• Home
  • »
  • News
  • »
  • kalburgi
  • »
  • Kalaburagi: ಇದು ಮೇರಾ ದೀಪಾವಳಿ! ಬಂಜಾರ ಸಮುದಾಯದಿಂದ ಕಲಬುರಗಿಯಲ್ಲಿ ವಿಶಿಷ್ಟ ಆಚರಣೆ

Kalaburagi: ಇದು ಮೇರಾ ದೀಪಾವಳಿ! ಬಂಜಾರ ಸಮುದಾಯದಿಂದ ಕಲಬುರಗಿಯಲ್ಲಿ ವಿಶಿಷ್ಟ ಆಚರಣೆ

ಇಲ್ಲಿ ನೋಡಿ ವಿಡಿಯೋ

"ಇಲ್ಲಿ ನೋಡಿ ವಿಡಿಯೋ"

ಬಂಜಾರ ಜನಾಂಗಕ್ಕೆ ದೀಪಾವಳಿ ಹಬ್ಬ ತುಂಬಾನೇ ದೊಡ್ದು. ತಾಂಡಾಗಳಲ್ಲಿ ದೀಪಾವಳಿಯ 'ಮೇರಾ' ಸಂಭ್ರಮ ನೋಡುವುದೇ ಒಂದು ಸೌಭಾಗ್ಯ.

  • Share this:

    ಕಲಬುರಗಿ: ಸಾಂಪ್ರದಾಯಿಕ ಹೊಸ ಉಡುಪು ತೊಟ್ಟು ಕೈಯಲ್ಲಿ ದೀಪ (Deepavali 202) ಹಿಡಿದು ಯುವತಿಯರು. ಒಂದೆಡೆ ಸೇರಿ ನೃತ್ಯ ಮಾಡಿ ಸಂಭ್ರಮಿಸಿದ ತಾಂಡಾ ಜನರು.. ಇಂತಹದೊಂದು ಮನಮೋಹಕ ದೃಶ್ಯಕ್ಕೆ ಸಾಕ್ಷಿ ಆಗಿರೋದು ಕಲಬುರಗಿ ಜಿಲ್ಲೆ (Kalaburagi News) ಸಣ್ಣೂರು ತಾಂಡಾ. ಎರಡು ವರ್ಷ ಕೋವಿಡ್ ಕಾರಣಕ್ಕೆ ಸೊರಗಿದ್ದ ದೀಪಾವಳಿ ಹಬ್ಬವನ್ನು ‘ಮೇರಾ’ ಹಬ್ಬ ಅನ್ನೋ ಹೆಸರಲ್ಲಿ ಆಚರಿಸಲಾಯ್ತು.


    'ಮೇರಾ' ಸಂಭ್ರಮ ನೋಡುವುದೇ ಒಂದು ಸೌಭಾಗ್ಯ
    ಬಂಜಾರ ಜನಾಂಗಕ್ಕೆ ದೀಪಾವಳಿ ಹಬ್ಬ ತುಂಬಾನೇ ದೊಡ್ದು. ತಾಂಡಾಗಳಲ್ಲಿ ದೀಪಾವಳಿಯ 'ಮೇರಾ' ಸಂಭ್ರಮ ನೋಡುವುದೇ ಒಂದು ಸೌಭಾಗ್ಯ ಅನ್ನೋಥರ ಹಬ್ಬ ಆಚರಿಸಿದ್ರು. ತಾಂಡಾದ ಯುವತಿಯರು ಸಾಂಪ್ರದಾಯಿಕ ಹೊಸ ಉಡುಪು ತೊಟ್ಟು ಸೇವಾಲಾಲ ಮರಿಯಮ್ಮ ದೇವಿಯ ಮಂದಿರಕ್ಕೆ ಆಗಮಿಸಿ ದೀಪ ಬೆಳಗಿಸಿದರು.


    ಇದನ್ನೂ ಓದಿ: Kalaburagi Viral Video: ಜನರಿಂದಲೇ ಸೈನಿಕನ ರಕ್ಷಣೆ! ಅಚ್ಚರಿ ಘಟನೆ ವೈರಲ್


    ತಾಂಡಾದ ಮನೆಗಳಿಗೆ ತೆರಳಿ ದೀಪ ಬೆಳಗಿಸಿದ ಯುವತಿಯರು
    ದುಃಖ ದುಮ್ಮಾನಗಳು ಕಳೆದು ಕತ್ತಲೆಯಿಂದ ಬೆಳಕಿನೆಡೆಗೆ ಜೀವನ ಸಾಗಲಿ ಎನ್ನುವುದೆ ಮೇರಾ ಹಬ್ಬದ ಅರ್ಥ. ಕಲಬುರಗಿಯ ಸಣ್ಣೂರು ತಾಂಡಾದ ಬಂಜಾರ ಸಮುದಾಯ ಈ ಹಬ್ಬವನ್ನ ಚಾಚೂತಪ್ಪದೆ ಆಚರಿಸಿತು. ರಾತ್ರಿಯಿಂದ ಬೆಳಗಿನವರೆಗೆ ತಾಂಡಾದ ಮದುವೆಯಾಗದ ಕನ್ಯೆಯರು ಹೊಸ ಸಾಂಪ್ರದಾಯಿಕ ಉಡುಪು ತೊಟ್ಟು, ಕೈಯಲ್ಲಿ ಹಣತೆ ಹಿಡಿದು ತಾಂಡಾದ ಮನೆಗಳಿಗೆ ತೆರಳಿ ದೀಪ ಬೆಳಗಿಸಿದರು.


    ಇದನ್ನೂ ಓದಿ: Kalaburagi: ಈ ಡಾಕ್ಟರ್ ಫೀಸ್ 10 ರೂಪಾಯಿ ಮಾತ್ರ!


    ಮದುವೆ ನಿಶ್ಚಯವಾದ ಯುವತಿಯರಿಂದಲೂ ವಿಭಿನ್ನ ಆಚರಣೆ
    ಇನ್ನು ಮದುವೆ ನಿಶ್ಚಯವಾದ ಯುವತಿಯರು ಅರಣಿಯಲ್ಲಿ ಹುಲ್ಲಿನಿಂದ ತಯಾರಿಸಿದ ಹಣತೆ ಹಿಡಿದು ಮನೆಮನೆಗೆ ಭೇಟಿ ನೀಡಿದ್ರು. ಆಕಳು, ಎತ್ತುಗಳಿಗೆ ಆರತಿ ಬೆಳಗಿಸಿ ಮನೆಯವರಿಗೆ ಅಕ್ಕಿ ಹಿಟ್ಟು, ಬೆಲ್ಲ ಹಾಗೂ ನೀರು ಅರ್ಪಿಸಿದರು. ನಾನು ಗಂಡನ ಮನೆಗೆ ಹೋಗ್ತಿದ್ದೇನೆ. ನನಗೂ ತಾಂಡಾಕ್ಕೂ ಋಣ ತೀರಿದೆ. ನನ್ನ ಹೆತ್ತವರು ಒಡಹುಟ್ಟಿದವರನ್ನ ಚೆನ್ನಾಗಿ ನೋಡಿಕೊಳ್ಳಿ ಎಂದು ಸಾಂಪ್ರದಾಯಿಕ ಹಾಡು ಹೇಳಿದರು. ಒಟ್ಟಾರೆ ಬಂಜಾರ ಸಮುದಾಯ ಮಾಸಿಹೋಗುತ್ತಿರೋ ಸಂಪ್ರದಾಯಗಳನ್ನ ಕಲಬುರಗಿ ಜನತೆಗೆ ಮತ್ತೆ ಮತ್ತೆ ನೆನಪಿಸಿತು.


    ವರದಿ: ಶ್ರೀಕಾಂತ ಬಿರಾಳ, ಕಲಬುರಗಿ

    Published by:ಗುರುಗಣೇಶ ಡಬ್ಗುಳಿ
    First published: