ಕಲಬುರಗಿ: ಸೂಫಿ ಸಂತರ ನಾಡಲ್ಲಿ ಸೌಹಾರ್ದ ಯುಗಾದಿ, ಪರಸ್ಪರ ಪಾನಕ ನೀಡಿ ಸಾರಿದ್ರು ನೋಡಿ ಭಾವೈಕ್ಯತೆಯ ಸಂದೇಶ. ಬೇವು ಬೆಲ್ಲದ ಹಬ್ಬಕ್ಕೆ (Ugadi 2023) ಬಂತು ಅರ್ಥಪೂರ್ಣ ಕಲ್ಪನೆ. ಹಾಗಿದ್ರೆ ಹೇಗಿತ್ತು ಸೌಹಾರ್ದತೆಯ ಈ ಯುಗಾದಿ (Communal Harmony Ugadi 2023) ಆಚರಣೆ ಅನ್ನೋದನ್ನ ನೀವೇ ನೋಡಬನ್ನಿ.
ಅಲ್ಲಿ ಬುರ್ಖಾ ಧರಿಸಿದ ಮುಸ್ಲಿಂ ಮಹಿಳೆ, ಕೇಸರಿ ವಸ್ತ್ರಧಾರಿ ಹಿಂದೂ ಮಠಾಧೀಶೆ, ಶಿಲುಬೆಯನ್ನ ಕೊರಳಲ್ಲಿ ಹೊತ್ತ ಕ್ರೈಸ್ತರು ಹೀಗೆ ವಿವಿಧ ಸಮುದಾಯ, ಪಂಗಡದ ಜನ ಒಂದುಗೂಡಿದ್ದರು. ಪರಸ್ಪರ ಶುಭಾಶಯಗಳನ್ನ ಸಲ್ಲಿಸುತ್ತಾ ಯುಗಾದಿ ಹಬ್ಬದ ಆಚರಣೆಯಲ್ಲಿ ತೊಡಗಿದ್ರು.
ಕಲಬುರಗಿಯ ಸೌಹಾರ್ದ ಸಮಿತಿಯಿಂದ ಹೊಸ ಪ್ರಯತ್ನ
ಇದಕ್ಕೆಲ್ಲ ವೇದಿಕೆ ಕಲ್ಪಿಸಿದ್ದು ಕಲಬುರಗಿಯ ಸೌಹಾರ್ದ ಸಮಿತಿ. ಜಗತ್ ವೃತ್ತದಲ್ಲಿರುವ ಬಸವೇಶ್ವರ ಪುತ್ಥಳಿಯ ಆವರಣದಲ್ಲಿ ಸರ್ವಧರ್ಮದ ಜನರು ಸೇರಿ ಯುಗಾದಿ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದರು.
ಇದನ್ನೂ ಓದಿ: Cooker Dhaba: ಈ ಡಾಬಾದಲ್ಲಿ ಎಲ್ಲಾ ಕುಕ್ಕರ್ನಲ್ಲೇ ರೆಡಿಯಾಗುತ್ತೆ! 10 ನಿಮಿಷ ಕಾದರೆ ಸಾಕು ಊಟ ರೆಡಿ!
ಪರಸ್ಪರ ಬೇವು-ಬೆಲ್ಲ ಹಂಚಿ ಸಂಭ್ರಮ
ಹಿಂದೂ ಬಾಂಧವರು ಬೇವು ಬೆಲ್ಲದ ಪಾನಕ ಸಿದ್ಧ ಮಾಡಿ ಆಗಮಿಸಿದ ಮುಸ್ಲಿಂ ಮತ್ತು ಕ್ರಿಶ್ಚಿಯನ್ ಸಮುದಾಯದ ಬಾಂಧವರಿಗೆ ನೀಡಿ ಸ್ವಾಗತಿಸಿದರು. ಇದಕ್ಕೆ ಪ್ರತಿಯಾಗಿ ಮುಸ್ಲಿಂ, ಕ್ರಿಶ್ಚಿಯನ್ ಬಾಂಧವರು ಹಿಂದೂಗಳಿಗೆ ಯುಗಾದಿ ಹಬ್ಬದ ಶುಭಾಶಯವನ್ನು ಹೇಳಿ ಪರಸ್ಪರ ಬೇವು-ಬೆಲ್ಲ ತಿನ್ನಿಸಿದರು.
ಇದನ್ನೂ ಓದಿ: Kalaburagi: ಬರೋಬ್ಬರಿ 100 ವರ್ಷಗಳಿಂದ ಅನ್ನದಾನ, ಇದೇ ನೋಡಿ ಭಕ್ತಿ ಅಂದ್ರೆ!
ಒಟ್ಟಿನಲ್ಲಿ ಸೂಫಿ ಸಂತರ ನಾಡಿನಲ್ಲಿ ಅಲ್ಲಿನ ಜನರು ಹೊಸ ವರ್ಷವನ್ನು ಸೌಹಾರ್ದದ ಕೊಂಡಿಯಾಗಿ ಸ್ವಾಗತಿಸಿಕೊಂಡಿದ್ದಾರೆ. ಮುಂದೆಯೂ ಈ ನಾಡಿನಲ್ಲಿ ಭಾವೈಕ್ಯತೆ ಹೀಗೆಯೇ ಚಿರಾಯುವಾಗಲಿ ಅನ್ನೋದೆ ನಮ್ಮ ಹಾರೈಕೆ.
ವರದಿ: ಶ್ರೀಕಾಂತ ಬಿರಾಳ, ನ್ಯೂಸ್ 18 ಕನ್ನಡ ಡಿಜಿಟಲ್, ಕಲಬುರಗಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ