• Home
 • »
 • News
 • »
 • kalburgi
 • »
 • Custard Apple: ತನ್ನಿಂದ ತಾನೇ ಬೆಳೆಯುತ್ತೆ ಸೀತಾಫಲ! ರುಚಿಯೂ ಸೂಪರ್ ಟೇಸ್ಟಿ

Custard Apple: ತನ್ನಿಂದ ತಾನೇ ಬೆಳೆಯುತ್ತೆ ಸೀತಾಫಲ! ರುಚಿಯೂ ಸೂಪರ್ ಟೇಸ್ಟಿ

ಇಲ್ಲಿ ನೋಡಿ ವಿಡಿಯೋ

"ಇಲ್ಲಿ ನೋಡಿ ವಿಡಿಯೋ"

ಇಲ್ಲಿನ ಗುಡ್ಡಗಳಲ್ಲಿ ಯಾರೂ ಸೀತಾಫಲ ಬಿತ್ತನೆ ಮಾಡಿಲ್ದೇ ಇದ್ರೂ ನೂರಾರು ಗಿಡಗಳು ತನ್ನಿಂದ ತಾನೇ ಬೆಳೆದುನಿಂತಿವೆ.

 • News18 Kannada
 • Last Updated :
 • Gulbarga, India
 • Share this:

  ಕಲಬುರಗಿ: ಯಾರೂ ಬೆಳೆಯಲ್ಲ, ಬೆಳೆಸೋರಿಲ್ಲ. ಆದರೂ ಹಣ್ಣು ಕೊಡುತ್ತೆ ಈ ಸೀತಾಫಲ! ಯಾರೂ ನೀರು ಹಾಕಲ್ಲ, ಪೋಷಣೆ ಮಾಡಲ್ಲ, ಆದ್ರೂ ಊರಿಡೀ ತಿನ್ನುತ್ತೆ ಇದರ ಫಲ. ಇದು ಕಲಬುರಗಿಯ ಸೀತಾಫಲದ (Kalaburagi Custard Apple)  ಮಹಿಮೆ. ತಾನೇ ಹುಟ್ಟಿ ತಾನೇ ಬೆಳೆದು ಪೊಗದಸ್ತಾಗಿ ಹಣ್ಣು ನೀಡುತ್ತಾ ತೊಗರಿ ನಾಡಿನ ಜನರ ಆರೋಗ್ಯವನ್ನೂ ಕಾಪಾಡ್ತಿರೋ ಹಣ್ಣಿನ ಕಥೆಯಿದು. ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ (Chittapur Taluk Custard Apple)  ಗುಡ್ಡಗಳು ಸೀತಾಫಲ ಹಣ್ಣಿಗೆ ಸಖತ್ ಫೇಮಸ್.


  ಸೀತಾಫಲದಲ್ಲಿದೆ ಅತ್ಯುತ್ತಮ ರೋಗ ನಿರೋಧಕ ಶಕ್ತಿ
  ಇಲ್ಲಿನ ಗುಡ್ಡಗಳಲ್ಲಿ ಯಾರೂ ಸೀತಾಫಲ ಬಿತ್ತನೆ ಮಾಡಿಲ್ದೇ ಇದ್ರೂ ನೂರಾರು ಗಿಡಗಳು ತನ್ನಿಂದ ತಾನೇ ಬೆಳೆದುನಿಂತಿವೆ. ಇವುಗಳೆಲ್ಲ ಸೆಪ್ಟಂಬರ್​ನಿಂದ ನವೆಂಬರ್ ತಿಂಗಳ ವೇಳೆಗೆ ಭರ್ಜರಿ ಹಣ್ಣು ನೀಡ್ತಿವೆ. ಈ ಸಮಯದಲ್ಲಂತೂ ಸೀತಾಫಲ ಕೀಳಲು ಗ್ರಾಮಸ್ಥರೆಲ್ಲ ಗುಡ್ಡಗಳತ್ತ ಹೆಜ್ಜೆ ಹಾಕ್ತಾರೆ. ಸೀತಾಫಲದಲ್ಲಿ ಅತ್ಯುತ್ತಮ ರೋಗ ನಿರೋಧಕ ಶಕ್ತಿ ಇರೋದ್ರಿಂದ ಕೆಲವರು ಪೇಟೆಗೆ ಕೊಂಡೊಯ್ದು ಮಾರಾಟ ಮಾಡಿ ಆದಾಯವನ್ನೂ ಗಳಿಸ್ತಾರೆ.


  ಇದನ್ನೂ ಓದಿ: Kalaburagi: ಕಣ್ಣಿಗೆ ಕಾಣದ ಹಾವು 600 ಜನರಿಗೆ ಕಚ್ಚಿದೆಯಂತೆ! ಕಲಬುರಗಿಯ ಈ ಗ್ರಾಮದಲ್ಲಿ ತ್ರಿಶಂಕು ಸ್ಥಿತಿ


  ಸೀತಾಫಲ ಹಣ್ಣು ಬೆಳೆಯುವುದು ಹೆಚ್ಚಾಗಿ ಗುಡ್ಡಗಾಡು ಪ್ರದೇಶದಲ್ಲಿ. ಇಲ್ಲಿನ ಗುಡ್ಡಗಾಡು ಪ್ರದೇಶ ಅದಕ್ಕೆ ಹೆಚ್ಚು ಪೂರಕವಾಗಿದೆ. ಚಿತ್ತಾಪುರದಲ್ಲಿ ಬೆಳೆದ ಸೀತಾಫಲ ಹಣ್ಣುಗಳು ಸಾಕಷ್ಟು ರುಚಿಯಾಗಿ ಇರೋದ್ರಿಂದ ಜನ ಇಲ್ಲಿಗೆ ಬಂದು ಹಣ್ಣನ್ನು ಸವಿಯುತ್ತಾರೆ.


  ತನ್ನಿಂದ ತಾನೇ ಪೊಗದಸ್ತಾಗಿ ಬೆಳೆಯುತ್ತೆ!
  ಕರ್ನಾಟಕದ ಹಲವು ಗುಡ್ಡಗಾಡು ಪ್ರದೇಶಗಳಲ್ಲಿ ಅರಣ್ಯ ಇಲಾಖೆ ವತಿಯಿಂದ ಸೀತಾಫಲದ ಗಿಡಗಳನ್ನು ಬೆಳೆಸೋ ಪ್ರಯತ್ನ ಮಾಡಲಾಗಿದೆ. ಆದ್ರೆ ಚಿತ್ತಾಪುರದ ಈ ಗುಡ್ಡಗಳಲ್ಲಿ ಮಾತ್ರ ತನ್ನಿಂದ ತಾನೇ ಪೊಗದಸ್ತಾಗಿ ಸೀತಾಫಲ ಬೆಳೆಯುತ್ತಿದೆ ಅನ್ನೋದು ಸ್ಥಳಿಯರ ಖುಷಿ ಹೆಚ್ಚಿಸಿದೆ.


  ಇದನ್ನೂ ಓದಿ: Pink Guava: ಪಿಂಕ್ ಪೇರಳೆ ಬೆಳೆದು ದಿನಕ್ಕೆ 2 ಸಾವಿರ ಆದಾಯ!


  ಒಟ್ಟಿನಲ್ಲಿ ಯಾರೂ ಕೃಷಿ ಮಾಡದೇ ಹೋದ್ರೂ ನೂರಾರು ಸೀತಾಫಲ ಮರಗಳು ತನ್ನ ಪಾಡಿಗೆ ತಾನೇ ಬೆಳೆದು ವರ್ಷದ ಎರಡು ತಿಂಗಳು ಹಣ್ಣು ನೀಡ್ತಿವೆ. ಈ ಮೂಲಕ ಊರಿಗೆಲ್ಲ ಚಿತ್ತಾಪುರದ ಗುಡ್ಡದ ಸೀತಾಫಲ ಊರಿಗೆಲ್ಲ ಸಿಹಿ ಹಂಚ್ತಿದೆ.


  ವರದಿ: ಶ್ರೀಕಾಂತ ಬಿರಾಳ, ಕಲಬುರಗಿ

  Published by:ಗುರುಗಣೇಶ ಡಬ್ಗುಳಿ
  First published: