• Home
  • »
  • News
  • »
  • kalburgi
  • »
  • Viral News: ಮರದಲ್ಲಿ ಮೂಡಿದ ನಂದಿ, ಕಡಿಯೋಕೆ ಬಂದ JCB ಹಾಳಾಯ್ತು!

Viral News: ಮರದಲ್ಲಿ ಮೂಡಿದ ನಂದಿ, ಕಡಿಯೋಕೆ ಬಂದ JCB ಹಾಳಾಯ್ತು!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಅಷ್ಟೇ ಅಲ್ಲ ಈ ಮರವನ್ನು ಅಂದು ಕಡಿಯೋಕೆ ಬಂದಿದ್ದ ಜೆಸಿಬಿ ಕೆಟ್ಟು ಹೋಗಿತ್ತಂತೆ! ಹೀಗಾಗಿ ಗ್ರಾಮಸ್ಥರೆಲ್ಲ ಸೇರಿಕೊಂಡು ಈ ಮರವನ್ನ ಕಡಿಯುವುದು ಬೇಡ ಎಂದು ತಡೆದರಂತೆ.

  • Share this:

    ಹೈವೆಗೆ ಹೊಂದಿಕೊಂಡಂತಿರೋ ಮರ, ಮರಕ್ಕೆ ಶ್ರದ್ಧಾ ಭಕ್ತಿಯಿಂದ ನಮಿಸುತ್ತಿರೋ ಜನ. ಮರದಲ್ಲಿ ಮೂಡಿದ ಆಕೃತಿಯ ದರ್ಶನ ಮಾಡೋಕೆ ನಾ ಮುಂದು ತಾಮುಂದು ಅಮತ ಆಗಮಿಸ್ತಿರೋ ಸ್ಥಳೀಯರು. ಇದಕ್ಕೆಲ್ಲ ಕಾರಣ ಈ ಕಹಿಬೇವಿನ ಮರದಲ್ಲಿ ಮೂಡಿರೋ ಒಂದು ಆಕೃತಿ! ಹೌದು, ಕಲಬುರಗಿಯ ಕಹಿ ಬೇವಿನ ಮರವೊಂದರಲ್ಲಿ ಮೂಡಿದ ನಂದಿ ವಿಗ್ರಹದ ರೂಪ ಜನರ ಗಮನ ಸೆಳೆಯುತ್ತಿದೆ.


    ಅಲ್ಲೇ ಹಿಂದುಗಡೆ ಇರುವ ಆದಿ ಬಸವಣ್ಣ ದೇವಸ್ಥಾನಕ್ಕೆ ಇನ್ನಷ್ಟು ಮಹತ್ವ ಬರುವಂತೆ ಮಾಡಿದೆ. ಇಂತಹ ವಿಶಿಷ್ಟ ಮರವಿರುವುದು ಕಲಬುರಗಿಯಿಂದ ಜೇವರ್ಗಿಗೆ ಹೋಗುವ ನಂದಿಕೂರು ಗ್ರಾಮದ ಬಳಿ. ಆದಿ ಬಸವಣ್ಣ ದೇವಸ್ಥಾನದ ಎದುರಿಗೆ ಇರುವ ಈ ಬೇವಿನ ಮರದಲ್ಲಿ ನಂದಿ ವಿಗ್ರಹ ಉದ್ಭವವಾಗಿದೆ ಅನ್ನೋ ನಂಬಿಕೆ ಭಕ್ತ ಜನರದ್ದು.


    ಮರವನ್ನೇ ದೇವರು ಎಂದು ಕರೆಯುತ್ತಾರೆ!
    ಥೇಟ್ ನಂದಿಯ ರೀತಿಯೇ ಕಾಣುವ ಮೂರ್ತಿ ಕಾಣಿಸಿಕೊಂಡಿದ್ರಿಂದ ಈ ಮರವನ್ನು ಇಲ್ಲಿನ ಜನರು ದೇವರು ಎಂದೇ ಪೂಜಿಸ್ತಾರೆ. ಅಷ್ಟೇ ಅಲ್ಲ, ಹೆದ್ದಾರಿಯಲ್ಲಿ ಸುತ್ತಾಡುವ ಜನರೆಲ್ಲರೂ ತಮ್ಮ ವಾಹನವನ್ನು ನಿಲ್ಲಿಸಿ ಆದಿ ಬಸವಣ್ಣನಿಗೆ ಕೈಮುಗಿದು, ಜೊತೆಗೆ ಈ ನಂದಿ ಹೊಂದಿರೋ ಮರಕ್ಕೂ ಭಕ್ತಿಯಿಂದ ನಮಸ್ಕರಿಸಿಯೇ ಮುಂದೆ ಹೋಗೋದು.


    ನಂದಿ ಉದ್ಭವವಾಗಿದ್ದು ಯಾವಾಗ ಗೊತ್ತಾ?
    ಕಳೆದ 20 ವರ್ಷದ ಹಿಂದೆ ಈ ಮರದ ಕೆಳಗೆ ಸಣ್ಣದೊಂದು ಆದಿಬಸವಣ್ಣನ ದೇವಸ್ಥಾನವಿತ್ತು. ರಸ್ತೆ ನಿರ್ಮಾಣದ ವೇಳೆ ಆ ದೇವಸ್ಥಾನವನ್ನು ಸ್ವಲ್ಪ ಹಿಂದಕ್ಕೆ ಕಟ್ಟಲಾಗಿತ್ತು. ಆ ವೇಳೆ ಈ ಮರದಲ್ಲಿ ನಂದಿ ವಿಗ್ರಹ ಉದ್ಭವವಾಗಿತ್ತು ಎನ್ನುತ್ತಾರೆ ಗ್ರಾಮಸ್ಥರು.


    ಇದನ್ನೂ ಓದಿ: Best Trekking Place: ವೀಕೆಂಡ್​ ಟ್ರೆಕ್​ಗೆ ಬೆಸ್ಟ್ ಸ್ಥಳ ಈ ಚಂದ್ರಂಪಳ್ಳಿ ವನ್ಯಧಾಮ!


    ಮರ ಕಡಿಯಲು ಬಂದಿದ್ದ ಜೆಸಿಬಿ ಹಾಳಾಯ್ತಂತೆ!
    ಅಲ್ಲಿಂದ ಇಲ್ಲಿವರೆಗೂ ಈ ನಂದಿ ಬಸವಣ್ಣನ ಮಹಿಮೆಗೆ ಇಡೀ ಗ್ರಾಮವೇ ಭಕ್ತಿಯಿಂದ ಪೂಜೆ ನೆರವೇರಿಸ್ತಿದೆ.


    ಇದನ್ನೂ ಓದಿ: Kalaburagi: ಬಡಮಕ್ಕಳ ದ್ರೋಣಾಚಾರ್ಯ ಕಲಬುರಗಿಯ ಈ ಡಾನ್ಸ್ ಮಾಸ್ಟರ್!


    ಮರದಲ್ಲಿ ದೇವರು ಇರೋದು ಪವಾಡವೋ, ಪ್ರಕೃತಿಯೋ ವಿಸ್ಮಯವೋ ತಿಳಿಯದು. ಆದರೆ ಈ ಆದಿ ಬಸವಣ್ಣ ಮಹಿಮೆಗೆ ಇಡೀ ಗ್ರಾಮಸ್ಥರೇ ಬೆರಗಾಗಿದ್ದು ಪ್ರತಿ ವರ್ಷ ಜಾತ್ರೆ ಹಾಗೂ ಶ್ರಾವಣ ಮಾಸದಲ್ಲಿ ಭಜನೆ, ಕೀರ್ತನೆ ಕೂಡ ನೆರವೇರಿಸ್ತಾರೆ.. ಒಟ್ಟಿನಲ್ಲಿ ಜನರ ನಂಬಿಕೆ ಮೇಲೆ ನಿಂತಿರೋ ನಂದಿ ಜನರನ್ನ ಬೇವಿನ ಮರದಲ್ಲಿದ್ದು ಹರಸುತ್ತಿದೆ ಅನ್ನೋದರಲ್ಲಿ ತಪ್ಪಿಲ್ಲ.


    ವರದಿ: ಶ್ರೀಕಾಂತ ಬಿರಾಳ, ಕಲಬುರಗಿ

    Published by:ಗುರುಗಣೇಶ ಡಬ್ಗುಳಿ
    First published: