ಕಲಬುರಗಿ: ವಿದ್ಯಾರ್ಥಿಗಳೇ ಗಮನಿಸಿ, ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ (Central University Kalaburagi) ಪದವಿ ಕೋರ್ಸ್ಗಳಿಗೆ ಪ್ರವೇಶ ಕಲ್ಪಿಸುವ ನಿಟ್ಟಿನಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಮೇ 21ರಿಂದ 31ರವರೆಗೆ ಪರೀಕ್ಷೆಗಳು (Exams) ನಡೆಯಲಿವೆ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ತಿಳಿಸಿದ್ದಾರೆ.
ಕಲಬುರಗಿಯ ಕಡಗಂಚಿ ಸಮೀಪದ ಸಿಯುಕೆ ಕ್ಯಾಂಪಸ್ನಲ್ಲಿ ಫೆಬ್ರವರಿ 9ರಿಂದ ಆನ್ಲೈನ್ ಮೂಲಕ ಅರ್ಜಿ ಹಂಚಿಕೆ ಪ್ರಕ್ರಿಯೆ ಆರಂಭಗೊಂಡಿದೆ. ಮಾರ್ಚ್ 12ರವರೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿಗಳನ್ನು ಅಧಿಕೃತ ವೆಬ್ಸೈಟ್ ಮೂಲಕ ಸಲ್ಲಿಸಬೇಕಿದಾಗಿದೆ. ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
ವಿದ್ಯಾರ್ಥಿಗಳೇ, ಈ ಮಾಹಿತಿಯನ್ನು ಮರೆಯಬೇಡಿ
ಪರೀಕ್ಷೆಯು ಆನ್ಲೈನ್ ಮೂಲಕವೇ ನಡೆಯಲಿದೆ. ಮೇ ಎರಡನೇ ವಾರದಲ್ಲಿ ಎನ್.ಟಿ.ಎ ವೆಬ್ಸೈಟ್ ಮೂಲಕ ವಿದ್ಯಾರ್ಥಿಗಳು ಪ್ರವೇಶ ಕಾರ್ಡ್ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.
ಎಪ್ರಿಲ್ 30ರಂದು ಈ ಮಾಹಿತಿ ಬಹಿರಂಗ
ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ ಬಳಿಕ ಪುನಃ ಏನಾದರೂ ತಿದ್ದುಪಡಿಗೆ ಬಯಸುವುದಾದರೆ ಮಾರ್ಚ್ 15ರಿಂದ 18ರ ರಾತ್ರಿ 11.50ರವರೆಗೆ ಅವಕಾಶ ನೀಡಲಾಗುವುದು. ಎಪ್ರಿಲ್ 30ರಂದು ಪರೀಕ್ಷೆ ಕೈಗೊಳ್ಳುವ ಸ್ಥಳ ಮತ್ತು ನಗರಗಳ ಕುರಿತು ವೆಬ್ಸೈಟ್ನಲ್ಲಿಯೇ ಮಾಹಿತಿ ನೀಡಲಾಗುತ್ತದೆ.
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ 10 ಸ್ನಾತಕ ಕೋರ್ಸ್ಗಳು
ಪ್ರಸ್ತುತ ಸಿಯುಕೆ 10 ಸ್ನಾತಕ ಕೋರ್ಸ್‌ಗಳನ್ನು ನಡೆಸಲಾಗುತ್ತಿದೆ. ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಕಾರ ತರಗತಿಗಳನ್ನು ನಡೆಸಲಾಗುತ್ತಿದೆ. ಬಿ.ಟೆಕ್ ಎಲೆಕ್ಟ್ರಿಕಲ್ ಎಂಜಿನಿಯರಿಂಗ್, ಬಿ.ಟೆಕ್ ಎಲೆಕ್ಟ್ರಾನಿಕ್ ಅ್ಯಂಡ್ ಕಮ್ಯುನಿಕೇಷನ್, ಬಿ.ಎಸ್ಸಿ (ಭೌತಶಾಸ್ತ್ರ ಸಿಂಗಲ್ ಮೇಜರ್), ಬಿಎಸ್ಸಿ (ಕೆಮಿಸ್ಟ್ರಿ ಸಿಂಗಲ್ ಮೇಜರ್), ಬಿಎಸ್ಸಿ (ಭೂ ವಿಜ್ಞಾನ ಮತ್ತು ಜೀವ ವಿಜ್ಞಾನ), ಬಿಎಸ್ಸಿ (ಗಣಿತ ಮತ್ತು ಕಂಪ್ಯೂಟರ್ ವಿಜ್ಞಾನ), ಬಿಎಸ್ಸಿ/ಬಿಎ (ಮನೋವಿಜ್ಞಾನ ಮತ್ತು ಇಂಗ್ಲಿಷ್), ಬಿಎಸ್ಸಿ (ಭೂಗೋಳ ಮತ್ತು ಇತಿಹಾಸ) ಮತ್ತು ಬಿಎ (ಅರ್ಥಶಾಸ್ತ್ರ ಮತ್ತು ಸಮಾಜ ಕಾರ್ಯ) ಕೋರ್ಸ್ಗಳಿಗೆ ಪ್ರವೇಶ ಪರೀಕ್ಷೆ ಕೈಗೊಳ್ಳಲಾಗುತ್ತಿದೆ.
ಇದನ್ನೂ ಓದಿ: Kalaburagi: ಬಾನಂಗಳದಲ್ಲಿ ಪತಂಗಗಳ ಚಿತ್ತಾರ! ಕಲ್ಯಾಣ ಕರ್ನಾಟಕದಲ್ಲಿ ಗಾಳಿಪಟಗಳ ರಂಗು!
ಎಲ್ಲ ಕೋರ್ಸ್ಗಳಿಗೆ 40 ಸೀಮಿತ ಪ್ರವೇಶಾತಿಗೆ ಮಾತ್ರ ಅವಕಾಶವಿದ್ದು, 15 ಸಾಮಾನ್ಯ, ಎಂಟು ಒಬಿಸಿ, ಐದು ಎಸ್ಸಿ, ಎರಡು ಎಸ್ಟಿ, ಮೂರು ಇಡಬ್ಲ್ಯುಎಸ್ ಮತ್ತು ಮೂರು ಕಲ್ಯಾಣ ಕರ್ನಾಟಕ ಪ್ರದೇಶದ ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸಲಾಗುವುದು. ಎನ್.ಸಿ.ಸಿ/ಎನ್.ಎಸ್.ಎಸ್, ಕ್ರೀಡಾಪಟುಗಳು, ಅಂಗವಿಕಲರು, ಕಾಶ್ಮೀರಿ ವಲಸಿಗರು ಮತ್ತು ರಕ್ಷಣಾ ಸಿಬ್ಬಂದಿಯ ಮಕ್ಕಳಿಗೆ ತಲಾ ಒಂದು ಪ್ರವೇಶ ನೀಡಲಾಗುವುದು ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: Positive Story: ಈ ವಿಶೇಷ ಚೇತನರ ಬದುಕೇ ಸ್ಪೂರ್ತಿ, ಎಲ್ರಿಗೂ ಮಾದರಿ ಕಲಬುರಗಿಯ ನಾಗೇಂದ್ರ
ಇನ್ನು ಬಿಟೆಕ್ ಎಂಜಿನಿಯರಿಂಗ್ ಕೋರ್ಸ್ಗಳಿಗೆ ಪ್ರವೇಶಾತಿಯನ್ನು ಸಿಯುಇಟಿ ಮತ್ತು ಜೆಇಇ ಮೂಲಕ ನಡೆಸಲಾಗುತ್ತದೆ. ಶೇ.50ರಷ್ಟು ಸೀಟುಗಳನ್ನು ಸಿಯುಇಟಿ ಮತ್ತು ಶೇ.50 ಸೀಟುಗಳನ್ನು ಜೆಇಇ ಮೂಲಕ ಭರ್ತಿ ಮಾಡಲಾಗುವುದು ಎಂದು ಪ್ರೊ.ಬಟ್ಟು ತಿಳಿಸಿದ್ದಾರೆ.
13 ಭಾಷೆಗಳಲ್ಲಿ ಪರೀಕ್ಷೆ
ಪ್ರವೇಶ ಪರೀಕ್ಷೆಯನ್ನು 13 ಭಾಷೆಗಳಲ್ಲಿ ಬರೆಯಲು ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಕನ್ನಡ, ಇಂಗ್ಲಿಷ್, ಹಿಂದಿ, ಅಸ್ಸಾಮಿ, ಬಂಗಾಳಿ, ಗುಜರಾತಿ, ಮಲಯಾಳಂ, ಮರಾಠಿ, ಒಡಿಯಾ, ಪಂಜಾಬಿ, ತಮಿಳು, ತೆಲುಗು ಮತ್ತು ಉರ್ದು ಭಾಷೆಗಳಲ್ಲಿ ಪರೀಕ್ಷೆ ಬರೆಯಬಹುದಾಗಿದೆ ಎಂದು ಸಿಯುಕೆ ಉಪಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಮಾಹಿತಿ ನೀಡಿದ್ದಾರೆ.
ವರದಿ: ಶ್ರೀಕಾಂತ ಬಿರಾಳ, ನ್ಯೂಸ್ 18 ಕನ್ನಡ ಡಿಜಿಟಲ್, ಕಲಬುರಗಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ