ಕಲಬುರಗಿ: ಕೃಷಿ ಇಲಾಖೆಯಿಂದ 2022-23ನೇ ಸಾಲಿನ ಆತ್ಮ ಯೋಜನೆಯಡಿಯಲ್ಲಿ ಪ್ರಗತಿಪರ ರೈತರ (Farmer's) ಮತ್ತು ರೈತ ಗುಂಪುಗಳ ಸಾಧನೆಗಳನ್ನು ಗುರುತಿಸಲು ಅರ್ಜಿ (Best Farmer) ಆಹ್ವಾನಿಸಲಾಗಿದೆ. ಕಲಬುರಗಿ ಜಿಲ್ಲಾ (Kalaburagi News) ಮಟ್ಟದಲ್ಲಿ ಶ್ರೇಷ್ಠ ಗುಂಪು ಪ್ರಶಸ್ತಿ, ಶ್ರೇಷ್ಠ ಕೃಷಿಕ ಪ್ರಶಸ್ತಿ ಹಾಗೂ ತಾಲೂಕು ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿಗಳಿಗೆ ನಾಮನಿರ್ದೇಶನ ಆಹ್ವಾನಿಸಲಾಗಿದೆ.
ಕೃಷಿ ವಲಯದಲ್ಲಿ ತಮ್ಮದೇ ಆದ ಅಮೂಲ್ಯ ಅನ್ವೇಷಣೆ ಅಥವಾ ವಿಶಿಷ್ಟ ಸಾಧನೆಗೈದವರನ್ನು ಮತ್ತು ರೈತ ಗುಂಪುಗಳಿಗೆ ನಗದು ಬಹುಮಾನದೊಂದಿಗೆ ಪ್ರಶಸ್ತಿ ನೀಡಲಾಗುತ್ತಿದೆ. ಕೃಷಿ ಮಹಿಳೆಯರಿಗೆ ಆದ್ಯತೆ ನೀಡಲಾಗುವುದು ಎಂದು ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ತಿಳಿಸಿದ್ದಾರೆ.
ಗಮನಿಸಿ, ಈ ನಿಯಮಗಳಿವೆ
ಶ್ರೇಷ್ಠ ಗುಂಪು ಪ್ರಶಸ್ತಿಗೆ ನಾಮನಿರ್ದೇಶನ ಸಲ್ಲಿಸಬಯಸುವ ರೈತ ಗುಂಪುಗಳು ಕಳೆದ 3 ವರ್ಷಗಳಿಂದ ನಿರಂತರವಾಗಿ ರೈತರ ಉನ್ನತಿಗಾಗಿ ಕೆಲಸ ಮಾಡುತ್ತಿರಬೇಕು. ಈ ಅವಧಿಯಲ್ಲಿ ಕೃಷಿ ಇಲ್ಲವೇ ಕೃಷಿ ಸಂಬಂಧಿತ ಇಲಾಖೆಗಳಿಂದ ಸಂಯೋಜಿತವಾಗಿ ಅವುಗಳ ಸವಲತ್ತುಗಳನ್ನು ಪಡೆದುಕೊಂಡಿರಬೇಕು. ಯಾವುದೇ ರೀತಿಯ ರಾಜ್ಯ ಮಟ್ಟದ ಇಲ್ಲವೇ ಜಿಲ್ಲಾ ಮಟ್ಟದ ಪ್ರಶಸ್ತಿಗಳನ್ನು ಸ್ವೀಕರಿಸಿರಬಾರದು ಎಂದು ಸೂಚಿಸಲಾಗಿದೆ.
ರಾಜ್ಯ-ಕೇಂದ್ರ ಸರ್ಕಾರದ ವಿವಿಧ ಇಲಾಖೆ ಮತ್ತು ಸಂಘ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿದ ಮತ್ತು ನಿರ್ವಹಿಸುತ್ತಿರುವ ಅಭ್ಯರ್ಥಿಗಳನ್ನು ಪ್ರಶಸ್ತಿಗೆ ಪರಿಗಣಿಸಲಾಗುವುದಿಲ್ಲ ಎಂದಿರುವ ಜಂಟಿ ಕೃಷಿ ನಿರ್ದೇಶಕರು, ಪ್ರಶಸ್ತಿಗೆ ಆಯ್ಕೆ ಮಾಡುವಲ್ಲಿ ಜಿಲ್ಲಾ ಹಾಗೂ ತಾಲೂಕು ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ ಆಯ್ಕೆ ಸಮಿತಿಯ ನಿರ್ಣಯವೇ ಅಂತಿಮವಾಗಿರುತ್ತದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Kalaburagi: ಇದು ಹಿಂದೂ-ಮುಸ್ಲಿಂ ಧರ್ಮೀಯರನ್ನು ಒಗ್ಗೂಡಿಸೋ ಕಲಬುರಗಿಯ ಭಾವೈಕ್ಯತೆಯ ತಾಣ!
ರೈತ ಅಥವಾ ರೈತ ಮಹಿಳೆ ಹಾಗೂ ರೈತ ಗುಂಪುಗಳು ನಿಗದಿತ ನಾಮ ನಿರ್ದೇಶನಗಳ ಅರ್ಜಿ ನಮೂನೆಯನ್ನು ಆಯಾ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರುಗಳ ಕಛೇರಿಯಿಂದ ಪಡೆದು ಭರ್ತಿ ಮಾಡಬಹುದಾಗಿದೆ. ಅದರೊಂದಿಗೆ ಪಹಣಿ ಸೇರಿದಂತೆ ಅಗತ್ಯ ದಾಖಲೆಗಳು ಲಗತ್ತಿಸಿ ಇದೇ ಕಚೇರಿಗಳ ಸಹಾಯಕ ನಿರ್ದೇಶಕರು ಅಥವಾ ತಾಲೂಕು ತಾಂತ್ರಿಕ ಅಧಿಕಾರಿಗಳಿಗೆ ಡಿಸೆಂಬರ್ 31 ರೊಳಗಾಗಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಆಯಾ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿ, ತಾಲೂಕು ತಾಂತ್ರಿಕ ವ್ಯವಸ್ಥಾಪಕರುಗಳನ್ನು ಸಂಪರ್ಕಿಸಬಹುದಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ