ಕಲಬುರಗಿ: ಜಾತ್ರೆ ತುಂಬೆಲ್ಲ ಚೂಡಾದ್ದೇ ಸದ್ದು. ರುಚಿ ರುಚಿಯಾದ ಮಂಡಕ್ಕಿ ಚೂಡಾ (Bijapur Chivda ) ತಿನ್ನೋದೆ ಒಂದು ರೀತಿಯ ಗಮ್ಮತ್ತು. ಬಿಜಾಪುರದ ಚೂಡಾ ಬಿಸಿಲನಾಡಿನಲ್ಲಿ (Kalaburagi News) ಪಡೆಯಿತು ಸಖತ್ ಡಿಮ್ಯಾಂಡ್. ಅಷ್ಟಕ್ಕೂ ಈ ಚೂಡಾ ಸಿಗೋದು ಬರೇ ಹದಿನೈದು ದಿನಗಳು ಮಾತ್ರ. ಅದ್ಯಾಕೆ ಅಂತೀರ? ಹೇಳ್ತೀವಿ ನೋಡಿ.
ಚೂಡಾ ಟೇಸ್ಟಿ
ಕಲಬುರಗಿಯ ಆರಾಧ್ಯದೈವ ಶ್ರೀ ಶರಣಬಸವೇಶ್ವರ ಜಾತ್ರಾ ಮಹೋತ್ಸವಕ್ಕೆ ಬಂದವರೆಲ್ಲರೂ ಈ ಬಿಜಾಪುರ ಚೂಡಾ ಟೇಸ್ಟ್ ಸವಿಯದೇ ಹೋಗಲಾರರು. ಅಷ್ಟೇ ಅಲ್ದೇ, ಪ್ಯಾಕೆಟ್ಗಳಲ್ಲಿ ಚೂಡಾಗಳನ್ನ ಮನೆಗೂ ಕೊಂಡೊಯ್ಯುತ್ತಾರೆ. ಈ ಖಾರ ಮಿಶ್ರಿತ ಚೂಡಾ ಜಾತ್ರಾ ಮೈದಾನದಲ್ಲಿ ಸ್ಥಾಪಿಸಲಾದ ಮಳಿಗೆಯಲ್ಲಿ ಸಿಗುತ್ತವೆ.
ಜಾತ್ರೆ ಸಮಯದ ಚೂಡಾ
ಬಿಜಾಪುರ ಚೂಡಾ ಅಂದರೇ ಹಾಗೆ, ಹಾಗೆ ಪ್ರತಿವರ್ಷ ಜಾತ್ರೆಯಲ್ಲಿ ಸಖತ್ ಸದ್ದು ಮಾಡುತ್ತವೆ. ಜಾತ್ರೆಗೆ ಆಗಮಿಸುವ ಬಹುತೇಕರು ಬಿಜಾಪುರದ ಚೂಡಾ ಅಂಗಡಿಗೆ ಭೇಟಿ ನೀಡದೆ ಹಿಂತಿರುಗುವುದಿಲ್ಲ. ಏಕೆಂದರೆ ಇದು ಕಲಬುರಗಿಯಲ್ಲಿ ಪ್ರತಿ ದಿನ ಸಿಗೋದಿಲ್ಲ, ಕೇವಲ ಅಪ್ಪನ ಜಾತ್ರೆಯಲ್ಲಷ್ಟೇ ಸಿಗುತ್ತೆ.
ಇದನ್ನೂ ಓದಿ: Kalaburagi: ಎದುರು ಮನೆಯಲ್ಲಿ ಗಂಡು ಮಗು ಹುಟ್ಟಿದ್ರೆ ಈ ಮನೆಲಿ ಇಡೀ ತಿಂಗಳು ಹಬ್ಬ!
ಹೀಗಿರುತ್ತೆ ಚೂಡಾ ಟೇಸ್ಟಿ
ಮಂಡಕ್ಕಿ, ಖಾರದ ಪುಡಿ, ಶೇಂಗಾ, ಪುಟಾಣಿ, ಮಸಾಲೆ, ಅಡುಗೆ ಎಣ್ಣೆ, ಕರಿಬೇವಿನಿಂದ ಚೂಡಾವನ್ನು ತಯಾರಿಸಲಾಗುತ್ತೆ. ಪ್ರತಿ ನಿತ್ಯವು ಫ್ರೆಶ್ ಜೊತೆಗೆ ರುಚಿ ರುಚಿಯಾದ ಚೂಡಾವನ್ನು ತಯಾರಿಸಲಾಗುತ್ತೆ. ಕಳೆದ 25 ವರ್ಷದಿಂದಲೂ ಶರಣಬಸವೇಶ್ವರ ಜಾತ್ರೆಗೆ ಈ ಚೂಡಾ ಅಂಗಡಿಗಳು ಬರುವುದು ಕಾಮನ್.
ಇದನ್ನೂ ಓದಿ: Cooker Dhaba: ಈ ಡಾಬಾದಲ್ಲಿ ಎಲ್ಲಾ ಕುಕ್ಕರ್ನಲ್ಲೇ ರೆಡಿಯಾಗುತ್ತೆ! 10 ನಿಮಿಷ ಕಾದರೆ ಸಾಕು ಊಟ ರೆಡಿ!
ಭರ್ಜರಿ ವ್ಯಾಪಾರ
250 ಗ್ರಾಮ್ ತೂಕದ ಚೂಡಾದ ಬೆಲೆ 100 ರೂಪಾಯಿ. ಹದಿನೈದು ದಿನಗಳ ಕಾಲ ಭರ್ಜರಿ ವ್ಯಾಪಾರ ಗಿಟ್ಟಿಸಿಕೊಳ್ಳುವ ಈ ಚೂಡಾದಿಂದಾಗಿ, ಪ್ರತಿನಿತ್ಯ ಏಳರಿಂದ ಎಂಟು ಚೀಲ ಮಂಡಕ್ಕಿ ಖಾಲಿಯಾಗುತ್ತವೆ ಎನ್ನುತಾರೆ ವ್ಯಾಪಾರಿಗಳು. ಅದೇನೆ ಇರಲಿ, ಕಲಬುರಗಿ ಶ್ರೀ ಶರಣಬಸವೇಶ್ವರ ಜಾತ್ರೆ ಪ್ರತಿಯೊಂದು ವಿಚಾರದಲ್ಲಿ ವಿಶೇಷತೆಯಿಂದ ಕೂಡಿದ್ದು, ಜಾತ್ರಾ ಮೈದಾನದಲ್ಲಿ ಸ್ಥಾಪನೆ ಮಾಡಲಾದ ಚೂಡಾದ ಅಂಗಡಿಗಳು ದೇವಸ್ಥಾನಕ್ಕೆ ಆಗಮಿಸುವ ಭಕ್ತರನ್ನು ಕೈಬೀಸಿ ಕರೆಯುತ್ತವೆ.
ವರದಿ: ಶ್ರೀಕಾಂತ ಬಿರಾಳ, ನ್ಯೂಸ್ 18 ಕನ್ನಡ ಡಿಜಿಟಲ್, ಕಲಬುರಗಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ