Kalaburagi: ಬಿಸಿಲ ನಗರಿಯಲ್ಲಿ ಚಿತ್ರಸಂತೆ, ಕಲಾವಿದರ ಕೈಚಳಕಕ್ಕೆ ಬೆರಗಾದ ಕಲಾಸಕ್ತರು

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಈ ಚಿತ್ರ ಸಂತೆಯಲ್ಲಿ ಕಲಬುರಗಿ ಸೇರಿದಂತೆ ರಾಯಚೂರು, ಬೀದರ್, ವಿಜಯಪುರ ಜಿಲ್ಲೆಯ ಖ್ಯಾತ‌ ಕಲಾವಿದರು ಭಾಗವಹಿಸಿದ್ದರು.

  • News18 Kannada
  • 2-MIN READ
  • Last Updated :
  • Gulbarga, India
  • Share this:

    ಕಲಬುರಗಿ: ರಂಗು ರಂಗಿನ ಚಿತ್ತಾರ, ಪೇಂಟಿಂಗ್‌ ರಾಶಿಗಳ ಕಲರವ. ನೋಡುಗರ ಚಿತ್ತವನ್ನ ಸೆಳೆಯಿತು ನೋಡಿ (Kalaburagi Chitra Sante)  ಈ ಚಿತ್ರಲೋಕ. ಯೆಸ್‌, ಪೇಂಟು, ಬ್ರಶ್​ಗಳ ನಡುವಿನ ಅಂಡರ್​ಸ್ಟ್ಯಾಂಡ್‌, ವರ್ಣಗಳ ನಡುವಿನ ಕಾಂಬಿನೇಶನ್‌ ಹೀಗೆ ಕಣ್ಣಿಗೆ ಮುದ ನೀಡುವ, ಮನಸ್ಸಿಗೆ ಖುಷಿ ಕೊಡುವ ಚಿತ್ರಸಂತೆಯನ್ನೇ (Chitr Sante) ಸೃಷ್ಟಿಸಿತ್ತು. 


    ಆರ್ಟ್‌ ಫೆಸ್ಟಿವಲ್
    ಯೆಸ್‌, ಹೀಗೆ ಚಿತ್ರಗಳನ್ನ ಬಿಡಿಸ್ತಾ ತಮ್ಮದೇ ಲೋಕದಲ್ಲಿ ವಿಹರಿಸುತ್ತಿರುವ ಕಲಾವಿದರ ಕೂಟ ಕಂಡುಬಂದಿದ್ದು ಕಲಬುರಗಿಯಲ್ಲಿ ಏರ್ಪಡಿಸಲಾಗಿದ್ದ ಆರ್ಟ್‌ ಫೆಸ್ಟಿವಲ್​ನಲ್ಲಿ. ಲಿಂಗೈಕ್ಯ ಸಿದ್ದೇಶ್ವರ ಸ್ವಾಮೀಜಿಗಳಿಂದ ಹಿಡಿದು ಸಮಾಜ ಸುಧಾರಕರಾದ ಬಸವಣ್ಣ, ನಾರಾಯಣ ಗುರು, ಬುದ್ಧ ಹಾಗೂ ಹಿಂದೂ ದೇವಾದಿದೇವತೆಗಳು, ನಾಡಿನ ವಿವಿಧ ಸಂಸ್ಕೃತಿಗಳು ಕಲಬುರಗಿಯ ಉದ್ಯಾನದಲ್ಲಿ ಅನಾವರಣಗೊಂಡಿತ್ತು.


    ಖುಷಿಪಟ್ಟ ಮಕ್ಕಳು
    ಲೈವ್‌ ಪೇಂಟಿಂಗ್‌ ಮುಂದೆ ಕೂತು ಹಲವರು ತಮ್ಮ ಚಿತ್ರಗಳನ್ನ ಕಲಾವಿದರಿಂದ ಬಿಡಿಸಿಕೊಂಡರು. ಪುಟ್ಟ ಪುಟ್ಟ ಮಕ್ಕಳು ಕೂಡಾ ಖುಷಿಯಿಂದ ಚಿತ್ರ ಬಿಡಿಸುತ್ತ ನೆರೆದವರನ್ನ ಆಶ್ಚರ್ಯಚಕಿತರನ್ನಾಗಿಸಿದರು. ಕೆಲವೊಂದು ಪೇಂಟಿಂಗ್​​ಗಳಂತೂ ಅದ್ಭುತವಾಗಿದ್ದು, ಜನ ಅವುಗಳ ಫೋಟೋ ಕ್ಲಿಕ್ಕಿಸಿ ಕಲಾವಿದರ ಜೊತೆ ಮಾತನಾಡ್ತಾ ಪ್ರೋತ್ಸಾಹಿಸಿದರು.




    ಖ್ಯಾತ ಕಲಾವಿದರ ಸಮಾಗಮ
    ದೃಶ್ಯ ಬೆಳಕು ಸಾಂಸ್ಕೃತಿಕ ಸಂಸ್ಥೆ, ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘ, ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆ ಸೇರಿದಂತೆ ವಿವಿಧ ಕಲಾಸಂಸ್ಥೆಗಳ ಸಹಯೋಗದಲ್ಲಿ ಈ ಆರ್ಟ್‌ ಫೆಸ್ಟಿವಲ್‌ ಆಯೋಜನೆಯಾಗಿತ್ತು. ಈ ಚಿತ್ರ ಸಂತೆಯಲ್ಲಿ ಕಲಬುರಗಿ ಸೇರಿದಂತೆ ರಾಯಚೂರು, ಬೀದರ್, ವಿಜಯಪುರ ಜಿಲ್ಲೆಯ ಖ್ಯಾತ‌ ಕಲಾವಿದರು ಭಾಗವಹಿಸಿದ್ದರು.


    ಇದನ್ನೂ ಓದಿ: Nagavi Yellamma Temple: ಪ್ರಾಚೀನ ವಿಶ್ವವಿದ್ಯಾಲಯ ಈಗ ಹಾಳುಕೊಂಪೆ! ಹೇಳ್ತೀವಿ ಕೇಳಿ ಪುಣ್ಯತಾಣದ ವಿಚಿತ್ರ ಕಥೆ


    ಬಗೆಬಗೆಯ ಚಿತ್ರ ಖರೀದಿ
    ಉದ್ಯಾನವನದಲ್ಲಿ ಸ್ಥಾಪಿಸಲಾಗಿದ್ದ ನೂರಕ್ಕೂ ಅಧಿಕ ಮಳಿಗೆಗಳಲ್ಲಿ ಸಾರ್ವಜನಿಕರು ತಮಗಿಷ್ಟವಾದ ಚಿತ್ರವನ್ನ ಖರೀದಿಸಿದರು.


    ಇದನ್ನೂ ಓದಿ: Kalaburagi Viral News: 12 ವರ್ಷಗಳ ಬಳಿಕ ಮನೆಗೆ ಮರಳಿದ ವ್ಯಕ್ತಿ! ಇಷ್ಟು ದಿನ ಎಲ್ಲಿದ್ರು ಗೊತ್ತಾ?


    ಒಟ್ಟಿನಲ್ಲಿ ಬಿಸಿಲ ನಗರಿಯಲ್ಲಿ ನಡೆದ ಈ ಕಾರ್ಯಕ್ರಮದ ಒಂದೊಂದು ಚಿತ್ರಗಳು ತಂಪೆರೆದಂತಿತ್ತು. ಮಕ್ಕಳ ಜೊತೆಗೆ ಪೋಷಕರು ಕೂಡಾ ಜೊತೆಯಾಗಿ ಚಿತ್ರ ಬಿಡಿಸಿ ಖುಷಿಪಟ್ಟರು. ಚಿತ್ರಗಳ ಚಿತ್ತಾರ ಉದ್ಯಾನವನದಲ್ಲಿ ಹೊಸ ಲೋಕ ಮೂಡಿಸಿದ್ದಂತೂ ಸುಳ್ಳಲ್ಲ.


    ವರದಿ: ಶ್ರೀಕಾಂತ್ ಬಿರಾಳ, ನ್ಯೂಸ್18 ಕನ್ನಡ ಡಿಜಿಟಲ್, ‌ಕಲಬುರಗಿ

    Published by:ಗುರುಗಣೇಶ ಡಬ್ಗುಳಿ
    First published: