ಕಲಬುರಗಿ: ಮರದ ಪೆಟ್ಟಿಗೆಗೆ ಆರತಿ ಎತ್ತಿ ಪೂಜೆ ಮಾಡುತ್ತಿರೋ ವ್ಯಕ್ತಿ. ಭಕ್ತಿಯಿಂದ ಕೈ ಮುಗಿದು ನಮಸ್ಕರಿಸುತ್ತಿರೋ ಭಕ್ತರು. ಅಂದಹಾಗೆ ಈ ಪೆಟ್ಟಿಗೆಯಲ್ಲಿ ಅಂತಹ ಯಾವ ದೇವರಿದ್ದಾರೆ ಅಂತೀರ? ಹೇಳಿಕೊಳ್ಳುವಂತಹ ದೇವರಿಲ್ಲದೇ (Basavanna Paduka) ಹೋದ್ರೂ ಈ ಪೆಟ್ಟಿಗೆ ಬಹಳಷ್ಟು ಮಹತ್ವ ಪಡೆದಿದೆ. ಏನಕ್ಕೆ ಅಂತೀರ? ಈ ಸ್ಟೋರಿ ನೋಡಿ.
ಯೆಸ್, ಇಲ್ಲಿ ನೀವ್ ನೋಡ್ತಿರೋ ಈ ಮರದ ಪೆಟ್ಟಿಗೆಯಲ್ಲಿ ಇರೋದು ಜಗಜ್ಯೋತಿ ಬಸವಣ್ಣರ ಪಾದುಕೆಗಳು. ಹಾಗಂತ ಈ ಪಾದುಕೆಗಳೇನು ಕಡಿಮೆಯದ್ದಲ್ಲ. ಹರಳಯ್ಯ ದಂಪತಿಗಳು ತಮ್ಮ ತೊಡೆ ಚರ್ಮ ತೆಗೆದು ಬಸವಣ್ಣನವರಿಗೆ ಮಾಡಿಕೊಟ್ಟ ಪಾದುಕೆಗಳಾಗಿದ್ದವು.
ಪಾದುಕೆ ಇದೆ, ಅಭಿವೃದ್ಧಿ ಆಗಿಲ್ಲ!
ಇಂದಿಗೂ ಈ ಪಾದುಕೆಗಳು ಪೂಜನೀಯ ಸ್ಥಾನ ಪಡೆದಿದೆ. ಜನ ಇಂದಿಗೂ ಬಸವಣ್ಣನ ಜೊತೆ ಹರಳಯ್ಯ ದಂಪತಿಗಳನ್ನು ಈ ಪಾದುಕೆ ಮೂಲಕ ಕಾಣುತ್ತಿದ್ದಾರೆ. ಶತಮಾನಗಳಿಂದಲೂ ಈ ಪಾದುಕೆಗಳು ಇಲ್ಲಿಯೇ ಇದ್ದು, ಆದ್ರೆ ಹೇಳಿಕೊಳ್ಳುವಂತಹ ಅಭಿವೃದ್ಧಿ ಆಗಿಲ್ಲ ಅನ್ನೋದು ಕೂಡಾ ಅಷ್ಟೇ ಸತ್ಯ.
ಪಾದುಕೆಗೆ ನಿತ್ಯ ಪೂಜೆ
ಕಲ್ಯಾಣ ಕ್ರಾಂತಿಗೆ ಶ್ರಮಿಸುತ್ತಿರುವ ಪರಿಯನ್ನು ಕಂಡ ಶರಣ ಹರಳಯ್ಯ ದಂಪತಿಗಳು ತಮ್ಮ ತೊಡೆಯ ಚರ್ಮವನ್ನೇ ತೆಗೆದು ಅಣ್ಣ ಬಸವಣ್ಣನವರಿಗೆ ಪಾದುಕೆ ಮಾಡಿಕೊಟ್ಟಿದ್ರು. ಆ ಪಾದುಕೆ ಬಸವಣ್ಣನವರು ತೊಡದೇ ತಮ್ಮ ತಲೆಯ ಮೇಲೆ ಇಟ್ಟುಕೊಂಡು ಓಡಾಡಿದ್ರು ಅನ್ನೋ ಐತಿಹ್ಯವಿದೆ. ಅಂತಹ ಪಾದುಕೆಗೆ ಈಗಲೂ ಭಕ್ತರು ಪ್ರತಿನಿತ್ಯ ಪೂಜೆ ಮಾಡುತ್ತಿದ್ದಾರೆ.
ಶರಣರು ನೀಡಿದ್ದ ಪಾದುಕೆ
ಇನ್ನೂ ಬೀಜನಳ್ಳಿ ಗ್ರಾಮಕ್ಕೆ ಆ ಪಾದುಕೆ ಬಂದಿರೋ ಹಿಂದೆ ಒಂದು ಕತೆಯೇ ಇದೆ. ಅದೇನೆಂದ್ರೆ, ಬೀಜನಳ್ಳಿ ಗ್ರಾಮದ ಶರಣ ಸಿದ್ದಯ್ಯಪ್ಪಜ್ಜ ಅನ್ನೋರು ಕಲ್ಯಾಣದ ಶರಣರ ಜೊತೆ ಸಂಪರ್ಕ ಹೊಂದಿದ್ದರಂತೆ. ಹಾಗಾಗಿ ಕಲ್ಯಾಣಕ್ಕೆ ಹೋಗಿ ಬರುತ್ತಿದ್ದರಂತೆ. ಜಾತಿವ್ಯಸ್ಥೆ ವಿರುದ್ದ ಒಂದು ದಿನ ಕಲ್ಯಾಣದಲ್ಲಿ ಕ್ರಾಂತಿ ಶುರುವಾಯಿತಂತೆ.
ಇದನ್ನೂ ಓದಿ: Kalaburagi Students: ಬಾಲಕಿಯರೇ, ಸರ್ಕಾರಿ ವಸತಿ ಕಾಲೇಜಿಗಾಗಿ ಕೂಡಲೇ ಅರ್ಜಿ ಸಲ್ಲಿಸಿ
ಆಗ ಸಿದ್ದಯ್ಯಜ್ಜರಿಗೆ ಯಾರೋ ಒಬ್ರು ಶರಣರು ಇದು ಅಂತಿಂತಹ ಪಾದುಕೆಯಲ್ಲ; ಶರಣ ಹರಳಯ್ಯ ದಂಪತಿಗಳು ತಮ್ಮ ತೊಡೆ ಚರ್ಮದಿಂದ ಬಸವಣ್ಣನವರಿಗಾಗಿ ಮಾಡಿರುವ ಪಾದುಕೆ; ಇದನ್ನು ಸಂರಕ್ಷಣೆ ಮಾಡಿ ಎಂದು ಹೇಳಿ ಅವರ ಕೈಯಲ್ಲಿ ಪಾದುಕೆಗಳನ್ನು ಕೊಟ್ಟಿದ್ದರಂತೆ.
ಅಭಿವೃದ್ಧಿಗೆ ಮನವಿ
ಅಲ್ಲಿಂದ ಪಾದುಕೆಗಳನ್ನು ತೆಗೆದುಕೊಂಡ ಅವರು ಬೀಜನಳ್ಳಿ ಗ್ರಾಮಕ್ಕೆ ತಂದಿದ್ದಾರೆ. ಹೀಗಾಗಿ, ಇಲ್ಲಿ ಪಾದುಕೆಗಳು ಉಳಿದಿವೆ ಅನ್ನೋದು ಸ್ಥಳೀಯರು ಹೇಳಿಕೆ. ಒಟ್ಟಿನಲ್ಲಿ ನಾಡಿನಲ್ಲಿ ಕ್ರಾಂತಿ ಮೂಲಕ ಮನೆಮಾತಾಗಿದ್ದ ವಚನಕಾರ ಬಸವಣ್ಣನವರ ಪಾದುಕೆ ಇಂದಿಗೂ ಶ್ರೇಷ್ಠತಾ ಭಾವದೊಂದಿಗೆ ಪೂಜಿಸಲ್ಪಡುತ್ತಿದೆ.
ಇದನ್ನೂ ಓದಿ: Summer Special: ಬಿಸಿಲ ಝಳವನ್ನು ತಂಪುಗೊಳಿಸುವ ಮಣ್ಣಿನ ಮಡಿಕೆಗೆ ಭಾರೀ ಡಿಮ್ಯಾಂಡ್!
ಆದ್ರೆ ಸೂಕ್ತ ರೀತಿಯಲ್ಲಿ ಈ ಕ್ಷೇತ್ರವನ್ನು ಅಭಿವೃದ್ಧಿ ಮಾಡ್ದೇ ಇರುವ ಬಗ್ಗೆ ಇಂದಿಗೂ ಶರಣರ ಭಕ್ತರಲ್ಲಿ ಬೇಸರವಿದ್ದು, ಕ್ಷೇತ್ರವನ್ನು ಅಭಿವೃದ್ಧಿಗೊಳಿಸುವಂತೆ ಸರಕಾರದ ಮುಂದೆ ಮನವಿ ಮಾಡುತ್ತಲೇ ಬಂದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ