ಕಲಬುರಗಿ: ಇಲ್ಲಿ ನೆಲೆಸಿರೋ ವಿಘ್ನ ವಿನಾಯಕ ಅಪರೂಪದ ರೂಪ ತಾಳುತ್ತಾನೆ. ಇಂದು ಇದ್ದ ಬಣ್ಣ ನಾಳೆ ಇರದು. ನಾಳೆ ಇದ್ದ ಬಣ್ಣ ನಾಡಿದ್ದಿಗೆ ಇರದು. ಯೆಸ್, ಹೀಗೆ ಬಣ್ಣ ಬದಲಾಯಿಸೋ ಈ ಗಣಪ (Lord Ganapati) ಭಕ್ತರ ಪಾಲಿನ ಆರಾಧ್ಯ ದೈವ. ಅಷ್ಟಕ್ಕೂ ಈ ಬಣ್ಣಗಳು ಬದಲಾಗೋದಾದ್ರೂ ಹೇಗೆ ಅಂತಾನ ನಿಮ್ ಪ್ರಶ್ನೆ. ಆ ಕುತೂಹಲಕ್ಕೆ ಇಲ್ಲಿದೆ ಉತ್ತರ.
ಯೆಸ್, ಭಕ್ತರು ತಮ್ಮ ಇಷ್ಟಾರ್ಥ ಸಿದ್ದಿಯಾದ ಮೇಲೆ ದೇವರಿಗೆ ಭಕ್ತಿಯಿಂದ ತೆಂಗಿನಕಾಯಿ ಹೊಡೆಯುವುದು, ದೀರ್ಘದಂಡ ನಮಸ್ಕಾರ ಹಾಕುವುದು, ಮುಡಿ ಅರ್ಪಿಸುವುದನ್ನು ನೋಡಿದ್ದೀವಿ. ಆದರೆ ಕಲಬುರಗಿಯ ಭಂಕೂರು ಗ್ರಾಮದ ಮುತ್ತಗಾ-ಭಂಕೂರು ರಸ್ತೆಯಲ್ಲಿರುವ ಈ ಗಣಪನಿಗೆ ವಿಶಿಷ್ಟ ರೀತಿಯಲ್ಲಿ ಹರಕೆ ಸಲ್ಲಿಸಲಾಗುತ್ತೆ.
ಇದನ್ನೂ ಓದಿ: Summer Camp In Kalaburagi: ಕಲಬುರಗಿ ರಂಗಾಯಣದಲ್ಲಿ ಮಕ್ಕಳಿಗೆ ವಿಶೇಷ ಶಿಬಿರ, ಇಲ್ಲಿದೆ ವಿವರ
ಅದೇಗೆ ಅಂದ್ರೆ ತಮ್ಮ ಇಷ್ಟಾರ್ಥಗಳು ಈಡೇರಿದ್ರು ಭಕ್ತರು ಈ ಗಣಪತಿ ವಿಗ್ರಹಕ್ಕೆ ಬಣ್ಣ ಬಳಿಸ್ತಾರೆ. ಹೀಗೆ ಬೇರೆ ಬೇರೆ ಬಣ್ಣಗಳನ್ನ ಬಳಿಸೋದ್ರಿಂದ ಈ ಗಣಪನ ಅಲಂಕಾರ ಬದಲಾಗ್ತಲೇ ಇರ್ತವೆ. ಇವತ್ತಿದ್ದ ಬಣ್ಣವೇ ನಾಳೆ ಇರುತ್ತೆ ಎನ್ನಲಾಗದು.
ಉದ್ಭವ ಮೂರ್ತಿ
ಇನ್ನೊಂದು ವಿಶೇಷ ಅಂದ್ರೆ ಇಲ್ಲಿರುವ ವಿನಾಯಕನು ಹದಿನೈದು ಅಡಿ ಎತ್ತರದ ಉದ್ಬವ ಮೂರ್ತಿಯಾಗಿದ್ದು, ಪ್ರತಿ ವರ್ಷ ಬೆಳೆಯುತ್ತಲೆ ಹೋದ ಈ ಮೂರ್ತಿಯನ್ನು ಪೂರ್ವಜರು ಮೂರ್ತಿಯ ತಲೆ ಮೇಲೆ ಹಾರಿ ಜಡಿದು ನಿಲ್ಲಿಸಿದ್ರಂತೆ. ಇನ್ನು ತಮ್ಮ ಇಷ್ಟಾರ್ಥ ಸಿಧ್ದಿಯಾದ ಮೇಲೆ ದೇವಸ್ಥಾನಕ್ಕೆ ಬರಲೇಬೇಕು ಎಂದೇನಿಲ್ಲ. ತಾವಿದ್ದಲ್ಲಿಂದಲೇ ಹಣ ಪಾವತಿಸಿದ್ರೆ ಸಾಕು ಸ್ಥಳೀಯರು, ಗಣೇಶನಿಗೆ ಪೇಂಟ್ ಮಾಡಿಸಿ ಭಕ್ತರಿಗೆ ಪೋಟೋ ಕಳುಹಿಸುತ್ತಾರೆ. ಸಾಧ್ಯವಾದವರು ದೇವಸ್ಥಾನಕ್ಕೆ ಬಂದು ಪೇಂಟ್ ಬಳಿಸಿ ಹರಕೆ ತೀರಿಸುವರು.
ಇದನ್ನೂ ಓದಿ: Weather Update: ಈ ಜಿಲ್ಲೆಯಲ್ಲಿ ಅತಿ ಹೆಚ್ಚು ತಾಪಮಾನ ದಾಖಲು
ಒಟ್ಟಿನಲ್ಲಿ ಭಂಕೂರಿನ ಉದ್ಬವ ಮೂರ್ತಿಯಾದ ಗಣಪತಿಯು ಬಣ್ಣ ಬದಲಾಯಿಸುತ್ತಾ ಭಕ್ತರನ್ನು ಹರಸುತ್ತಿದ್ದಾನೆ. ಹೀಗೆ ಬಣ್ಣ ಬದಲಾಯಿಸುವ ವಿಘ್ನ ವಿನಾಯಕ ಅಂತಲೇ ಈ ಗಣಪ ಹೆಸರಾಗಿದ್ದಾನೆ.
ವರದಿ: ಶ್ರೀಕಾಂತ ಬಿರಾಳ, ನ್ಯೂಸ್ 18 ಕನ್ನಡ ಡಿಜಿಟಲ್, ಕಲಬುರಗಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ