• Home
  • »
  • News
  • »
  • kalburgi
  • »
  • Kalaburagi: ಶ್ರೀಕೃಷ್ಣನಿಗೆ 56 ಬಗೆಯ ನೈವೇದ್ಯ! ವಿಶೇಷ ಸೇವೆ ಕಣ್ತುಂಬಿಸಿಕೊಳ್ಳಿ

Kalaburagi: ಶ್ರೀಕೃಷ್ಣನಿಗೆ 56 ಬಗೆಯ ನೈವೇದ್ಯ! ವಿಶೇಷ ಸೇವೆ ಕಣ್ತುಂಬಿಸಿಕೊಳ್ಳಿ

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಒಂದು ಕ್ವಿಂಟಲ್ ಅರಿಶಿಣ, ಒಂದು ಕ್ವಿಂಟಾಲ್ ಸಕ್ಕರೆ, ಬೆಲ್ಲ, ಅಕ್ಕಿ ವೀಳ್ಯದ ಎಲೆ, ಅಡಿಕೆ, ಬಳೆ, ಬ್ಲೌಸ್ ಪೀಸ್​ಗಳು, ಎಳ್ಳು , ಬೆಲ್ಲ ಸೇರಿದಂತೆ ವಿವಿಧ ದವಸ, ಧಾನ್ಯಗಳಿಗೆ ಪೂಜೆ ಸಲ್ಲಿಸಲಾಯ್ತು.

  • News18 Kannada
  • Last Updated :
  • Gulbarga, India
  • Share this:

    ಕಲಬುರಗಿ: ಬೆಲ್ಲ, ಸಕ್ಕರೆ, ಸೀರೆ, ಬಳೆ, ಅರಿಶಿನ, ಕುಂಕುಮ ಹೀಗೆ ಸಂತೆಯಂತೆ ರಾಶಿ ರಾಶಿ ಸಾಮಾಗ್ರಿಗಳು. ಅವುಗಳ ಮೇಲೆ ಕಡೆಗೋಲಿನಂತೆ ಕಬ್ಬಿನಿಂದ (Sugarcane)  ತಿರುಗಿಸುವ ಮಹಿಳೆಯರು. ಹೀಗೆ ಅಲ್ಲೊಂದು ಸಂಭ್ರಮದ (Festival)  ವಾತಾವರಣ. ಅದ್ರಲ್ಲೂ ಮಹಿಳೆಯರಂತೂ ಸಾಂಪ್ರದಾಯಿಕ ಸೀರೆ ತೊಟ್ಟು (Traditional Dress) ಮಿರಮಿರ ಮಿಂಚ್ತಾ ಸಂಭ್ರಮವನ್ನು ಎರಡು ಪಟ್ಟು ಹೆಚ್ಚಾಸಿದ್ರು. ಹಾಗಾದ್ರೆ ಇದೇನು ವಿಶೇಷ? ಏನಿದು ಸಂಭ್ರಮ? ಅನ್ನೋದನ್ನ ಹೇಳ್ತೀವಿ ನೋಡಿ.


    ಇಂತಹ ವಿಶಿಷ್ಟ ಸಂಭ್ರಮ, ಸಂಪ್ರದಾಯ ಕಂಡುಬಂದಿದ್ದು ಕಲಬುರಗಿ ನಗರದ ಪುಟಾಣಿ ಗಲ್ಲಿಯಲ್ಲಿರುವ ನಗರೇಶ್ವರ ದೇವಸ್ಥಾನದಲ್ಲಿ. ಸಂಕ್ರಾಂತಿ ಹಬ್ಬದ ಪ್ರಯುಕ್ತ ನಗರೇಶ್ವರ ಮಂದಿರದಲ್ಲಿ ಆರ್ಯವೈಶ್ಯ ಸಮಾಜದ ಮಹಿಳೆಯರಿಂದ ಪಂಚಾಕ್ಷರಿ ಬಾಗಿನ ಮತ್ತು ಶ್ರೀಕೃಷ್ಣನಿಗೆ 56 ಬಗೆಯ ನೈವೇದ್ಯ ಅರ್ಪಿಸಲಾಯ್ತು. ಒಂದು ಕ್ವಿಂಟಲ್ ಅರಿಶಿಣ, ಒಂದು ಕ್ವಿಂಟಾಲ್ ಸಕ್ಕರೆ, ಬೆಲ್ಲ, ಅಕ್ಕಿ ವೀಳ್ಯದ ಎಲೆ, ಅಡಿಕೆ, ಬಳೆ, ಬ್ಲೌಸ್ ಪೀಸ್​ಗಳು, ಎಳ್ಳು , ಬೆಲ್ಲ ಸೇರಿದಂತೆ ವಿವಿಧ ದವಸ, ಧಾನ್ಯಗಳಿಗೆ ಪೂಜೆ ಸಲ್ಲಿಸಲಾಯ್ತು.


    ಗೌರಿಯ ತೊಟ್ಟಿಲ ಶಾಸ್ತ್ರ
    ಮಹಿಳೆಯರೆಲ್ಲರು ಸೇರಿಕೊಂಡು ಕೈಯಲ್ಲಿ ಕಬ್ಬುಗಳನ್ನು ಹಿಡಿದು ಹಾಡುಗಳನ್ನ ಹಾಡಿ ಭಕ್ತಿಯಿಂದ ನಮಿಸಿ ಪಂಚಾಕ್ಷರಿ ಬಾಗಿನವನ್ನು ಅರ್ಪಿಸಲಾಯ್ತು. ಗೌರಿಪೂಜೆ ಮಾಡಿದ ನಂತರ ಗೌರಿಯನ್ನು ಹೂವಿನಿಂದ ಸಿಂಗರಿಸಿದ ತೊಟ್ಟಿಲಲ್ಲಿ ಕೂರಿಸಿ ಕುಂಕುಮ ಹೂಗಳನ್ನು ಇಟ್ಟು ಪೂಜೆ ಸಲ್ಲಿಸಿ ಹಾಡುಗಳನ್ನು ಹಾಡಿ ಗೌರಿಯ ತೊಟ್ಟಿಲ ಶಾಸ್ತ್ರ ನೆರವೇರಿಸಿದರು.


    ಇದನ್ನೂ ಓದಿ: Kite Festival: ಗಾಳಿಪಟ ಉತ್ಸವದ ಸಂಭ್ರಮದಲ್ಲಿ ಮಿಂದೆದ್ದ ಕಲಬುರಗಿ!




    56 ಬಗೆಯ ನೈವೇದ್ಯದ ವಿಶೇಷವೇನು?
    ಅಷ್ಟಕ್ಕೂ ಈ ಆಚರಣೆಯಲ್ಲಿ ಗಮನಸೆಳೆದ 56 ಬಗೆಯ ನೈವೇದ್ಯ ಅಂದ್ರೆ ದಿನಕ್ಕೆ ಎಂಟು ಬಾರಿ ಊಟ ಮಾಡುತ್ತಿದ್ದ ಶ್ರೀಕೃಷ್ಣ ಗೋವರ್ಧನ ಬೆಟ್ಟ ಎತ್ತಲು ಹೋಗಿದ್ದಾಗ ಒಂದು ವಾರಗಳ ಕಾಲ ಉಪವಾಸ ಮಾಡಿದ್ದ. ನಂತರ ಎಂಟನೇ ದಿನಕ್ಕೆ ಮನೆಗೆ ಬಂದಿದ್ದ ಶ್ರೀ ಕೃಷ್ಣನನ್ನು ತಾಯಿ ಯಶೋದಾ ಮಾತೆ ಒಂದು ವಾರಗಳ ಕಾಲ ಉಪವಾಸ ಮಾಡಿ ಮನೆಗೆ ಬಂದಿದ್ದ ಶ್ರೀಕೃಷ್ಣನನ್ನು ದಿನಕ್ಕೆ ಎಂಟು ಊಟದಂತೆ 56 ವಿವಿಧ ಸಿಹಿ ತಿನಿಸುಗಳನ್ನು ಮಾಡಿ ಉಣ ಬಡಿಸಿದ್ದಳು ಎಂಬ ಪ್ರತೀತಿಯಿದೆ.


    ಇದನ್ನೂ ಓದಿ: Bidri Art: ರಷ್ಯಾದಲ್ಲೂ ಫೇಮಸ್ ನಮ್ಮ ಕರುನಾಡಿನ ಬಿದರಿ ಕಲೆ!


    ಒಟ್ಟಾರೆ ಕಲಬುರಗಿ ನಗರದಲ್ಲಿಈ ಆಚರಣೆಗಳು ಶ್ರೀ ಕೃಷ್ಣನ ಭಕ್ತರ ಸಂಭ್ರಮವನ್ನು ಹೆಚ್ಚಿಸಿದವು


    ವರದಿ: ಶ್ರೀಕಾಂತ್ ಬಿರಾಳ, ಕಲಬುರಗಿ

    Published by:ಗುರುಗಣೇಶ ಡಬ್ಗುಳಿ
    First published: