• Home
  • »
  • News
  • »
  • kalburgi
  • »
  • Kalaburagi: ಮಲ್ಲಗಂಬ ಏರಿದ ಅಂಧ ಮಕ್ಕಳು! ಶಾಲೆ ಕಟ್ಟೋದೇ ಇವರ ಉದ್ದೇಶವಂತೆ

Kalaburagi: ಮಲ್ಲಗಂಬ ಏರಿದ ಅಂಧ ಮಕ್ಕಳು! ಶಾಲೆ ಕಟ್ಟೋದೇ ಇವರ ಉದ್ದೇಶವಂತೆ

X
ಮಲ್ಲಗಂಭ ಏರಿದ ಅಂಧ ಮಕ್ಕಳು

"ಮಲ್ಲಗಂಭ ಏರಿದ ಅಂಧ ಮಕ್ಕಳು"

ಯೋಗ, ಸಂಗೀತ ಹಾಗೂ ಮಲ್ಲಗಂಬ ಸಾಹಸ ಪ್ರದರ್ಶಿಸಿ ಶಾಲೆ ಕಟ್ಟಡ ನಿರ್ಮಿಸಲು ಆರ್ಥಿಕ ಸಹಾಯ ನೀಡುವಂತೆ ಮನವಿ ಮಾಡುತ್ತಿದ್ದಾರೆ ಈ ಅಂಧ ವಿದ್ಯಾರ್ಥಿಗಳು.

  • Share this:

    ಸರಸರನೇ ಏರೋದೇನು, ಪಟಪಟನೇ ಹತ್ತೋದೇನು! ನೋಡೋಕೆ ಚೋಟುದ್ದ ಕಂಡ್ರೂ ಮಲ್ಲಗಂಬ ಏರೋ ಈ ಮಕ್ಕಳ ಸಾಹಸ ನೋಡ್ತಿದ್ರೆ ಎಂಥವ್ರೂ ಬೆರಗಾಗ್ತಾರೆ! ಅದ್ರಲ್ಲೂ ಇವರು ದೃಷ್ಟಿದೋಷ ಹೊಂದಿರೋ ಮಕ್ಕಳು (Blind Children)ಅಂತ ಗೊತ್ತಾದ್ರೆ ನೀವು ಮೂಗಿನ ಮೇಲೆ ಬೆರಳಿಡೋದಂತೂ ಸತ್ಯ! ಕೈ-ಕಾಲು, ದೃಷ್ಟಿ ಎಲ್ಲವೂ ಚೆನ್ನಾಗಿದ್ರೇನೇ ಮಲ್ಲಗಂಬ ಏರೋದು ಕಷ್ಟ. ಅಂಥದ್ರಲ್ಲಿ ಕಲಬುರಗಿಯಲ್ಲಿ (Kalaburagi News) ಈ ಅಂಧ ಬಾಲಕರು ಕಣ್ಣಿದ್ದವರೂ ನಾಚುವಂತೆ ಮಲ್ಲಗಂಬ (Mallagamba)  ಸಾಹಸ ಪ್ರದರ್ಶಿಸಿದರು.


    ಒಬ್ಬರಿಗೊಬ್ಬರು ನೆರವಾಗಿ, ಹಗ್ಗದ ಸಹಾಯದಿಂದ ಮೇಲೇರಿ ತೊಡರುಗಾಲು ಹಾಕಿ ತಮ್ಮ ಗುರುಗಳ ಮಾತು ಆಲಿಸ್ತಾ ಮಲ್ಲಗಂಬ ಏರಿದರು. ಅಂದಹಾಗೆ ಇವ್ರೆಲ್ರೂ ಗದಗ ಜಿಲ್ಲೆಯ ರೋಣ ತಾಲೂಕಿನ ಹೊಳೆಆಲೂರಿನ ಜ್ಞಾನಸಿಂಧು ಅಂಧ ಮಕ್ಕಳ ಪ್ರಾಥಮಿಕ ವಸತಿ ಶಾಲೆಯ ವಿದ್ಯಾರ್ಥಿಗಳು. ಕಲಬುರಗಿ ನಗರದ ವಿವೇಕಾನಂದ ಶಾಲೆಯಲ್ಲಿ ಸಾಹಸ ಪ್ರದರ್ಶಿಸುವ ಮೂಲಕ ನೆರೆದವರಿಂದ ಭೇಷ್ ಎನಿಸಿಕೊಂಡರು.


    ಇದನ್ನೂ ಓದಿ: Anti Rape Footwear: ಅತ್ಯಾಚಾರ ತಡೆಯುತ್ತೆ ಈ ಚಪ್ಪಲಿ! ಕಲಬುರಗಿ ವಿದ್ಯಾರ್ಥಿನಿಯಿಂದ ಸಂಶೋಧನೆ


    ಈ ವಿಶೇಷ ಕಾರಣಕ್ಕೆ ಏನು ಕಾರಣ?
    ಅಷ್ಟಕ್ಕೂ ಈ ಅಂಧ ಮಕ್ಕಳು ಮಲ್ಲಗಂಬ ಪ್ರದರ್ಶಿಸುತ್ತಿರೋ ಕಾರಣ ಕೇಳಿದ್ರೆ ಕಣ್ಣುತುಂಬಿ ಬರುತ್ತೆ, ತಮ್ಮ ಶಾಲೆಯ ಹೊಸ ಕಟ್ಟಡಕ್ಕೆ ಆರ್ಥಿಕ ಸಹಾಯ ಕೋರಿ ಶಿಕ್ಷಕ ಶಿವಾನಂದ ಕೆಲ್ಲೂರ್ ಅವರ ನೇತೃತ್ವದಲ್ಲಿ ರಾಜ್ಯದ ಹಲವು ಶಾಲೆಗಳಿಗೆ ತಿರುಗಾಡ್ತಿದ್ದಾರೆ ಈ ಮಕ್ಕಳು. ಯೋಗ, ಸಂಗೀತ ಹಾಗೂ ಮಲ್ಲಗಂಬ ಸಾಹಸ ಪ್ರದರ್ಶಿಸಿ ಶಾಲೆ ಕಟ್ಟಡ ನಿರ್ಮಿಸಲು ಆರ್ಥಿಕ ಸಹಾಯ ನೀಡುವಂತೆ ಮನವಿ ಮಾಡುತ್ತಿದ್ದಾರೆ.


    ಇದನ್ನೂ ಓದಿ: Special Talent: ಕಲಬುರಗಿಯ ಈ ಪೋರನಿಗೆ ಇಂಗ್ಲೀಷ್​ ಸುಲಿದ ಬಾಳೆಹಣ್ಣಿನಷ್ಟೇ ಸಲೀಸು!


    ಆರ್ಥಿಕ ಸಹಾಯಕ್ಕೆ ಕೋರಿಕೆ
    ಮಲ್ಲಗಂಬ ಏರೋದು ಎಲ್ಲಾ ಸರಿ ಇದ್ದೋರಿಗೂ ಸುಲಭವಲ್ಲ, ಅಂಥದ್ರಲ್ಲಿ ಈ ಅಂಧ ಮಕ್ಕಳು ಯಾವುದೇ ಭಯ ಹಿಂಜರಿಕೆ ಇಲ್ಲದೇ ಮಲ್ಲಗಂಬ ಸಾಹಸ ಮಾಡಿದ್ದು ನೋಡುಗರ ಮನ ಕಲಕಿತು. ಹಲವು ದಾನಿಗಳು ಆರ್ಥಿಕ ಸಹಾಯಕ್ಕೂ ಮುಂದಾದ್ರು. ಸರ್ಕಾರವೂ ಈ ಮಕ್ಕಳ ನೆರವಿಗೆ ಬಂದಲ್ಲಿ ಇವರ ಜೀವನದಲ್ಲಿ ನಗು ಮೂಡಬಹುದು ಅನ್ನೋದೇ ನಮ್ಮ ಆಶಯ.


    ವರದಿ: ಶ್ರೀಕಾಂತ ಬಿರಾಳ, ಕಲಬುರಗಿ

    Published by:ಗುರುಗಣೇಶ ಡಬ್ಗುಳಿ
    First published: