• Home
 • »
 • News
 • »
 • kalburgi
 • »
 • Kalaburagi: ಅಂಬೇಡ್ಕರ್ ಸ್ಮರಣೆಗೆ ಸ್ಮಶಾನದಲ್ಲಿ ಧ್ಯಾನ, ಊಟ!

Kalaburagi: ಅಂಬೇಡ್ಕರ್ ಸ್ಮರಣೆಗೆ ಸ್ಮಶಾನದಲ್ಲಿ ಧ್ಯಾನ, ಊಟ!

X
ಇಲ್ಲಿ ವಿಡಿಯೋ ನೋಡಿ

"ಇಲ್ಲಿ ವಿಡಿಯೋ ನೋಡಿ"

ಅಂಬೇಡ್ಕರ್ ಭಾವಚಿತ್ರ ಹೊತ್ತು ಮೆರವಣಿಗೆ ಮೂಲಕ ಸಾಗಿ ಬಂದ ಯುವಕರು ಚಾಮರಾಜನಗರದ ಬುದ್ದರತ್ನ ಭಂತೆ ಅವರ ನೇತೃತ್ವದಲ್ಲಿ ಧ್ಯಾನ, ಪ್ರಾರ್ಥನೆ ಸಲ್ಲಿಸಿ ಆಹಾರ ಸವಿದರು.

 • News18 Kannada
 • Last Updated :
 • Gulbarga, India
 • Share this:

  ಅಂಬೇಡ್ಕರ್ ಫೋಟೋ, ಮೇಣದ ದೀಪ ಹಿಡಿದು ಹೊರಟಿರೋ ಮೆರವಣಿಗೆ. ಬುದ್ಧಂ ಶರಣಂ ಗಚ್ಛಾಮಿ ಅನ್ನೋ ಘೋಷಣೆ. ಬೌದ್ಧ ಭಿಕ್ಕುಗಳಂತೆ ಕಾಣುವ ಈ ಯುವಕರು ಹೀಗೆ ನಡೆದುಹೋಗ್ತಿರೋದು ಸ್ಮಶಾನ ಭೂಮಿಗೆ. ಅಲ್ಲೇ ಮಂತ್ರ, ಧ್ಯಾನ, ಆಹಾರ ಸೇವನೆ. ಅಂಬೇಡ್ಕರ್ ಅವರಂತೆ ಮೌಢ್ಯದ ವಿರುದ್ಧ ಕ್ರಾಂತಿಕಾರಿ ಬದಲಾವಣೆಗೆ ನಾಂದಿ ಹಾಡಿದರು.


  ಕಲಬುರಗಿಯ ವಾಡಿ ಪಟ್ಟಣದಲ್ಲಿ ಇಂತಹ ಕ್ರಾಂತಿಕಾರಿ ಕಾರ್ಯಕ್ರಮವೊಂದು ನಡೆಯಿತು. ಮೌಢ್ಯದ ವಿರುದ್ಧ ಜಾಗೃತಿ ಮೂಡಿಸುವ ಸಲುವಾಗಿ ಅಂತರಾಷ್ಟ್ರೀಯ ಬೌದ್ಧ ಯುವ ಸಂಘಟನೆಯ ವತಿಯಿಂದ ಸ್ಮಶಾನ ಭೂಮಿಯಲ್ಲೇ ವಿನೂತನ ಕಾರ್ಯಕ್ರಮವನ್ನು ಸಂಘಟಿಸಲಾಗಿತ್ತು.


  ಬುದ್ದರತ್ನ ಭಂತೆ ಅವರ ನೇತೃತ್ವದಲ್ಲಿ ಧ್ಯಾನ, ಪ್ರಾರ್ಥನೆ
  ಅಂಬೇಡ್ಕರ್ ಭಾವಚಿತ್ರ ಹೊತ್ತು ಮೆರವಣಿಗೆ ಮೂಲಕ ಸಾಗಿ ಬಂದ ಯುವಕರು ಚಾಮರಾಜನಗರದ ಬುದ್ದರತ್ನ ಭಂತೆ ಅವರ ನೇತೃತ್ವದಲ್ಲಿ ಧ್ಯಾನ, ಪ್ರಾರ್ಥನೆ ಸಲ್ಲಿಸಿ ಆಹಾರ ಸವಿದರು. ಸ್ಮಶಾನವು ಎಲ್ಲ ತಾಣಗಳಂತೆ ಅನ್ನೋ ಸಂದೇಶ ನೀಡಿದರು.


  ಇದನ್ನೂ ಓದಿ: Success Story: ಕೆಲಸ ಸಿಕ್ಕರೂ ಕೃಷಿ! ಲಕ್ಷ ಲಕ್ಷ ಆದಾಯ ಗಳಿಸಿದ ಪಾರ್ಟ್​ ಟೈಮ್ ರೈತ


  ಹತ್ತು ದಿನಗಳ ಕಾಲ ವಿವಿಧ ಕಾರ್ಯಕ್ರಮ
  ಅಂಬೇಡ್ಕರ್ ಅವರ ಪರಿನಿರ್ವಾಣ ದಿನದ ಅಂಗವಾಗಿ ಹತ್ತು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ. ಜೊತೆಗೆ ಹತ್ತು ಯುವಕರು ಬೌದ್ಧ ಭಿಕ್ಕುಗಳ ವೇಷಧರಿಸಿ ಹತ್ತಾರು ಹಳ್ಳಿಗಳಿಗೆ ಸುತ್ತಿ ಬೌದ್ಧ ಧರ್ಮದ ಸಂದೇಶವನ್ನು ಸಾರಿದರು. ಕೊನೆ ದಿನ ವಾಡಿ ಪಟ್ಟಣದ ಸ್ಮಶಾನ ಭೂಮಿಯಲ್ಲಿ ಮಧ್ಯರಾತ್ರಿಯಲ್ಲಿ ಧ್ಯಾನ ಮಾಡುವ ಮೂಲಕ ಮೂಢನಂಬಿಕೆ ವಿರೋಧಿ ಕಾರ್ಯಕ್ರಮವೂ ನಡೆಯಿತು.


  ಇದನ್ನೂ ಓದಿ: Kalaburagi: ಮಲ್ಲಗಂಬ ಏರಿದ ಅಂಧ ಮಕ್ಕಳು! ಶಾಲೆ ಕಟ್ಟೋದೇ ಇವರ ಉದ್ದೇಶವಂತೆ


  ಹೀಗೆ ಮಹಾನಾಯಕನ ಪರಿನಿರ್ವಾಣವನ್ನು ಮೌಢ್ಯದ ವಿರುದ್ಧದ ಜಾಗೃತಿಗಾಗಿ ಯುವಕರು ಬಳಸಿಕೊಂಡರು. ವಿಭಿನ್ನ ಕಾರ್ಯಕ್ರಮದ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದರು.


  ವರದಿ: ಶ್ರೀಕಾಂತ್ ಬಿರಾಳ, ಕಲಬುರಗಿ

  Published by:ಗುರುಗಣೇಶ ಡಬ್ಗುಳಿ
  First published: