ಸಿದ್ಧರು. ಬಿಸಿಬಿಸಿ ಬೆಣ್ಣೆದೋಸೆ ಸವಿಯೋದೆ ಸೌಭಾಗ್ಯ ಅಂತಾರೆ ಗ್ರಾಹಕರು ಅಂದ್ಕೊಂಡಿದ್ದಾರೆ.


  ಇದನ್ನೂ ಓದಿ: Aiwan Shahi Palace: ಈ ಅರಮನೆ ಒಳಗಿಂದ ರೈಲು ಹೋಗ್ತಿತ್ತಂತೆ! ನಿಜಾಮರ ಪ್ಯಾಲೆಸ್ ಇಂದು ಹೀಗಿದೆ


  Benne Dosa Hotel Kalaburagi
  ಈ ಹೋಟೆಲ್​ಗೆ ಹೀಗೆ ಬನ್ನಿ (ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)


  ಒಟ್ಟಾರೆಯಾಗಿ ದಾವಣಗೆರೆ ಬೆಣ್ಣೆದೋಸೆ ಸದ್ಯ ಕಲಬುರಗಿಯಲ್ಲೂ ತನ್ನ ಹವಾ ಹೆಚ್ಚಿಸಿದೆ. ಹಿಂದೆಲ್ಲ ಬೆಣ್ಣೆ ದೋಸೆ ಎಂದಾಗ ದಾವಣಗೆರೆಯತ್ತ ನೋಡುತ್ತಿದ್ದವರು, ಈಗ ಕಲಬುರಗಿಯಲ್ಲೆ ಆ ರುಚಿಯನ್ನ ಸವಿಯುತ್ತಿದ್ದಾರೆ.


  ವರದಿ: ಶ್ರೀಕಾಂತ ಬಿರಾಳ, ಕಲಬುರಗಿ

  Published by:ಗುರುಗಣೇಶ ಡಬ್ಗುಳಿ
  First published: