ಕಲಬುರಗಿ: ಕತ್ತರಿ ಬಳಸಿ ಕಟಿಂಗ್ (Cutting) ಮಾಡೋದು ಕಾಮನ್. ಆದ್ರೆ, ಮೇಣದ ಬತ್ತಿ (Candle) ಕಟ್ಟಿಂಗ್ ಬಗ್ಗೆ ನೀವು ಕೇಳಿದ್ದೀರಾ? ಹೌದು, ಕಲಬುರಗಿ ಜಿಲ್ಲೆಯಲ್ಲೊಬ್ಬ ಕೈಯಲ್ಲಿ ಕತ್ತರಿ ಇಲ್ಲದೇ ಮೇಣದಬತ್ತಿಯಿಂದ ಕಟ್ಟಿಂಗ್ ಮಾಡ್ತಾರೆ. ಇದು ಅಚ್ಚರಿಯ ವಿಚಾರವಾದ್ರೂ ಸತ್ಯ. ಅದೇಗೆ ಮೇಣದ ಬತ್ತಿಯಲ್ಲಿ ಕಟ್ಟಿಂಗ್ ಮಾಡ್ತಾರೆ ಅಂತೀರಾ? ಈ ಕುರಿತು ಇಲ್ಲೊಂದು ವರದಿ ಇದೆ ನೋಡಿ.
ಇಲ್ಲಿದೆ ಈ ಸೆಲೂನ್
ಹೌದು, ಹೀಗೆ, ಅಚ್ಚರಿ ಎನ್ನುವ ರೀತಿಯಲ್ಲಿ ಮೇಣದ ಬತ್ತಿಯಿಂದ ಹೇರ್ ಕಟ್ಟಿಂಗ್ ಮಾಡ್ತಿರೋ ವ್ಯಕ್ತಿಯ ಹೆಸರು ದಶರಥ ಕೋಟನೂರ್ ಅಂತ. ಕಲಬುರಗಿ ಜಿಲ್ಲೆಯ ಶಹಾಬಾದ ಪಟ್ಟಣದ ನಿವಾಸಿಯಾಗಿದ್ದು, ಶಹಾಬಾದ ಪಟ್ಟಣದ ಸ್ಟೇಷನ್ ಹತ್ತಿರ ರಾಜ್ ಮೆನ್ಸ್ ಹೇರ್ ಕಟ್ಟಿಂಗ್ ಸೆಲೂನ್ ಎನ್ನೋ ಅಂಗಡಿ ಇಟ್ಟುಕೊಂಡಿದ್ದಾರೆ.
ಕಳೆದ ಏಳೆಂಟು ವರ್ಷಗಳಿಂದ ಈ ವೃತ್ತಿಯಲ್ಲಿ ಇರೋ ಇವರು ಈಗ ಕಟ್ಟಿಂಗ್ ಗೆ ತನ್ನದೇ ಆದ ನೂತನ ಪ್ಲ್ಯಾನ್ ಕಂಡುಕೊಂಡಿದ್ದಾರೆ. ಆ ಪ್ಲ್ಯಾನ್ ಅಂದ್ರೆ, ಮೇಣದ ಬತ್ತಿ ಹೇರ್ ಕಟ್ಟಿಂಗ್.
ಕ್ಯಾಂಡಲ್ ನಲ್ಲಿ ಕಟ್ಟಿಂಗ್!
ಕತ್ತರಿ ಬಳಸದೇ ಕೇವಲ ಮೊಂಬತ್ತಿಯಿಂದ ಕೂದಲುಗಳನ್ನು ಸುಟ್ಟು ಮಸ್ತ್ ಹೇರ್ ಕಟ್ಟಿಂಗ್ ಮಾಡ್ತಿದ್ದಾರೆ ಇವರು. ಮೊಂಬತ್ತಿಯಿಂದಲೇ ಫ್ಯಾನ್ಸಿ ಕಟ್ಟಿಂಗ್ ಸೇರಿದಂತೆ ವಿವಿಧ ಟೈಪ್ ಕಟ್ಟಿಂಗ್ ಮಾಡ್ತಿದ್ದು ಇವರ ಕಟ್ಟಿಂಗ್ ಶೈಲಿಗೆ ಜನ ಮಾರುಹೋಗಿದ್ದಾರೆ.
ಕರೆಂಟ್ ಕೈಕೊಟ್ಟಾಗ ಸಿಕ್ಕ ಐಡಿಯಾ!
ದಶರಥ ಕೋಟನೂರ್, ಅವರು ಕಳೆದ ಕೆಲವು ವರ್ಷಗಳ ಹಿಂದೆ ರಾತ್ರಿ ವೇಳೆ ಕಟ್ಟಿಂಗ್ ಮಾಡ್ತಿದ್ರು. ಆಗ ವಿದ್ಯುತ್ ಕೈಕೊಟ್ಟಿತ್ತಂತೆ. ಆವಾಗ ಪಕ್ಕದಲ್ಲಿಯೇ ಇದ್ದ ಮೇಣದಬತ್ತಿ ಹೊತ್ತಿಸಿ ಅದೇ ಬೆಳಕಿನಲ್ಲಿಯೇ ಕಟ್ಟಿಂಗ್ ಮಾಡಿದ್ರು. ಅದು ಕಟ್ಟಿಂಗ್ ಮಾಡಿಸಿಕೊಳ್ಳೋನಿಗೂ ಸರಿ ಅನ್ನಿಸಿತು. ದಶರಥಗೂ ಕೂಡ ಇದೇನೋ ವಿಶೇಷ ಇದೆ ಎಂದನಿಸಿತು.
ಜನರಿಂದ ಉತ್ತಮ ರೆಸ್ಪಾನ್ಸ್
ಅಂದಿನಿಂದ ಪ್ರಾರಂಭವಾದ ಮೇಣದಬತ್ತಿ ಹೇರ್ ಕಟ್ಟಿಂಗ್ ಮುಂದುವರಿಸಿಕೊಂಡು ಹೊರಟಿದ್ದಾರೆ. ಇನ್ನು ಇದಕ್ಕೆ ಜನರಿಂದಲೂ ತುಂಬಾ ಒಳ್ಳೆ ರೆಸ್ಪಾನ್ಸ್ ಸಿಕ್ಕಿದ್ದು ದಶರಥನಂತೆ ವಿಶೇಷವಾದ ಮೇಣದಬತ್ತಿ ಕಟ್ಟಿಂಗ್ ಮಾಡೋರು ಸಿಗೋದು ಅಪರೂಪ ಎನ್ನೋ ಮೆಚ್ಚುಗೆ ಸ್ಥಳೀಯರಿಂದ ವ್ಯಕ್ತವಾಗಿದೆ. ಒಟ್ಟಾರೆಯಾಗಿ ಕತ್ತರಿಯಿಲ್ಲದೇ ಮೇಣದ ಬತ್ತಿಯಲ್ಲಿ ಹೇರ್ ಕಟ್ಟಿಂಗ್ ಮಾಡ್ತಿರೋದು ವಿಶೇಷವಾಗಿದ್ದು, ಕೇವಲ ಸ್ಥಳೀಯರಲ್ಲದೇ ಬೇರೆ ಕಡೆಗಳಿಂದಲೂ ಜನರು ಬಂದು ಮೇಣದಬತ್ತಿ ಕಟ್ಟಿಂಗ್ ಮಾಡಿಸಿಕೊಳ್ಳುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ