ಕಲಬುರಗಿ: ಆಕಾಶದಲ್ಲಿ ಹಾರಾಡುತ್ತಿರುವ ಬಣ್ಣಬಣ್ಣದ ಗಾಳಿಪಟಗಳು, ಪ್ರೇಕ್ಷಕರನ್ನು ಆಕರ್ಷಿಸುತ್ತಿರೋ ನೀಲಿ ಆಕಾಶದಲ್ಲಿ ಮೂಡಿದ ಪಟಗಳ ಚಿತ್ತಾರ. ಈ ದೃಶ್ಯಗಳು ಕಂಡದ್ದು ಬಿಸಿಲ ನಾಡು ಕಲಬುರಗಿಯಲ್ಲಿ. ಗಾಳಿಪಟದ ಹೆಸರು ಕೇಳಿದ್ರೆ ಸಾಕು, ಬಾಲ್ಯವೇ ನೆನಪಿಗೆ ಬರುತ್ತೆ. ಶಾಲಾ ರಜೆಗಳಲ್ಲಿ ದಿನಪೂರ್ತಿ ಗಾಳಿಪಟ ಹಾರಿಸಿದ ನೆನಪು ಮರುಕಳಿಸುತ್ತೆ. ಅಷ್ಟಕ್ಕೂ ಈಗೇಕೆ ಗಾಳಿಪಟದ ಬಗ್ಗೆ ಮಾತಾಡ್ತಿದ್ದಿವಿ ಅಂದ್ಕೊಂಡ್ರಾ? ಕಲಬುರಗಿಯಲ್ಲಿ (Kalaburagi News) ಆಯೋಜಿಸಿದ್ದ ಗಾಳಿಪಟ ಉತ್ಸವ (Kite Festival) ಬಾಲ್ಯಕ್ಕೆ ಕರೆದೊಯ್ದಿತು.
ಇದನ್ನೂ ಓದಿ: Krishna River: ಕೃಷ್ಣಾ ನದಿಯಲ್ಲಿ ಮಿಂದೆದ್ದ ಸಾವಿರಾರು ಜನರು! ಕಾರಣ ಹೀಗಿದೆ ನೋಡಿ
ಗಾಳಿಪಟ ಉತ್ಸವಕ್ಕೆ ಆಗಮಿಸಿದ್ದ ನೂರಾರು ಜನರು
ಕಲಬುರಗಿ ನಗರದ ಜಮಶೆಟ್ಟಿ ಲೇಔಟ್ನಲ್ಲಿ ಸಂಕ್ರಮಣದ ಪ್ರಯುಕ್ತ ಸುರಭಿ ಕಲಾ ವೃಂದದಿಂದ ಗಾಳಿಪಟ ಉತ್ಸವ ಆಯೋಜಿಸಲಾಗಿತ್ತು. ಮಕ್ಕಳು, ಯುವಕ-ಯುವತಿಯರು, ವೃದ್ದರು ಗಾಳಿಪಟ ಹಾರಿಸಿ ಸಂಭ್ರಮಿಸಿದರು. ಆಕಾಶದಲ್ಲಿ ಹಾರಾಡುತ್ತಿರುವ ಬಣ್ಣಬಣ್ಣದ ಗಾಳಿಪಟವನ್ನು ಕಣ್ತುಂಬಿಕೊಳ್ಳಲು ನೂರಾರು ಜನರು ಆಗಮಿಸಿದ್ದರು.
ಇದನ್ನೂ ಓದಿ: Kalaburgi: ಯೂಟ್ಯೂಬ್ ನೋಡಿ ಯೋಗ ಕಲಿತಳು ಈ ಪುಟಾಣಿ!
ಹೊಸ ಲೋಕವನ್ನೇ ಸೃಷ್ಟಿಸಿದ ಗಾಳಿಪಟಗಳು
ಸಂಕ್ರಾಂತಿ ಹಬ್ಬದಂದು ಶಾಲಾ ಕಾಲೇಜುಗಳು ರಜೆ ಇರುವುದರಿಂದ ಮಕ್ಕಳು ಹಾಗೂ ಯುವಕ ಯುವತಿಯರು ಇನ್ನಷ್ಟು ಖುಷಿಯಿಂದ ಗಾಳಿಪಟ ಹಾರಿಸಿದರು. ಈ ಬಾರಿಯ ಸಂಕ್ರಾಂತಿ ಹಬ್ಬವನ್ನ ವಿಶೇಷವಾಗಿ ಆಚರಿಸಿ ಸಂತೋಷದ ಕಡಲಲ್ಲಿ ತೇಲಾಡಿದರು. ಕಲರ್ಫುಲ್ ಗಾಳಿಪಟಗಳ ಹಾರಾಟ ಬಾನಂಗಳದಲ್ಲಿ ಹೊಸ ಲೋಕವನ್ನೇ ಸೃಷ್ಟಿಸಿತು.
ವರದಿ: ಶ್ರೀಕಾಂತ ಬಿರಾಳ, ಕಲಬುರಗಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ