ಕಲಬುರಗಿ: ತೊಗರಿಯ ಕಣಜ ಕಲಬುರಗಿಯಲ್ಲಿ (Kalaburagi News) ಈಗ ಬದಲಾವಣೆಯ ನೀರು ಹರಿಯುತ್ತಿದೆ. ರೈತರು ತೊಗರಿ ಬದಲು ಹತ್ತಿ ಬೆಳೆಯತೊಡಗಿದ್ದಾರೆ. ಈ ವರ್ಷವಂತೂ ಕಲಬುರಗಿಯ ರೈತರು ತೊಗರಿ ಬೆಳೆಯನ್ನ ಬೆಳೆಯದೇ ಅತಿ ಹೆಚ್ಚು ಹತ್ತಿ ಬೆಳೆಯನ್ನು ಬೆಳೆದಿದ್ದಾರೆ. ಇದಕ್ಕೆಲ್ಲ ಕಾರಣ ಹತ್ತಿಗೆ ಸಿಗುತ್ತಿರುವ ಬಂಗಾರದ (Golden Rate) ಬೆಲೆ. ಹತ್ತಿಯ ಡಿಮ್ಯಾಂಡ್ ಹೆಚ್ಚಿದ್ದು, ಮಾರುಕಟ್ಟೆಯಲ್ಲಿ ಹತ್ತಿಯ ಬೆಲೆ ಕ್ವಿಂಟಾಲ್ಗೆ ಒಂಬತ್ತು ಸಾವಿರದ ಗಡಿ ದಾಟಿದೆ. ಇದರಿಂದ ಅನ್ನದಾತನ (Farmers) ಮುಖದಲ್ಲಿ ಮಂದಹಾಸ ಮೂಡಿದೆ.
ಕಲಬುರಗಿ ಜಿಲ್ಲೆಯ ಅಫಜಲಪುರ ಹಾಗೂ ಜೇವರ್ಗಿ ಭಾಗದಲ್ಲಿ ಅತಿ ಹೆಚ್ಚಿನ ಹತ್ತಿಯನ್ನು ಬೆಳೆಯಲಾಗುತ್ತಿದೆ. ಒಟ್ಟಿನಲ್ಲಿ ಸದ್ಯ ತೊಗರಿ ನಾಡಿನ ರೈತರು ಬದುಕು ಹತ್ತಿಯತ್ತ ಸಾಗಿದೆ. ಸದ್ಯ ಹತ್ತಿ ಬೆಳೆಯಿಂದ ಜೇಬು ತುಂಬುತ್ತಿರುವುದು ರೈತರಲ್ಲಿ ಸಂತಸ ಮೂಡಿಸಿದೆ.
ಇದನ್ನೂ ಓದಿ: Kalaburagi: ಇದು ಹಿಂದೂ-ಮುಸ್ಲಿಂ ಧರ್ಮೀಯರನ್ನು ಒಗ್ಗೂಡಿಸೋ ಕಲಬುರಗಿಯ ಭಾವೈಕ್ಯತೆಯ ತಾಣ!
ತೊಗರಿ ನಾಡಲ್ಲಿ ಹತ್ತಿಯ ಕಾರುಬಾರು
ರಾಜ್ಯಾದ್ಯಂತ 7.26 ಲಕ್ಷ ಹೆಕ್ಟೇರ್ ಭೂ ಪ್ರದೇಶದಲ್ಲಿ ಹತ್ತಿ ಬೆಳೆಯಲಾಗಿದೆ. ಒಂದು ಹೆಕ್ಟೇರ್ಗೆ 503 ಕೆಜಿಯಷ್ಟು ಇಳುವರಿ ಬರುವ ನಿರೀಕ್ಷೆಯಿದೆ. ಕಳೆದ ವರ್ಷ 6.21 ಲಕ್ಷ ಹೆಕ್ಟೇರ್ನಲ್ಲಿ ಬೆಳೆದಿದ್ದ ಹತ್ತಿ, ಈ ಬಾರಿ ಒಟ್ಟು ಇಳುವರಿ 19.40 ಲಕ್ಷ ಟನ್ನಷ್ಟು ಇಳುವರಿ ಏರಿಕೆ ಆಗಿರುವುದೇ ತೊಗರಿ ನಾಡಲ್ಲಿ ಹತ್ತಿಯ ಕಾರುಬಾರನ್ನು ತೋರಿಸ್ತಿದೆ.
ಹತ್ತಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯಿದೆ. ಅತಿವೃಷ್ಟಿಯಿಂದಾಗಿ ಕೆಲ ಭಾಗಗಳಲ್ಲಿ ಹತ್ತಿ ಬೆಳೆ ಹಾಳಾಗಿದೆಯಾದ್ರೂ ರಾಜ್ಯದಲ್ಲಿ ಈ ವರ್ಷ ಹತ್ತಿ 21.05 ಲಕ್ಷ ಟನ್ ಉತ್ಪಾದನೆಯಾಗುವ ನಿರೀಕ್ಷೆ ಹೊಂದಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ