ಕಲಬುರಗಿ: ಒಂದು ಕಡೆ ಕುಣಿದು ಕುಪ್ಪಳಿಸುತ್ತಿರೋ ಪುರುಷರು, ಇನ್ನೊಂದೆಡೆ ಹಾಡು ಹಾಡುತ್ತಾ ಹೆಜ್ಜೆ ಹಾಕ್ತಿರೋ ಮಹಿಳೆಯರು. ಹೀಗೆ ಎಲ್ಲಿ ನೋಡಿದ್ರೂ ಸಂಭ್ರಮವೋ ಸಂಭ್ರಮ! ಈ ಗೌಜಿ ಗಮ್ಮತ್ತಿನ (Banjara Community Festival) ಹಿಂದಿದೆ ವಿಶಿಷ್ಟ ಸಂಪ್ರದಾಯದ ಕಥೆ!
ದುಂಡ್ ಆಚರಣೆ
ಯೆಸ್, ಹೋಳಿ ಹುಣ್ಣಿಮೆಯನ್ನು ಎಲ್ಲರೂ ಒಂದು ದಿನ ಸಂಭ್ರಮಿಸಿದ್ರೆ ಕಲಬುರಗಿ ಜಿಲ್ಲೆಯ ಸಣ್ಣೂರ ತಾಂಡಾದ ನಿವಾಸಿಗಳು ತಿಂಗಳುಗಳ ಕಾಲ ಸಂಭ್ರಮದಿಂದ ವಿಶೇಷವಾಗಿ ಆಚರಿಸ್ತಾರೆ. ಈ ಆಚರಣೆಯ ವಿಶೇಷವೆಂದ್ರೆ, ಹುಣ್ಣಿಮೆ ದಿನದಂದು ಯಾರ ಮನೆಯಲ್ಲಿ ಗಂಡು ಮಗು ಜನಿಸುತ್ತದೆಯೋ ಅವರ ಮನೆಯ ಎದುರು ಒಂದು ತಿಂಗಳುಗಳ ಕಾಲ ದುಂಡ್ ಹೆಸರಿನಲ್ಲಿ ಹೋಳಿ ಹುಣ್ಣಿಮೆ ಆಚರಣೆ ಮಾಡಲಾಗುತ್ತದೆ.
ಅತ್ತಿಗೆ, ಮೈದುನರ ಭಾಂದವ್ಯ
ಇನ್ನೊಂದೆಡೆ ದುಂಡ್ ಆಚರಣೆ ಅತ್ತಿಗೆ ಹಾಗೂ ಮೈದುನ ಬಾಂಧವ್ಯ ಬೆಸೆಯುವಂತಹ ವಿಶಿಷ್ಟ ಆಚರಣೆ ಕೂಡಾ ಆಗಿದೆ. ಅತ್ತಿಗೆ ಕೈಯಲ್ಲಿ ಗೋಧಿ ಹಿಟ್ಟಿನಿಂದ ತಯಾರಿಸಲಾದ ಲಾಡುವನ್ನ ಬಿಗಿಯಾಗಿ ಹಿಡಿದಿಟ್ಟುಕೊಳ್ತಾಳೆ. ಮೈದುನ ಅದನ್ನ ಬಿಡಿಸಿಕೊಳ್ಳಬೇಕು. ಒಂದು ವೇಳೆ ಬಿಡಿಸಿಕೊಳ್ಳದಿದ್ದರೆ ನೆಲದ ಮೇಲೆ ಕುಳಿತು ಮುಂದೆ ಸಾಗಬೇಕು. ಇಲ್ಲವಾದರೆ ಕೊಬ್ಬರಿ, ಬೆಲ್ಲ ಹಾಗೂ ಹಣ ಕಾಣಿಕೆಯಾಗಿ ನೀಡಬೇಕು ಎಂಬುದು ಹಿಂದಿನ ಕಾಲದಿಂದಲೂ ನಡೆದುಕೊಂಡು ಬಂದಿರುವ ಪದ್ದತಿ.
ಇದನ್ನೂ ಓದಿ: Kalaburagi: ಮೃತಪಟ್ಟವರಿಗೆ ಗೌರವಯುತ ಅಂತ್ಯಸಂಸ್ಕಾರ, ಜಾತಿ-ಧರ್ಮದ ಹಂಗಿಲ್ಲದೇ ಅನಾಥ ಶವಗಳಿಗೆ ಮುಕ್ತಿ ಕೊಡುವ ಯುವಕರು!
ಒಗ್ಗಟ್ಟಿನ ಮಂತ್ರ
ಹೀಗೆ ಇಡೀ ದುಂಡ್ ಆಚರಣೆಯಲ್ಲಿ ಗಲ್ಲಿ ತುಂಬಾ ಹಬ್ಬದ ಸಂಭ್ರಮದ ಜೊತೆಗೆ ಒಗ್ಗಟ್ಟಿನ ಮಂತ್ರವನ್ನ ಬಂಜಾರ ಸಮುದಾಯವ ಸಾರುತ್ತವೆ. ಹೀಗೆ ಕುಣಿದು ಕುಪ್ಪಳಿಸುತ್ತಾ, ಹಾಡು ಹಾಡುತ್ತಾ ನೆರೆದವರೆಲ್ಲರೂ ಸಂಭ್ರಮಿಸುತ್ತಾರೆ.
ಇದನ್ನೂ ಓದಿ: Kalaburagi: ದೇವರ ಫೋಟೋಗಳಿಗೆ ವಿಶಿಷ್ಟ ಮುಕ್ತಿ, ಕಣ ಕಣದಲ್ಲೂ ಶಿವ ಎನ್ನುತ್ತಿರುವ ಯುವಕರು!
ಏನೇ ವೈಮನಸ್ಸುಗಳಿದ್ರೂ ಅದೆಲ್ಲವನ್ನೂ ಮರೆತು ಎಂಜಾಯ್ ಮಾಡ್ತಾರೆ. ಡಿಜಿಟಲ್ ಯುಗದಲ್ಲೂ ಇಂತಹ ಆಚರಣೆ ನಡೆಸಿಕೊಂಡು ಬರುತ್ತಿರುವುದು ಬಂಜಾರ ಸಮುದಾಯದ ಹೆಗ್ಗಳಿಕೆಯೇ ಆಗಿದೆ.
ವರದಿ: ಶ್ರೀಕಾಂತ್ ಬಿರಾಳ, ನ್ಯೂಸ್18 ಕನ್ನಡ ಡಿಜಿಟಲ್, ಕಲಬುರಗಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ