Budga Jangama Community: ಊರೂರು ಅಲೆದಾಡುವ ಬುಡ್ಗ ಜಂಗಮರ ಕಥೆ ಕೇಳಿ!

ಮೊಬೈಲಲ್ಲಿ ಏನ್​ ಬೇಕಾದ್ರೂ ನೋಡಬಹುದು, ಆದ್ರೆ ಬುಡ್ಗ ಜಂಗಮ ಸಮುದಾಯ ತಮ್ಮ ಪ್ರದರ್ಶನಗಳ ಮೂಲಕ ಮನ ಮುಟ್ಟುವಂತೆ ಕಥೆ ಹೇಳುತ್ತೆ! ಆದರೆ, ಈ ಸಮುದಾಯವು ಅತ್ಯಂತ ಬಡ ಹಾಗೂ ಹಿಂದುಳಿದ ಸಮುದಾಯ ಅನ್ನೋದು ಗಮನಾರ್ಹ.

ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

  • Share this:

    ಕಲಬುರಗಿ ಜಿಲ್ಲೆಯ (Kalaburagi) ಚಿತ್ತಾಪುರ ತಾಲೂಕಿನ ಬುಡ್ಗ ಜಂಗಮ ಸಮುದಾಯದ (Budaga Jangama Community) ಮಂದಿ ಗತಕಾಲದಿಂದಲು ಅಲೆಮಾರಿಗಳಾಗಿ ಹಗಲುವೇಷ ಧರಿಸಿ ಬೀದಿಯ ಮೇಲೆ ನಾಟಕ ಮಾಡಿ ರಾಮಾಯಣ (Ramayana) ಮಹಾಭಾರತ ಕಥೆಗಳನ್ನು (Mahabharata Stories) ಹೇಳುವವರು. ಬೀದಿ ನಾಟಕ, ದೊಡ್ಡಾಟ, ಪೋತರಾಜ್ ಕುಣಿತ, ಗಂಗಿಗೌರಿ ಗಾಯನ ಸೇರಿದಂತೆ ಹತ್ತು ಹಲವು ಕಲೆಗಳನ್ನು ಮೈಗೂಡಿಸಿಕೊಂಡು ಬಂದಿದ್ದಾರೆ. ರಾತ್ರಿ ವೇಳೆ ರಂಗಮಂಟಪದಲ್ಲಿ ನಾಟಕ ಪ್ರದರ್ಶನ, ಹಗಲು ಹೊತ್ತಿನಲ್ಲಿ ರಸ್ತೆ ಮೇಲೆ ವೇಷ ಧರಿಸಿ ಬೀದಿ ನಾಟಕ (Street Play) ಪ್ರದರ್ಶಿಸುವ ಮೂಲಕ ಸಮಾಜಕ್ಕೆ ಸಂದೇಶಗಳನ್ನು ಸಾರುವ ಇವರು ಪೌರಾಣಿಕ ಕಥೆಗಳನ್ನು ಹೇಳುವ ಮೂಲಕ ಇಂದಿನ ಪೀಳಿಗೆಗಳಿಗೆ ಇತಿಹಾಸದ ಪರಿಚಯವನ್ನು ಮಾಡಿಕೊಡುತ್ತಾರೆ.


    ಸಂಸ್ಕೃತಿ ಉಳಿಸುವಲ್ಲಿ ಮಹತ್ವದ ಪಾತ್ರ
    ಜಾನಪದ ಕಲೆಯನ್ನು ಇವರೆಲ್ಲರೂ ಅವ್ರ ಪೂರ್ವಜರ ಕಾಲದಿಂದಲೂ ಉಳಿಸಿ, ಬೆಳೆಸಿಕೊಂಡು ಬರುತ್ತಿದ್ದಾರೆ. ವೇಷಧರಿಸಿ ಕಲೆ ಪ್ರದರ್ಶಿಸುವ ಮೂಲಕ ಸಂಸ್ಕೃತಿ, ಪುರಾಣಗಳನ್ನ ಪ್ರಸ್ತುತಪಡಿಸುತ್ತಾರೆ. ಕೇವಲ ಹೊಟ್ಟೆಪಾಡಿಗಾಗಿ ಮಾತ್ರವಲ್ಲದೇ ಜನಪದವನ್ನು ಕಾಯ್ದುಕೊಂಡು ಬರುವ ನಿಟ್ಟಿನಲ್ಲೂ ಇವ್ರ ಈ ಕಾಯಕ ಅಮೋಘವಾದುದು.




    ಆಹಾ! ಎಷ್ಟು ಚಂದದ ವೇಷ!


    ಇದನ್ನೂ ಓದಿ: Kalaburagi Rotti Mahadevi: ರೊಟ್ಟಿ ಮಾಡೋ ಮಹಾತಾಯಿ ಕಲಬುರಗಿಯ ಮಹಾದೇವಿ! ಇವರ ಸಕ್ಸಸ್ ಕಥೆ ಕೇಳಿ

    ವಿದ್ಯಾಭ್ಯಾಸ ವಂಚಿತ ಜನಾಂಗ
    ಆದರೆ, ಈ ಸಮುದಾಯವು ಅತ್ಯಂತ ಬಡ ಹಾಗೂ ಹಿಂದುಳಿದ ಸಮುದಾಯ ಅನ್ನೋದು ಗಮನಾರ್ಹ. ಅಲೆಮಾರಿ ಸಮುದಾಯಕ್ಕೆ ಸೇರಿದ ಈ ಸಮುದಾಯಕ್ಕೆ ಅತ್ತ ಸರ್ಕಾರದಿಂದಲೂ ಯಾವುದೇ ರೀತಿಯ ನೆರವು ದೊರೆತಿಲ್ಲ. ಸರ್ಕಾರ ಒಂಚೂರು ಮನಸ್ಸು ಮಾಡಿದರೆ ನಮ್ಮ ಮಕ್ಕಳು ಕೂಡ ವಿದ್ಯಾಭ್ಯಾಸವನ್ನು ಪಡೆದು ಉನ್ನತ ಸ್ಥಾನಕ್ಕೆ ಹೋಗ್ತಾರೆ. ಅಲ್ಲದೆ, ಜಾನಪದ ಸಂಸ್ಕೃತಿಯನ್ನು ಇನ್ನಷ್ಟು ಬೆಳೆಸಲು ಸಹಕಾರವಾಗುತ್ತದೆ ಎನ್ನುತಾರೆ ಬುಡ್ಗಜಂಗಮ ಸಮುದಾಯದವರು.


    ಇದನ್ನೂ ಓದಿ: Kalaburagi Snake Prashanth: ಕಲಬುರಗಿಯ ಈ ಆಟೋ ಡ್ರೈವರ್​ಗೆ ಹಾವೆಂದರೆ ಹೂವು!

    ಮೊಬೈಲ್ ಯುಗದಲ್ಲೂ ಜಾನಪದ ಪ್ರಚಾರ
    ಏನೇ ಇರಲಿ ತಂತ್ರಜ್ಞಾನದ ಈ ಯುಗದಲ್ಲೂ ಜಾನಪದ ಸಂಸ್ಕೃತಿಯನ್ನು ಪ್ರಚುರಪಡಿಸುತ್ತಾ ಬುಡ್ಗ ಜಂಗಮ ಸಮುದಾಯ ಬಂದಿರುವುದು ವಿಶೇಷವೇ ಸರಿ. ಹಾಗೆಯೇ ಸರಕಾರ ಕೂಡ ಇಂತಹ ಸಮುದಾಯದ ಮೂಲಭೂತ ಸೌಲಭ್ಯಗಳತ್ತ ಗಮನವಹಿಸಿದ್ದಲ್ಲಿ ಈ ಸಮುದಾಯವು ಇನ್ನಷ್ಟು ಬಲಿಷ್ಠವಾಗೋದರಲ್ಲಿ ಸಂಶಯವಿಲ್ಲ..


    ವರದಿ: ಶ್ರೀಕಾಂತ ಬಿರಾಳ, ಕಲಬುರಗಿ
    Published by:guruganesh bhat
    First published: